ಬ್ರಹ್ಮಚಾರಿಯ ಹೆಂಡತಿ ಮತ್ತು ಇತರರು

Author : ವಿಕಾಸ ನೇಗಿಲೋಣಿ

Pages 130

₹ 108.00
Year of Publication: 2020
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9

Synopsys

ಲೇಖಕ ವಿಕಾಸ ನೇಗಿಲೋಣಿ ಅವರ ಕಥಾ ಸಂಕಲನ -ಬ್ರಹ್ಮಚಾರಿಯ ಹೆಂಡತಿ ಮತ್ತು ಇತರರು. ಒಟ್ಟು 19 ಕಥೆಗಳಿವೆ. ವಸ್ತು ವೈವಿಧ್ಯತೆ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ, ನಿರೂಪಣಾ ಶೈಲಿ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.

About the Author

ವಿಕಾಸ ನೇಗಿಲೋಣಿ

ವಿಕಾಸ ನೇಗಿಲೋಣಿ, ಹುಟ್ಟಿದ್ದು ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ ನೇಗಿಲೋಣಿಯಲ್ಲಿ. ಊರಲ್ಲೇ ಪ್ರಾಥಮಿಕ ಶಿಕ್ಷಣ,  ಉಡುಪಿಯಲ್ಲಿ ಹೈಸ್ಕೂಲ್ ಶಿಕ್ಷಣ ಪೂರೈಸಿದರು.  ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪಿಯುಸಿ ಮತ್ತು ಪದವಿ ವ್ಯಾಸಂಗ ಪೂರ್ಣಗೊಳಿಸಿದರು. ಸಂಯುಕ್ತ ಕರ್ನಾಟಕದಲ್ಲಿ ಪತ್ರಕರ್ತರಾಗಿ, ಅನಂತರ ವಿಜಯ ಕರ್ನಾಟಕ, ಉದಯವಾಣಿ, ಕನ್ನಡ ಪ್ರಭ, ಸುವರ್ಣ ನ್ಯೂಸ್, ಸಖಿ ನಿಯತಕಾಲಿಕೆಗಳಲ್ಲಿ ಸುಮಾರು 16 ವರ್ಷಗಳ ಕಾಲ ವೃತ್ತಿ ನಿರ್ವಹಿಸಿದರು.  ‘ಯಶೋದೆ’, ‘ಗಾಂಧಾರಿ’ ಸೇರಿದಂತೆ ಹಲವು ಧಾರಾವಾಹಿಗಳಿಗೆ ಸಂಭಾಷಣೆ ರಚಿಸಿದ್ದಾರೆ.  ‘ಯಶೋದೆ’, ‘ಗಾಂಧಾರಿ’, ‘ರಾಧಾ ರಮಣ’, ‘ಅಗ್ನಿಸಾಕ್ಷಿ’, ‘ಸೀತಾವಲ್ಲಭ’, ‘ನಮ್ಮನೆ ಯುವರಾಣಿ’, ‘ಮಿಥುನ ರಾಶಿ’ ಮೊದಲಾದ ಧಾರಾವಾಹಿಗಳಿಗೆ ಹಾಡುಗಳನ್ನು ಬರೆದ ...

READ MORE

Related Books