ಕಟ್ಟು ಕತೆಗಳು

Author : ಎಸ್. ಸುರೇಂದ್ರನಾಥ್

Pages 200

₹ 60.00




Year of Publication: 2012
Published by: ಛಂದ ಪುಸ್ತಕ
Address: ವಸುಧೇಂದ್ರ, ಐ004 ಮಂತ್ರಿ ಪ್ಯಾರಾಡೈಸ್ ರಸ್ತೆ. ಬನ್ನೇರುಘಟ್ಟ ರಸ್ತೆ, ಬೆಂಗಳೂರು-560076

Synopsys

ಲೇಖಕ ಎಸ್ ಸುರೇಂದ್ರನಾಥ್ ಅವರ ಕಥಾ ಸಂಕಲನ; ʻಕಟ್ಟು ಕತೆಗಳುʼ. ಸಾಮಾನ್ಯವಾಗಿ ಓದುವ ಕಥೆಗಳಿಗಿಂತ ವಿಭಿನ್ನವಾಗಿರುವ ಕಥೆಗಳು ಸ್ವಾರಸ್ಯಕರವಾಗಿವೆ. ಅತಿರಂಜಿತ ಘಟನೆ ಹಾಗೂ ಪಾತ್ರಗಳು ಪ್ರತಿ ಕತೆಯಲ್ಲಿಯೂ ಬರುತ್ತವೆ. ಹಿರಿಯ ವಿಮರ್ಶಕ ಗಿರಡ್ಡಿ ಗೋವಿಂದರಾಜು ಅವರು ಕಥಾಸಂಕಲನದ ಕುರಿತು, ʻಸುರೇಂದ್ರನಾಥರು ಹಿಡಿದ ಹಾದಿ ತೀರ ಹೊಸದು ಮತ್ತು ಭಿನ್ನ. ಈ ಕತೆಗಳನ್ನು ಓದುತ್ತಿದ್ದಂತೆ ಗೊರೂರು ರಾಮಸ್ವಾಮಿ ಅಯ್ಯಂಗಾರರ ಕತೆಗಳ ನೆನಪು ಸ್ವಲ್ಪ ಮಟ್ಟಿಗಾದರೂ ಆದೀತು. ಆದರೆ, ಈ ನೆನಪು ಸುರೇಂದ್ರನಾಥರ ಕತೆಗಳ ಭಿನ್ನತೆಯನ್ನೇ ಎತ್ತಿ ತೋರಿಸುತ್ತದೆ. ಗೊರೂರರ ಹಾಸ್ಯದಲ್ಲಿ ಬದುಕಿನ ಬಗೆಗಿನ ಚಿಕ್ಕ ಪುಟ್ಟ ಐರನಿಗಳು ಪ್ರಕಟವಾದರೆ, ಸುರೇಂದ್ರನಾಥರ ಕತೆಗಳ ಹಾಸ್ಯ ಅನಿರೀಕ್ಷಿತ ದುರಂತದಲ್ಲಿ ಎತ್ತಿ ಒಗೆದಂತೆ ದಿಗ್ಭ್ರಮೆಗೊಳಿಸುತ್ತದೆ. ಸುರೇಂದ್ರನಾಥರ ಕತೆಗಳಲ್ಲಿ ಕಾಣುವ ಕೇಂದ್ರ ವಿನ್ಯಾಸವೆಂದರೆ, ಬದುಕಿನ ಗಂಭೀರ ಅನುಭವಗಳನ್ನು ಹಾಸ್ಯದ ಮೂಲಕ ಅತಿರೇಕಕ್ಕೆ ಒಯ್ದು ನೋಡುವದು ಮತ್ತು ಆ ಮೂಲಕ ಈವರೆಗೆ ಕಾಣದ ಹೊಸ ಅರ್ಥಗಳನ್ನು ಹೊಳೆಯಿಸುವುದು. ಈ ಪ್ರಯತ್ನದಲ್ಲಿ ಇವರು ಸಾಕಷ್ಟು ಯಶಸ್ವಿಯಾಗಿದ್ದು, ಈ ಮೂಲಕ ಕನ್ನಡ ಸಣ್ಣಕತೆಗೆ ಹೊಸ ಸಾಧ್ಯತೆಯೊಂದನ್ನು ಜೋಡಿಸಿದ್ದಾರೆʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.

About the Author

ಎಸ್. ಸುರೇಂದ್ರನಾಥ್

ಸುರೇಂದ್ರನಾಥ್ ಅವರು ಹುಟ್ಟಿದ್ದು ಮೂಡಬಿದರೆಯ ಸಮೀಪದ ಒಂದು ಹಳ್ಳಿಯಲ್ಲಿ. ಓದಿದ್ದು ಬೆಳೆದಿದ್ದು ದಾವಣಗೆರೆಯಲ್ಲಿ. ಓದಿನ ಸಮಯದಲ್ಲೇ ಸಾಹಿತ್ಯ, ನಾಟಕದ ಗೀಳು ಹತ್ತಿಸಿಕೊಂಡ ಅವರು ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ನಾಟಕದ ತರಬೇತಿ ಪಡೆದರು. ಹೊಟ್ಟೆಪಾಡಿಗಾಗಿ ಒಂದಿಷ್ಟು ವರ್ಷಗಳು ಹಲವಾರು ಪತ್ರಿಕೆಗಳಲ್ಲಿ, ಜಾಹೀರಾತು ಕಂಪೆನಿಗಳಲ್ಲಿ ದುಡಿದಿದ್ದಾರೆ. ಬೆಂಗಳೂರಿನ ಸಂಕೇತ್ ತಂಡದಲ್ಲಿ ಸೇರಿ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಆನಂತರ ಈಟಿವಿ ಸಂಸ್ಥೆಯನ್ನು ಸೇರಿದ ಅವರು ಹದಿಮೂರು ವರ್ಷಗಳ ಕಾಲ ಹೈದರಾಬಾದಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ವೃತ್ತಿ, ರಂಗಭೂಮಿ ಒಡನಾಟಗಳೊಂದಿಗೆ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿರುವ ಸುರೇಂದ್ರನಾಥ್ ಎರಡು ಕಥಾಸಂಕಲನಗಳು - ಕಟ್ಟು ...

READ MORE

Related Books