ಭಾರತ ಭಾಗ್ಯ ವಿಧಾತ

Author : ಮಹಾಂತೇಶ ನವಲಕಲ್

Pages 138

₹ 100.00




Year of Publication: 2014
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ವ್ಹಯಾ-ಎಮ್ಮಿಗನೂರ, ಬಳ್ಳಾರಿ-583113
Phone: 9480353507

Synopsys

ಮಹಾಂತೇಶ ನವಲಕಲ್ ಅವರ ಎರಡನೆಯ ಕಥಾ ಸಂಕಲನ. ಈ ಸಂಕಲನದಲ್ಲಿ ಒಂಬತ್ತು ಕತೆಗಳಿವೆ. ಭಾರತ ಭಾಗ್ಯವಿಧಾತ, ಪಂಚಾವರಂ ಎಂಬ ದಂಡಕಾರಣ್ಯದೊಳಗೆ ಮಕ್ಕಳ ಮಾರುಕಟ್ಟೆ, ಬೇರಿಲ್ಲದ ಬೇವಿನ ಮರ ಮೇಲೆ ರೆಕ್ಕೆ ಇಲ್ಲದ ಹಕ್ಕಿ, ನಾನು ಚಂದ್ರಗುಪ್ತನೆಂಬ ಮೌರ್ಯ, ಅರಗಿನ ಮನೆಯ ಹಣತೆ, ಧರಣಿಯೆಂಬ ಪರಿಣಾಮಮುಖಿ, ಎಲುಬಿನ ವ್ಯಾಪಾರ,  ಶ್ವಾನ ಪರಿಣಯ ಪ್ರಸಂಗ.

ಹಿರಿಯ ವಿಮರ್ಶಕ ರಹಮತ್ ತರೀಕೆರೆ ಅವರು ’ನವಲಕಲ್ ಅವರ ಕತೆಗಳಲ್ಲಿರುವ ವಿಶೇಷ ಸಂಗತಿಗಳೆಂದರೆ, ರಾಯಚೂರು ಸೀಮೆಯ ಪ್ರಾದೇಶಿಕ ಜೀವನವನ್ನು ಸಮರ್ಥವಾಗಿ ಹಿಡಿದುಕೊಡುತ್ತಿರುವುದು ಮಾತ್ರವಲ್ಲದೆ, ಪ್ರಾದೇಶಿಕ ವಿಶಿಷ್ಟವಾದ ಅನುಭವ ಮತ್ತು ಭಾಷೆಯನ್ನು ನಗರದ ಮಧ್ಯಮವರ್ಗದ ಓದುಗರ ಮುಂದೆ, ಹೊಸ ಸರಕನ್ನಾಗಿ ಮಂಡಿಸಿ ಬೆರಗುಗೊಳಿಸುವ ವಾಂಛೆಯನ್ನು ಅವರು ಬಿಟ್ಟುಕೊಟ್ಟಿರುವುದು, ಅನುಭವವನ್ನು ಅದರ ಅಭಿವ್ಯಕ್ತಿಯಾಗಿ, ಭಾಷೆಯನ್ನು ಬಾಳಿನ ಶೋಧಕ್ಕೆ ಬಳಸುತ್ತಿರುವುದು, ಪಾತ್ರಗಳ ಒಳತೋಟಿಯನ್ನು ಚಿತ್ರಿಸುವ ಕುಶಲತೆ ಮತ್ತು ಸೂಕ್ಷ್ಮತೆ ಪ್ರಕಟಿಸಿರುವುದು. ನವ್ಯದ ಕತೆಗಾರರಲ್ಲಿ ದೊಡ್ಡ ಶಕ್ತಿಯಾಗಿದ್ದ ಈ ಮನೋವಿಶ್ಲೇಷಣಾತ್ಮಕವಾದ ಕಥನಕ್ರಮವು, ೭೦-೮೦ರ ದಶಕದ ದಲಿತ-ಬಂಡಾಯದ ಕತೆಗಾರರಲ್ಲಿ ಸಾಕಷ್ಟು ಕ್ಷೀಣಗೊಂಡಿತ್ತು. ವಸ್ತು ಮತ್ತು ಧೋರಣಾ ಪ್ರಧಾನವಾದ ಕತೆಗಾರಿಕೆಯು ಮನಸ್ಸಿನ ಒಳಗೆ ಹೊಕ್ಕು ನೋಡುವ ಕುತೂಹಲಗಳನ್ನು ಕಡಿಮೆ ಮಾಡಿಕೊಳ್ಳುತ್ತದೆ. ಆದರೆ ನವಲಕಲ್‌ರಂತಹ ಹೊಸ ತಲೆಮಾರಿನ ಲೇಖಕರು ಈ ಕಥನಕ್ರಮವನ್ನು ಅರ್ಥಪೂರ್ಣವಾಗಿ ಮತ್ತೆ ಬಳಕೆಗೆ ತರುತ್ತಿದ್ದಾರೆ. ತಮ್ಮ ವ್ಯಂಗಪ್ರಜ್ಞೆಯಿಂದ ಕತೆಗಳ ಲೋಕವನ್ನು ಲವಲವಿಕೆಯಲ್ಲಿ ಇಟ್ಟಿರುವುದು ಬಹುಶಃ ತೇಜಸ್ವಿ, ದೇವನೂರು, ಕುಂವೀ ಅವರ ಕತೆಗಾರಿಕೆಯ ಪ್ರಭಾವವು ಇಂತಹ ಕತೆಗಾರರಿಗೆ ಗಂಭೀರತೆಯ ಹೆಸರಲ್ಲಿ ರೋತೆದನಿ ತಾಳದಂತೆ ತಡೆದಿರಬಹುದು. ಇಲ್ಲಿನ ವಿನೋದದೃಷ್ಟಿಯು ಜೀವಂತ ಸಂಭಾಷಣೆಗಳಿಗೆ ಮಾತ್ರವಲ್ಲದೇ ಬಾಳಿನ ಘಟನೆಗಳನ್ನು ಚೂಪಾಗಿ ನೋಡುವುದಕ್ಕೂ ಕಾರಣವಾಗಿದೆ. ನವಲಕಲ್ ಭಾಷೆಯ ಜತೆಗೆ ಆಟವನ್ನು ಆಡಬಲ್ಲರು, ಧ್ವನಿಪೂರ್ಣವಾದ ಸಾಲುಗಳನ್ನು ಬರೆಯಬಲ್ಲರು. ಕಾವ್ಯಮಯ ತೀವ್ರತೆಯಿಂದ ಕೂಡಿದ ಭಾಷೆಯಲ್ಲಿ ನವಲಕಲ್ ಕತೆ ಬರೆಯಬಲ್ಲರು’ ಎಂದು ಅಭಿಪ್ರಾಯಪಟ್ಟಿದ್ದಾರೆ.

 

About the Author

ಮಹಾಂತೇಶ ನವಲಕಲ್
(24 November 1970)

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನವಲಕಲ್ಲಿನ ಮಹಾಂತೇಶ ನವಲಕಲ್ ಅವರು ಕೃಷಿ ಪದವೀಧರರು. ’ನೀರಿನ ನೆರಳು’ ಇವರ ಮೊದಲ ಕಥಾಸಂಕಲನ. ’ನಾನು ಚಂದ್ರಗುಪ್ತನೆಂಬ ಮೌರ್ಯ’ ನಾಟಕವು ಹಲವು ಯಶಸ್ವಿ ಪ್ರದರ್ಶನ ಕಾಣುವುದರ ಜೊತೆಗೆ ಪುಸ್ತಕವಾಗಿಯೂ ಪ್ರಕಟವಾಗಿ ಮೆಚ್ಚುಗೆ ಗಳಿಸಿದೆ. ಪುಂಚಾವರಂ ಕುರಿತಾದ ನಾಟಕ ವಿವಾದಕ್ಕೆ ಎಡೆ ಮಾಡಿತ್ತು. ಬೆಸಗರಹಳ್ಳಿ ರಾಮಣ್ಣ ಕಥಾಪುರಸ್ಕಾರ, ದೆಹಲಿ ಕರ್ನಾಟಕ ಸಂಘದ ನೃಪತುಂಗ ಪುರಸ್ಕಾರ, ಪಾಪು ಮರಸ್ಕಾರ, ಸಂಕ್ರಮಣ ಕಥಾ ಪುರಸ್ಕಾರ, ಅಮ್ಮ ಪುರಸ್ಕಾರ, ಉರಿಲಿಂಗ ಪೆದ್ದಿ ಪುರಸ್ಕಾರ, ರಾಜ್ಯೋತ್ಸವ ಪುರಸ್ಕಾರ, ಎರಡು ಬಾರಿ ಇವರ ಕತೆಗಳಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ರಾಜಪುರೋಹಿತ ದತ್ತಿನಿಧಿಯ ಚಿನ್ನದ ...

READ MORE

Related Books