ವೃತ್ತಿಯಿಂದ ವೈದ್ಯರಾದ ಅಜಿತ್ ಹರೀಶಿ ಅವರು ಮಾನವೀಯ ಸೆಲೆಗಳನ್ನು, ತಮ್ಮದೇ ಅಸ್ತಿತ್ವಕ್ಕೆ ಹೋರಾಡುವ ಜೀವಂತಿಕೆಯನ್ನು ‘ ಮೂಚಿಮ್ಮ’ ಈ ಕತಾ ಸಂಕಲನದ ಪಾತ್ರಗಳ ಮೂಲಕ ಅಭಿವ್ಯಕ್ತಿಸಿದ್ದಾರೆ. ಕೃತಿಗೆ ಆಶಯ ನುಡಿ ಬರೆದ ಲೇಖಕ ಗೋಪಾಲಕೃಷ್ಣ ಕುಂಟಿನಿ, “‘ಆವಿ’ ಕಥೆಯ ಶರತ್ ಅಥವಾ ದಿಶಾಗಿಂತ ಸುನೀಲನ ಮೌನ ಹೆಚ್ಚು ಆಪ್ಯಾಯಮಾನವಾಗುತ್ತದೆ. ‘ಮೂಚಿಮ್ಮ’ ಕಥೆಯಲ್ಲಿ ಬಾಂದು ಕಲ್ಲಿನ ಆ ಕಡೆ ಮತ್ತು ಈ ಕಡೆ ಎರಡು ಪುಟ್ಟ ಪುಟ್ಟ ಔಷಧೀಯ ಗಿಡಗಳನ್ನು ಕೈಯಾರೆ ನೆಟ್ಟ ಮೂಚಿಮ್ಮನ ಮೌನ ಹರಿದಾಡುತ್ತದೆ. “ವಿಲಿಪ್ತ”ದ ಗುರೂಜಿ ವರಲೆ ತಿಂದ ಕಾಷ್ಠವಾಗಿ ಆತನ ಮೌನವೇ ಆತನನ್ನು ಒಳಗೊಳಗೆ ತಿಂದು ಮುಗಿಸುತ್ತದೆ. “ದಹನ”ದ ಕನಸಿನ ಸ್ವಾಮಿ ಗಂಗಾಧರನ ಕನಸುಗಳು ಮತ್ತೊಂದು ಮೌನವನ್ನು ಓದುಗನಿಗೆ ಅರ್ಥಪೂರ್ಣವಾಗಿ ದಾಟಿಸುತ್ತದೆ.”ಪತನ”ದ ವಿನಯನ ಬರಹಗಳಲ್ಲಿ ಮೌನವೇ ಕಥೆಯ ಹೆಚ್ಚುಗಾರಿಕೆಯನ್ನು ತೋರಿಸುತ್ತದೆ.”ಜನಾರ್ದನ” ಕಥೆಯಲ್ಲಿ ಜನಾರ್ದನ ಭಟ್ಟರ ಮೌನ ಪುಂಡ ಮಗನನ್ನು ಪರಿವರ್ತಿಸುತ್ತದೆ. “ಬೆಸುಗೆ”ಯ ಸುಮಾ, ಸಿರಿ ಮತ್ತು ಪ್ರಶಾಂತರ ನಡುವಿನ ಪ್ರೀತಿಯ ಸ್ಪರ್ಶದಲ್ಲಿ ತಾನೇ ಮೌನಕ್ಕೆ ಸರಿದ ರೀತಿ ಆಪ್ಯಾಯಮಾನವೆನಿಸುತ್ತದೆ. “ತಾನೊಂದು ಬಗೆದರೆ” ಕಥೆಯಲ್ಲಿ ಸುದೀರ್ಘ ವಿವರಗಳ ನಡುವೆಯೂ ವೆಂಕಟ ತನ್ನ ನಿರೂಪಣೆಯಲ್ಲಿ ಕೊಟ್ಟ ಅಖಂಡ ಮೌನವೊಂದು ನಮ್ಮನ್ನು ದಾಟಿ ಹೋದ ಭಾಸವಾಗುತ್ತದೆ. “ಪರಿವರ್ತನೆ” ಕಥೆಯ ಅನಂತ ಹೆಗಡೇರು ಕಾಲದ ಓಟದಲ್ಲಿ ತಾನೂ ಭಾಗಿಯಾಗಲಾರದೇ ಮೌನ ಸಾಕ್ಷಿಯಾಗಿ ಕೊನೆಗೂ “ಅಪೀ ನಿಧಾನ ಓಡೇ” ಎಂದು ಹೇಳುವಲ್ಲಿಗೆ ಮನಸ್ಸು ಮುದ್ದೆಯಾಗುತ್ತದೆ. “ನಟ’’ ಕಥೆಯಲ್ಲಿ ನಟರಾಜನ ಅಳು ಅವನ ಮನಸ್ಸಿನ ಮೌನದ ಹರಿವಿನಂತೆ ತಾಕುತ್ತದೆ” ಎಂದು ಕತೆಯ ಜೀವಾಳವನ್ನು ತೆರೆದಿಟ್ಟಿದ್ದಾರೆ.
ಸೊರಬ ತಾಲೂಕಿನವರಾದ ಅಜಿತ್ ಹೆಗಡೆ ಅವರು ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಪದವಿ ಪಡೆದಿರುವ ಅವರು ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಎಂ.ಡಿ. ಪಡೆದಿದ್ದಾರೆ. ವೈದ್ಯರಾಗಿ ಸೊರಬದಲ್ಲಿ ನೆಲೆಸಿದ್ದಾರೆ. ವೃತ್ತಿಯಿಂದ ವೈದ್ಯರಾಗಿರುವ ಅಜಿತ್ ಹೆಗಡೆ ಅವರು ಪ್ರವೃತ್ತಿಯಿಂದ ಬರಹಗಾರ. ಪರಿಧಾವಿ ಎಂಬ ಕಥಾಸಂಕಲನ ಪ್ರಕಟಿಸಿದ್ದಾರೆ. ಮತ್ತೊಂದು ಸಂಕಲನ ’ಕಾಮೋಲ’ ಅಚ್ಚಿಗೆ ಹೋಗಿದೆ. ಬಿಳಿಮಲ್ಲಿಗೆಯ ಬಾವುಟ ಮತ್ತು ಸೂರು ಸೆರೆಹಿಡಿಯದ ಹನಿಗಳು ಅವರ ಪ್ರಕಟಿತ ಕವನ ಸಂಕಲನಗಳು. ವೈದ್ಯಕೀಯ ಲೇಖನಗಳ ಸಂಗ್ರಹ 'ಆರೋಗ್ಯದ ಅರಿವು' ಕೃತಿಯು ಕರಡು ತಿದ್ದುಪಡಿ ಹಂತದಲ್ಲಿದೆ. ನಾಡಿನ ಹಲವು ಪತ್ರಿಕೆಗಳಲ್ಲಿ ಕಥೆ, ಕವನ ಮತ್ತು ವೈದ್ಯಕೀಯ ಲೇಖನಗಳು ಪ್ರಕಟವಾಗಿವೆ. ಪ್ರತಿಲಿಪಿ ಕಥಾಸ್ಪರ್ಧೆಯಲ್ಲಿ ಅವರ ...
READ MORE