ನೇರಳೆ ಅಂಚು ಗಿಣಿಹಸಿರು ಸೀರೆ

Author : ರಮ್ಯ. ಎಸ್

Pages 155

₹ 0.00
Year of Publication: 2023
Published by: ಶ್ರೀನಿವಾಸ ಪುಸ್ತಕ ಪ್ರಕಾಶನ
Address: # 164/A, ಮೊದಲನೇ ಮಹಡಿ, ಎಂ.ಆರ್.ಎನ್. ಕಟ್ಟಡ, ಕನಕಪುರ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004
Phone: 9844098406

Synopsys

'ನೇರಳೆ ಅಂಚು ಗಿಣಿಹಸಿರು ಸೀರೆ' ಲೇಖಕಿ ರಮ್ಯ ಎಸ್. ಅವರ ಕಥಾಸಂಕಲನ. ಕೃತಿಯ ಕುರಿತು ಬರೆಯುತ್ತಾ 'ಈ ಕಥಾಸಂಕಲನದಲ್ಲಿರುವ ಒಂಬತ್ತು ಕಥೆಗಳಲ್ಲಿ ಬರುವ ಮುಖ್ಯ ಸ್ತ್ರೀ ಪಾತ್ರಗಳು ನನ್ನೊಳಗೆ ಸೇರಿದ ರೀತಿ ಕುತೂಹಲದ ಸಂಗತಿ ಎನ್ನುತ್ತಾರೆ ಲೇಖಕಿ ರಮ್ಯ. ಹಾಗೇ ಕಥೆ ಬರೆಯುವುದು ಶುರುಮಾಡಿದ ಮೇಲೆ ಪಾಠ ಮಾಡುವಾಗ, ಪ್ರಯಾಣದ ಸಮಯದಲ್ಲಿ, ನಿದ್ದೆ ಮಾಡುವಾಗ, ಸಹೋದ್ಯೋಗಿಗಳ ಜೊತೆ ಮಾತನಾಡುವಾಗ, ಗೆಳತಿಯರ ಭೇಟಿಯಲ್ಲಿ, ಮೌಲ್ಯಮಾಪನದ ಸಮಯದಲ್ಲಿ, ಹೀಗೆ ಬೇರೆ ಬೇರೆ ಸಮಯದಲ್ಲಿ ಮೂಡಿದ ಪಾತ್ರಗಳು, ಒಂದೊಂದು ಸನ್ನಿವೇಶದಲ್ಲಿಯೂ ಒಂದೊಂದು ರೀತಿಯಲ್ಲಿ ಪ್ರಭಾವ ಬೀರುತ್ತಾ, ನನ್ನ ಮನದೊಳಗೆ ಇಳಿದು, ನನ್ನ ಮಸ್ತಿಷ್ಕದಲ್ಲಿ ಪಟ್ಟಾಗಿ ಕುಳಿತು, ʼನಮಗೊಂದು ಕಥೆ ಬರೆದು, ನಮ್ಮ ಮನದ ತುಮುಲ ಹಂಚಿಕೊಳ್ಳಲು ಸಹಾಯ ಮಾಡುʼ ಎಂದು ಸಾಕಷ್ಟು ಕಾಡಿದವರು. ಇವರಿಗಾಗಿ ಆಯ್ದುಕೊಂಡ ಕೆಲವು ಸನ್ನಿವೇಶಗಳು ನನ್ನ ಜೀವನದಲ್ಲಿ ಕಂಡಂತಹ ಘಟನೆಗಳಿಂದ ಪ್ರೇರಿತವಾಗಿದ್ದರೆ, ಮತ್ತಷ್ಟು ನನ್ನ ಕಲ್ಪನೆಯ ಮೂಸೆಯಿಂದ ರೂಪಗೊಂಡಿವೆ. ಇವರೆಲ್ಲರು ನನ್ನನ್ನು ಸಾಕಷ್ಟು ಅಳಿಸಿದ್ದಾರೆ, ನಗಿಸಿದ್ದಾರೆ, ತಾಳ್ಮೆ ಕಲಿಸಿದ್ದಾರೆ, ಚಿಂತನೆಗೆ ದೂಡಿದ್ದಾರೆ, ಹಾಗೆಯೇ ನಾನು ಜೀವನವನ್ನು ನೋಡುವ ಪರಿ ಬದಲಿಸಿಕೊಳ್ಳಲು ಸಹಾಯ ಮಾಡಿದ್ದಾರೆ. ಕಥೆಗಳನ್ನು ಓದಿದ ನಂತರ ನಿಮಗೂ ಅಂತಹ ಅನುಭವವಾದರೆ ನನ್ನ ಪ್ರಯತ್ನ ಸಾರ್ಥಕ! ಜಾನಕಿ, ಜಾಹ್ನವಿ, ಆರತಿ, ಪಾರಿಜಾತ, ಚಿತ್ರ, ರಶ್ಮಿ, ನಂದಿನಿ, ಅರ್ಚನಾ, ಮೈಥಿಲಿ, ವೃಶಾಲಿ ಪಾತ್ರಗಳು ಕಾಲ್ಪನಿಕವಾದರೂ, ಓದುಗರಲ್ಲಿ ʼಇವರು ನಮ್ಮದೇ ಜೀವನದ ಭಾಗʼ ಎನ್ನುವ ಕಲ್ಪನೆ ಮೂಡಿಸುತ್ತಾರೆ ಎನ್ನುವುದು ಕಥೆಗಳ ಹಸ್ತಪ್ರತಿ ಓದಿದವರ ಅಭಿಪ್ರಾಯ. ಇಲ್ಲಿರುವ ಕಥೆಗಳಲ್ಲಿ ಪ್ರಮುಖ ಪುರುಷ ಪಾತ್ರಗಳು ರಘುರಾಮ್‌, ರಾಘವರಾಮ್‌ ಹೆಸರಿನಲ್ಲೆ ಯಾಕೆ ಮೂಡಿದರು ಎನ್ನುವುದಕ್ಕೆ ನಿಖರವಾದ ಕಾರಣ ನನಗೇ ತಿಳಿಯದು. ಆದರೆ ಕಥೆ ಬರೆಯಲು ಮುಂದಾದಾಗಲೆಲ್ಲ ಉತ್ತಮ ಪುರುಷನಿಗೆ ಉದಾಹರಣೆಯಾಗಿ ನೆನಪಾಗಿದ್ದು (ಈಗಲೂ ನೆನಪಾಗುವುದು) ರಾಮಾಯಣದ ಶ್ರೀರಘುರಾಮ ಮಾತ್ರ!! ನಾನು ಬರೆದಿರುವ ಪಾತ್ರಗಳೆಲ್ಲವೂ ನನಗೆ ಮೆಚ್ಚಿನವಾದರೂ, ʼನೇರಳೆ ಅಂಚು ಗಿಣಿಹಸಿರು ಸೀರೆʼ ಕಥೆಯಲ್ಲಿ ಒಂದು ಮೆಚ್ಚಿದ ಸೀರೆ ಕೊಳ್ಳಲು ಪರಿತಪಿಸುವ ಮೈಥಿಲಿ ಪಾತ್ರ ವೈಯಕ್ತಿವಾಗಿ ನನ್ನನ್ನು ಅತಿ ಹೆಚ್ಚು ಕಾಡಿದೆ. ಹಾಗೆಯೇ ಮೈಥಿಲಿ ನನ್ನ ಅಚ್ಚುಮೆಚ್ಚಿನ ಪಾತ್ರ ಕೂಡ. ಕಥೆಯ ಹಸ್ತಪ್ರತಿ ಓದಿದ ನನ್ನ ತಾಯಿ ಈ ಬಾರಿಯ ಗೌರಿ ಹಬ್ಬಕ್ಕೆ ಅದೇ ಸೀರೆ ತಂದಿದ್ದು ನನ್ನ ಜೀವನದ ಬಹುದೊಡ್ಡ ಅಚ್ಚರಿ! ನನ್ನ ಮೊದಲ ಕಥಾಸಂಕಲವನ್ನು ಓದಿ, ಅಮೂಲ್ಯ ಅಭಿಪ್ರಾಯಗಳನ್ನು ತಿಳಿಸಿ, ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಬರಹಗಾರ್ತಿಯಾಗಿ ರೂಪಗೊಳ್ಳಲು ಪ್ರೋತ್ಸಾಹ ನೀಡಿ ಎಂದಿದ್ದಾರೆ.

About the Author

ರಮ್ಯ. ಎಸ್
(26 April 1976)

"ಶ್ರೀರಾಜರಾಜೇಶ್ವರಿ" ಎನ್ನುವ ಹೆಸರಿನಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ಇವರ ನಿಜನಾಮಧೇಯ ರಮ್ಯ ಎಸ್. ವೃತ್ತಿಯಲ್ಲಿ ಶಿಕ್ಷಕಿ ಮತ್ತು ಆಪ್ತ ಸಮಾಲೋಚಕಿಯಾಗಿರುವ ಇವರು ಪ್ರವೃತ್ತಿಯಲ್ಲಿ ಬರಹಗಾರ್ತಿ. ಸಕ್ಕರೆ ನಾಡು ಎಂದೇ ಪ್ರಸಿದ್ಧವಾಗಿರುವ ಮಂಡ್ಯ ತಾಲ್ಲೂಕಿನ ದ್ಯಾಪಸಂದ್ರ ಎನ್ನುವ ಗ್ರಾಮದವರಾದ ರಮ್ಯ, ಪದವಿ ಶಿಕ್ಷಣದ ವರೆಗೆ ಕಲಿತದ್ದು ಮಂಡ್ಯದ ಜನತಾ ಶಿಕ್ಷಣ ಸಂಸ್ಥೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಜೈವಿಕ ತಂತ್ರಜ್ಞಾನ, ಶಿಕ್ಷಣ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತ್ತಕೋತ್ತರ ಶಿಕ್ಷಣ ಪಡೆದಿರುವ ಇವರಿಗೆ ಓದು ಮತ್ತು ಬರವಣಿಗೆ ನೆಚ್ಚಿನ ಹವ್ಯಾಸ. ಪದವಿಪೂರ್ವ ಶಿಕ್ಷಣದ ಸಮಯದಲ್ಲಿ ಪತ್ರಿಕೆಗಳಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ವಿಭಾಗಕ್ಕೆ ...

READ MORE

Related Books