ದಶಕದ ಕತೆಗಳು

Author : ಟಿ.ಎಂ. ರಮೇಶ

Pages 298

₹ 280.00
Year of Publication: 2021
Published by: ಮಂಗಳ ಪ್ರಕಾಶನ
Address: # 91,, ಬಸಪ್ಪ ಬಡಾವಣೆ, ಪಟ್ಟಣಗೆರೆ, ರಾಜರಾಜೇಶ್ವರಿನಗರ, ಬೆಂಗಳೂರು-560098
Phone: 9632587426

Synopsys

ಲೇಖಕ ಟಿ.ಎಂ. ರಮೇಶ್ ಅವರು ಬರೆದ ಕಥಾ ಸಂಕಲನ-ದಶಕದ ಕಥೆಗಳು. 2010ರಿಂದ 2020ರ ಅವಧಿಯಲ್ಲಿ ಅವರು ಬರೆದ  21 ಕಥೆಗಳನ್ನು ಇಲ್ಲಿ ಸಂಕಲಿಸಿದೆ. ಈ ಎಲ್ಲ ಕಥೆಗಳು ‘ಬಹುಮಾನಿತ’ ಎಂದು ಲೇಖಕರು ಹೇಳಿದ್ದಾರೆ. ಲೇಖಕರ ಇದು ಐದನೇ ಕಥೆ ಸಂಕಲನ. ಪ್ರಸಿದ್ಧ ಕತೆಗಾರ ಶ್ರೀಧರ ಬಳೆಗಾರರು ಮುನ್ನುಡಿ ಬರೆದು ಕಥೆಗಳ ರಚನೆ, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳನ್ನು ಇಲ್ಲಿಯ ಕಥೆಗಳು ಒಳಗೊಂಡಿದ್ದರ ಕುರಿತು ಪ್ರಶಂಸಿಸಿದ್ದಾರೆ. 

 

About the Author

ಟಿ.ಎಂ. ರಮೇಶ

ಲೇಖಕ ಟಿ.ಎಂ. ರಮೇಶ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ನಿವೃತ್ತ ಬ್ಯಾಂಕ್ ಅಧಿಕಾರಿ. ಕಥೆ, ಕವಿತೆ ಸಾಹಿತ್ಯದ ಇತರ ಪ್ರಕಾರಗಳಲ್ಲೂ ಆಸಕ್ತಿ. ಇವರ ಕವಿತೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ,ಹಲವು ಕವಿತೆಗಳ ಬಹುಮಾನವೂ ಪಡೆದಿವೆ. ಕೃತಿಗಳು: ದಶಕದ ಕಥೆಗಳು (ಕಥಾ ಸಂಕಲನ-2021), ಇಂಡಾ-ಕಥಾ ಸಂಕಲನ,  ದೃಷ್ಟಿಹರಿದಷ್ಟೆದೂರ (ಕಥಾಸಂಕಲನ-2005), ಕಿಚ್ಚು ಮತ್ತು ಇತರ ಕತೆಗಳು (ಕಥಾಸಂಕಲನ) , ಹುತ್ತಗಟ್ಟಿದೆ ಕವಿತೆ (ಕವನಸಂಕಲನ-2010), ಗೋಡೆ ಕಿಂಡಿ (ಕಥಾಸಂಕಲನ-2014) ಯುಗ್ಮ-ಎರಡು ಕಾದಂಬರಿಗಳು (2018), ಮೊದಲ ಓದು (ವಿಮರ್ಶಾಬರಹ-2020),  ...

READ MORE

Related Books