ಆಯ್ದ ಪುರಾಣ ಕಥೆಗಳು

Author : ವಿ.ಗಣೇಶ್‌

Pages 184

₹ 200.00




Year of Publication: 2023
Published by: ನಿವೇದಿತ ಪ್ರಕಾಶನ
Address: ನಂ.3437 , 1ನೇ ಮಹಡಿ, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತೀ ನಗರ, ಬನಶಂಕರಿ 2ನೇ ಹಂತ, ಬೆಂಗಳೂರು-28
Phone: 9448733323

Synopsys

‘ಆಯ್ದ ಪುರಾಣ ಕಥೆಗಳು’ ವಿ.ಗಣೇಶ್‌ ಅವರ ರಚನೆಯ ಮಕ್ಕಳ ಕಥೆಯಾಗಿದೆ. "ಭಾಗವತದ ಆಯ್ದ ಕತೆಗಳ"ನ್ನು ಓದುತ್ತ ಕುಳಿತಾಗ ಇಷ್ಟು ಬೇಗ ಓದಿ ಮುಗಿಸುತ್ತೇನೆ ಎಂದು ನಾನು ಅಂದುಕೊಂಡಿರಲಿಲ್ಲ. ಪುಸ್ತಕ ಕೆಳಗಿಳಿಸದಂತೆ ಓದಿಸಿಕೊಂಡು ಹೋಗುವ ಮಾಂತ್ರಿಕತೆ ಈ ಬರಹಕ್ಕಿದ್ದುದರಿಂದ ಅದು ಸಾಧ್ಯವಾಯಿತು. ಮೊದಲಿಗೆ ಸಾಹಿತ್ಯಲೋಕಕ್ಕೆ ಲೇಖಕರು ನೀಡಿದ, ನೀಡುತ್ತಿರುವ ಅರ್ಥಪೂರ್ಣ ವೈವಿಧ್ಯಮಯ ಸಾಹಿತ್ಯದ ಕೊಡುಗೆಗಳಿಗಾಗಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಆಕಾಶದಲ್ಲಿ ಅಸಂಖ್ಯಾತ ನಕ್ಷತ್ರಗಳಿದ್ದಂತೆ ’ಭಾಗವತ’ ಇರಲಾಗಿ ಮೊದಲಿಗೆ ಅದರಿಂದ ಯಾವುದನ್ನು ಆರಿಸಿಕೊಳ್ಳುವುದು ಯಾವುದನ್ನು ಬಿಡುವುದು ಎಂಬ ನಿರ್ಧಾರ ಬಲು ಕಠಿಣ ಸಂಗತಿ. ಈ ಭಾಗವತವನ್ನು ಒಮ್ಮೆಗೆ ಎಲ್ಲರೂ ಓದಿ ಅರ್ಥಮಾಡಿಕೊಂಡು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಅರಿತ ಶ್ರೀಯುತ ಗಣೇಶ್ ರವರು "ಭಾಗವತದ ಆಯ್ದ ಕಥೆಗಳು" ಎಂಬ ಕೃತಿಯನ್ನು ಬಹಳ ಸರಳವಾಗಿ, ಸುಂದರವಾಗಿ, ಪಾಮರರಿಗೂ-ಪಂಡಿತರೂ ಅರ್ಥಮಾಡಿ ಕೊಳ್ಳುವಂತೆ ಬರೆದಿದ್ದಾರೆ. ಚಂದದ ನೀತಿಕಥೆ ಹೇಳಿಕೊಡುವ ಹರಿಭಕ್ತಿಯ ಹಿರಿಮೆ ತೆರೆದುತೋರಿಸುವ ಉತ್ತಮ ಪುರಾಣ ಕಥೆಗಳನ್ನು ಓದುಗರಿಗೆ ತಲುಪಿಸಿದ್ದಾರೆ. ಒಂದೊಂದು ಕತೆಯನ್ನು ಓದಿದಾಗಲೂ ಒಂದೊಂದು ರೀತಿಯ ನೀತಿ ಓದುಗನಿಗೆ ತಲುಪುವಂತೆ ಬರೆದಿದ್ದಾರೆ. ಅವರದೇ ಚಿಂತನೆಗಳಿಂದ ಉದ್ಭವಿಸಿದ ಅನುಭವವನ್ನು ಮತ್ತಷ್ಟು ಮಹತ್ವಗಳಿಸುವಂತೆ ಮಾಡಿದ್ದಾರೆ.- ಶ್ರೀನಿವಾಸ ಕೊಂಡಂತಾಯ

About the Author

ವಿ.ಗಣೇಶ್‌

ವಿ.ಗಣೇಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂ.ಎಸ್.ಸಿ, ಎಂ.ಎ., ಬಿ.ಎಡ್. ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರೌಢಶಾಲಾ ಅಧ್ಯಾಪಕರಾಗಿ, ಗಣಿತ ಉಪನ್ಯಾಸಕರಾಗಿ, ಇಂಗ್ಲೀಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಬಿ.ಎಡ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books