ನಕ್ಷತ್ರ ಕಡ್ಡಿ

Author : ಸವಿರಾಜ್ ಆನಂದೂರು

Pages 200

₹ 59.00
Year of Publication: 2020
Published by: ಮೈಲ್ಯಾಂಗ್‌ ಬುಕ್ಸ್ ಡಿಜಿಟಲ್ ಪ್ರೈ.ಲಿ
Address: ವೆವರ್ಕ್, ಸಲಾರ್ಪುರಿಯಾ ಸಿಂಬಿಯಾಸಿಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು -76
Phone: 8296332054

Synopsys

ನಕ್ಷತ್ರ ಕಡ್ಡಿ-ಸವಿರಾಜ ಅನಂದೂರು ಅವರ ಕಥೆಗಳ ಸಂಕಲನ. ಕತೆಗಾರರು ತಮ್ಮ ಬದುಕಿನ ಬೇರೆ ಬೇರೆ ಘಟ್ಟದಲ್ಲಿ ಬರೆದ ನೂರಾರು ಪುಟ್ಟ ಪುಟ್ಟ ಕಥೆಗಳನ್ನು ಇಲ್ಲಿ ಇ ಪುಸ್ತಕವಾಗಿ ಸಂಕಲಿಸಿದ್ದಾರೆ. ಇಲ್ಲಿಯ ನ್ಯಾನೋ ಕತೆಗಳು ಬಯಲಾಟದ ಕಲಾವಿದರು ಯಥೇಚ್ಛವಾಗಿ ಕಟ್ಟಿಕೊಟ್ಟ ಕಥೆ-ಉಪಕಥೆಗಳು, ಝೆನ್, ಸೂಫಿ ಸಾಹಿತ್ಯ, ಬದುಕಿನ ಅನುಭವಗಳು, ಉದ್ಯೋಗದ ಏಕತಾನತೆಯ ಪ್ರಭಾವ ಬೀರಿದ್ದರು ಸಮಕಾಲೀನರ ಬದುಕನ್ನು ಕಟ್ಟಿಕೊಡುವಲ್ಲಿ ಈ ಕೃತಿ ಯಶಸ್ವಿಯಾಗಿದೆ.

About the Author

ಸವಿರಾಜ್ ಆನಂದೂರು

ಲೇಖಕ ಸವಿರಾಜ್ ಆನಂದೂರು ಹುಟ್ಟಿದ್ದು ಆಗುಂಬೆ ಸಮೀಪದ ಆನಂದೂರಿನಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಶೃಂಗೇರಿ, ಪದವಿಯನ್ನು ಶಿವಮೊಗ್ಗದಲ್ಲಿ ಪೂರೈಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವೀಧರರು. ಹವ್ಯಾಸಿ ತಾಳಮದ್ದಳೆ ಅರ್ಥಧಾರಿ. ನಾಟಕಗಳನ್ನು ರಚಿಸಿ, ನಿರ್ದೇಶಿಸಿದ ಅನುಭವವಿದ್ದು ಕಾವ್ಯ ಮತ್ತು ಯಕ್ಷಗಾನ ಅವರ ಹವ್ಯಾಸಗಳು. ‘ನಕ್ಷತ್ರ ಕಡ್ಡಿ’ ಅವರ ಚೊಚ್ಚಲ ಕೃತಿ. ...

READ MORE

Related Books