13 ದಿನಗಳ ಪಲಾಯನ

Author : ವಿಶ್ವಾಸ್ ಭಾರದ್ವಾಜ್

Pages 158

₹ 150.00




Year of Publication: 2021
Published by: ವಂಶಿ ಪಬ್ಲಿಕೇಷನ್ಸ್‌
Address: ನೆಲಮಂಗಲ, ಬೆಂಗಳೂರು 562123
Phone: 9916595916

Synopsys

ವಿಶ್ವಾಸ್ ಭಾರದ್ವಾಜ್ ಅವರ 13 ದಿನಗಳ ಪಲಾಯನ ಕೃತಿಯು ಕಥೆಗಳ ಸಂಕಲನವಾಗಿದೆ. ಜರ್ಮನಿಯ ಜೈಲಿನಿಂದ ತಪ್ಪಿಸಿಕೊಂಡ ಖೈದಿಯೊಬ್ಬನ ಕತೆಯನ್ನು ಈ ಕೃತಿಯು ಒಳಗೊಂಡಿದೆ. ಒಬ್ಬ ಯೋಧ ಶಿಕ್ಷಾ ಶಿಬಿರದಿಂದ ತಪ್ಪಿಸಿಕೊಳ್ಳುವ ಸಾಹಸದ ಸರಳ ನಿರೂಪಣೆಯು ಇಲ್ಲಿದೆ. ಜರ್ಮನಿಯ ಕ್ರೆಫೀಲ್ಡ್ ಮತ್ತು ಸ್ಟಾರ್ಮ್ ಸ್ಟೆಡ್ ಶಿಬಿರಗಳ ಸ್ಥಿತಿಗತಿಗಳನ್ನು ಇಂಚಿಂಚಾಗಿ ಬಿಡಿಸುವ ಕೌಂಟರ್, ಕೊನೆಗೆ ಕ್ಯಾಂಪಿನಿಂದ ಪಲಾಯನವಾನವಾಗಿ ನೂರಾ ಎಪ್ಪತ್ತು ಮೈಲಿ ದೂರದ ಡಚ್ ಗಡಿರೇಖೆ ದಾಟಿ ಹಾಲೆಂಡ್ ತಲುಪುವ 13 ದಿನಗಳ ರೋಚಕ ಕತಾನಕವನ್ನು ತಮಗೆ ತಿಳಿದಂತೆ ಲೇಖಕ ನಿರೂಪಿಸಿದ್ದಾರೆ. ಶಿಕ್ಷಾ ಶಿಬಿರ ಮತ್ತು ಗಡಿಯ ನಡುವಲ್ಲಿ ಎದುರಾಗಿರುವ ಹಾಂಟೆ, ವೆಸರ್‍, ಏಮ್ಸ್ ನದಿಗಳ ಪಾರು ಮಾಡುವ ಪ್ಯಯತ್ನ , ಜೊತೆಗಾರರಾಗಿದ್ದ ಫಾಕ್ಸ್ ಮತ್ತು ಬ್ಲಾಂಖ್ ನೊಂದಿಗಿನ ಸಹಯಾನ, ಕತ್ತಲ ರಾತ್ರಿಗಳ ಮೆರವಣಿಗೆ , ಜರ್ಮನಿಯ ಕಾಡುಗಳ ವರ್ಣನೆ , ಹಳ್ಳಿಗಳ ಮತ್ತು ಜೋಳದ ಹೊಲಗಳ ಸೌಂದರ್ಯ ವಿವರಣೆ, ಎದುರಾದ ಅಪಾಯಗಳು, ಬೋಚ್ ಗಳ ಸರ್ಪಗಾಲವನ್ನು ಭೇದಿಸಿ ಗುರಿ ತಲುಪಿದ ಯಶೋಗಾಥೆ ಈ ಪುಸ್ತಕದಲ್ಲಿ ಅತ್ಯಂತ ಕೌತುಕಮಯವಾಗಿ ನಿರೂಪಿಸಲ್ಪಟ್ಟಿದೆ. ಯಾವುದೇ ರಾಷ್ಟ್ರದ ಸೈನಿಕನೂ ತನ್ನ ರಾಷ್ಟ್ರದ ಸೈನಿಕನೂ ತನ್ನ ರಾಷ್ಟ್ರದ ಘನತೆಯ ರಕ್ಷಣೆಗಾಗಿ ಕರ್ತವ್ಯನಿರತನಾಗಿರುತ್ತಾನೆ. ಯಾರೇ ಶತ್ರುದಳದ ಸೈನಿಕರು ಯುದ್ಧಕೈದಿಯಾಗಿ ಸೆರೆಸಿಕ್ಕರೆ ಅವರ ಕುರಿತಾಗಿ ಸಹಾನೂಭೂತಿ ಹೊಂದಬೇಕು. ಅವರು ಅಪರಾಧಿಗಳಾಗಿರುವುದಿಲ್ಲ ಅಥವಾ ತಾವು ಸಿಕ್ಕಿಬಿದ್ದ ರಾಷ್ಟ್ರದ ನೆಲದ ಕಾನೂನಿಗೆ ದ್ರೋಹ ಬಗೆದಿರುವುದಿಲ್ಲ. ಹೀಗಾಗಿ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು” ಎನ್ನುವ ಆಶಯವು ಈ ಪುಸ್ತಕದ ಹಿಂದಿದೆ.

About the Author

ವಿಶ್ವಾಸ್ ಭಾರದ್ವಾಜ್

ವಿಶ್ವಾಸ್ ಭಾರದ್ವಾಜ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಕನ್ನಡ ಪತ್ರಿಕೋದ್ಯಮ, ದೃಶ್ಯ ಮಾಧ್ಯಮ ಹಾಗೂ ಡಿಜಿಟೆಲ್‌ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವವಿದೆ. ಗೋಪಾಲಕೃಷ್ಣ ಅಡಿಗರ ಪದ್ಯ-ಸಾಹಿತ್ಯದಲ್ಲಿ ಒಲವು.  ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ನ ಪದವೀಧರರು. ಮೈಸೂರಿನ ಮಾನಸ ಗಂಗೋತ್ರಿಯ ಮುಕ್ತ ವಿವಿಯ ಸಮೂಹಃ ಸಂಪನ್ಮೂಲ ಹಾಗೂ ಪತ್ರಿಕೋದ್ಯಮದ ಸ್ನಾತಕೋತ್ತರ ಪದವೀಧರರು.   ಕೃತಿಗಳು: ಕಾಲು ಹಾದಿ (ಹನಿ ಕತಾ ಸಂಕಲನ), ನಿಮಗೆ ನೀವೇ ದಾರಿದೀಪ (ಅನುವಾದ)  ...

READ MORE

Related Books