ರವೀಂದ್ರರ ಕತೆಗಳು

Author : ಗೋವಿಂದ ವೆಂಕಟೇಶ ಚುಳಕಿ



Published by: ಸಮಾಜ ಪ್ರಕಾಶನ
Address: ಸಮಾಜ ಪುಸ್ತಕಾಲಯ, ಶಿವಾಜಿ ರೋಡ್, ಧಾರವಾಡ
Phone: 8762102715

Synopsys

‘ರವೀಂದ್ರರ ಕತೆಗಳು’ ಗೋವಿಂದ ವೆಂಕಟೇಶ ಚುಳಕಿ ಅವರ ಅನುವಾದಿತ ದೃಷ್ಟಾಂತ ಕಥಾಸಂಕಲನವಾಗಿದೆ. ರವೀಂದ್ರನಾಥ ಟಾಗೋರ ಅವರ ಮೂಲ ಕೃತಿಯಾಗಿದೆ. ಈ `ರವೀಂದ್ರರ ಕತೆಗಳಲ್ಲಿ ಸಂಗ್ರಹಿತವಾದ ಕತೆಗಳು ಸ್ವರ್ಗಿಯ ರವೀಂದ್ರನಾಥರು ರಚಿಸಿದ ಕಥೆಗಳ ಕಥೆಗಳು ಎಂಬ ಪುಸ್ತಕದಲ್ಲಿಯವು. ಈ ಕಥೆಗಳು ಶಿಕ್ಷಣ ಹಾಗು ರಜಪೂತ, ಬೌದ್ಧ ಮತ್ತು ಮರಾಠಾ ಕಾಲದ ಐತಿಹಾಸಿಕ, ತ್ಯಾಗಮಯ ಆದರ್ಶ ಭಾವದಿಂದೊಡಗೂಡಿದ ಕಥಾನಕದಿಂದ ತುಂಬಿವೆ. ಇದರಲ್ಲಿ ಅಂತಹ 30 ಕಥೆಗಳು ಬಂದಿವೆ. ಇದೀಗ ಅವುಗಳ ಸ್ವತಂತ್ರ ಭಾವಾನುವಾದವನ್ನು ಮಾಡಿ, ಕನ್ನಡದಲ್ಲಿ ಪ್ರಕಟಗೊಳಿಸಿದ್ದೇನೆ. ಈ ಕಥೆಗಳು ಮನೋರಂಜಕವೂ, ಜ್ಞಾನದಾಯಕವೂ, ಆಗಿರುವುದರಿಂದ ಬಾಲ ಬಾಲಕಿಯರಿಗೂ, ಸಾಮಾನ್ಯ ಜನರಿಗೂ ಮೆಚ್ಚುಗೆಯಾಗುವದರಲ್ಲಿ ಸಂಶಯವಿಲ್ಲ. ರವೀಂದ್ರರ ಈ ಕಥೆಗಳು ಬಂಗಾಲಿ ಭಾಷೆಯಿಂದ ಅನುವಾದಿಸಲ್ಪಟ್ಟಿಲ್ಲ ಎಂಬುವುದನ್ನು ಇಲ್ಲಿ ಹೇಳಲಾಗಿದೆ.

About the Author

ಗೋವಿಂದ ವೆಂಕಟೇಶ ಚುಳಕಿ

ಗೋವಿಂದ ವೆಂಕಟೇಶ ಚುಳಕಿ ಮೂಲತಃ ಬೆಳಗಾವಿ ಜಿಲ್ಲೆಯ ಚುಳಕಿಯವರು. 1902 ನವೆಂಬರ್ 22ರಂದು ಜನನ. ತಂದೆ ವೆಂಕಟೇಶ ತಾಯಿ ಗೋದೂಬಾಯಿ. ಕರ್ನಾಟಕ ವಿದ್ಯಾವರ್ಧಕ ಸಂಘದ ಸದಸ್ಯನಾಗಿ ಕಾರ್ಯನಿರ್ವಹಿಸಿರುವ ಅವರು ಮಿಂಚಿನಬಳಿ ಗ್ರಂಥ, ಗತ ಇಳಿ (ಸ ಕ), ಉತ್ಸರ್ಗ, ಜಲವಂತಿ (ಅನು), ವಾರದ ಮಲ್ಲಪ್ಪನವರು, ವಿವೇಕಾನಂದ (ಬಾ), ಲಕ್ಷ್ಮೀಶನ ರಾಮಾಯಣ, ಜೈಮಿನಿ ಭಾರತ (ಸ 0) ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿರುತ್ತಾರೆ.  ...

READ MORE

Related Books