ನೀಲಿ ಮತ್ತು ಸೇಬು

Author : ಸುಧಾ ಆಡುಕಳ

Pages 156

₹ 180.00
Year of Publication: 2023
Published by: ವೀರಲೋಕ ಬುಕ್ಸ್
Address: ವೀರಲೋಕ ಬುಕ್ಸ್‌ ಪ್ರೈವೇಟ್‌ ಲಿಮಿಟೆಡ್‌, 207, 2ನೇ ಮಹಡಿ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018
Phone: +91 7022122121

Synopsys

'ನೀಲಿ ಮತ್ತು ಸೇಬು' ಸುಧಾ ಆಡುಕಳ ಅವರ ಕತಾಸಂಕಲನ. ಹೆಣ್ಣು ಮತ್ತು ಮಣ್ಣಿಗೆ ಬಿಡಿಸಲಾರದ ಬಂಧ. ಹಾಗಾಗಿಯೇ ಜಗದ ಹೆಣ್ಣುಗಳ ಕಥೆಯನ್ನು ಹೆಣೆದರೆ ಅದು ಈ ನೆಲದ ಕಥೆಯೂ ಆಗಿರುತ್ತದೆ. ಹೆಣ್ಣ ಕಣ್ಣೋಟದಲ್ಲಿ ದಕ್ಕುವ ಸುತ್ತಲ ಜಗತ್ತಿನ ಚಿತ್ರಣವೇ ಬೇರೆ. ಅವಳ ಪುಟ್ಟ, ಪುಟ್ಟ ಆಸೆಗಳು, ಆಳವಾದ ಮನೋಬೇಗುದಿಗಳು, ಚಿವುಟಿದಷ್ಟೂ ಚಿಗುರುವ ಕಸುವು, ಬರಡು ನೆಲದಲ್ಲಿಯೂ ಹೂವರಳಿಸುವ ಕನಸು ಎಲ್ಲವೂ ಇಲ್ಲಿ ಕಥೆಗಳಾಗಿ ಹರಡಿಕೊಂಡಿವೆ. ಬದುಕಿನ ಕುರಿತಾದ ವೈಜ್ಞಾನಿಕ ಬದ್ಧತೆ, ರೂಪಕಗಳ ಮೂಲಕ ಬದುಕನ್ನು ಅರ್ಥೈಸುವ ಕವಿಯ ಆದರ್ಶಗಳೆರಡೂ ಮೇಳೈಸಿ ಸೃಷ್ಠಿಯಾಗುವ ನಾಟಕೀಯ ಸನ್ನಿವೇಶಗಳು ಇಲ್ಲಿನ ಕಥೆಗಳ ವಿಶೇಷತೆಗಳಾಗಿವೆ. ಗ್ರಾಮ್ಯ ಬದುಕಿನ ಸೊಗಡು, ಮನೋಲೋಕಗಳ ತಾಕಲಾಟ ಮತ್ತು ಉತ್ತರಕನ್ನಡ ಭಾಷೆಯ ದೇಸಿತನ ಕಥಾಸಂಕಲನದುದ್ದಕ್ಕೂ ಮೇಳೈಸಿವೆ.

About the Author

ಸುಧಾ ಆಡುಕಳ
(14 January 1974)

ಸುಧಾ ಆಡುಕಳ ಅವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳ ಗ್ರಾಮದವರಾದ ಶ್ರೀಮತಿ ಸುಧಾ ಆಡುಕಳ ಅವರು ಪ್ರಸ್ತುತ ಉಡುಪಿಯ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರಾಧಾ, ನೃತ್ಯಗಾಥಾ, ಆನಂದಭಾವಿನಿ, ಮಾಧವಿ ಮೊದಲಾದ ಏಕವ್ಯಕ್ತಿ ನಾಟಕಗಳನ್ನು, ಮಕ್ಕಳ ರವೀಂದ್ರ, ಕನಕ-ಕೃಷ್ಣ, ಮಕ್ಕಳ ರಾಮಾಯಣ, ಬ್ರಹ್ಮರಾಕ್ಷಸ ಮತ್ತು ಕಥೆ, ಮರ ಮತ್ತು ಮನುಷ್ಯ ಮೊದಲಾದ ಮಕ್ಕಳ ನಾಟಕಗಳನ್ನು ರಚಿಸಿರುತ್ತಾರೆ. ರವೀಂದ್ರನಾಥ ಟ್ಯಾಗೋರರ ಕೆಂಪು ಕಣಗಿಲೆ, ಚಿತ್ರಾ ಮತ್ತು ಅವಳ ಕಾಗದ ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಇವರ ‘ಬಕುಲದ ಬಾಗಿಲಿನಿಂದ’ ಕೃತಿಗೆ ರಾಜ್ಯಸಾಹಿತ್ಯ ಅಕಾಡೆಮಿ ಬಹುಮಾನ ...

READ MORE

Related Books