ಅತ್ರಿ ಮತ್ತು ಇತರೆ ಕಥೆಗಳು

Author : ಎಸ್.ಡಿ. ಸುಲೋಚನಾ

Pages 128

₹ 120.00




Year of Publication: 2020
Published by: ಸಿದ್ಧಾರ್ಥ ಎಂಟರ್ ಪ್ರೈಸೆಸ್
Address: ಗಣಪತಿ ನಗರ, ಗಾಣಿಗರ ಹಟ್ಟಿ, ಬೆಂಗಳೂರು ಉತ್ತರ-5800090

Synopsys

ಅತ್ರಿ ಮತ್ತು ಇತರೆ ಕಥೆಗಳು-ಡಾ. ಎಸ್.ಡಿ.ಸುಲೋಚನಾ ಅವರ ಕಥೆಗಳ ಸಂಕಲನ. ವಾಸ್ತವಿಕತೆಯ ವಿದ್ಯಮಾನಗಳು, ನಮ್ಮ ಜೀವನದ ಮೂಲಕ ಸಮಾಜಕ್ಕೆ ನೀಡಬಹುದಾದ ಆದರ್ಶಗಳು ಕಥಾವಸ್ತುಗಳಾಗಿವೆ. ರಕ್ತ ಸಂಬಂಧ ಕಥೆಯು ರಕ್ತದಾನದ ಮಹತ್ವ ತಿಳಿಸುತ್ತದೆ. ಇತರರಿಗೆ ಮಾದರಿಯಾಗಿ ಬದುಕಿದರೆ ಜೀವನ ಸಾರ್ಥಕತೆ ಪಡೆಯುತ್ತದೆ ಎಂಬ ಸಂದೇಶದ ಕಥೆಗಳು ಇಲ್ಲಿವೆ.

About the Author

ಎಸ್.ಡಿ. ಸುಲೋಚನಾ

ಡಾ. ಎಸ್. ಡಿ. ಸುಲೋಚನಾ, ಶಿವಮೊಗ್ಗ ಜಿಲ್ಲೆಯ ಸಾಗರದವರು. ತಂದೆ-ದೊರೆಸ್ವಾಮಿ ನಾಯ್ಡು, ತಾಯಿ-ಸರಸ್ವತಮ್ಮ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಸಾಗರದಲ್ಲೇ ಪೂರ್ಣಗೊಳಿಸಿದ್ದು, ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪಿಯುಸಿ, ಬಿ.ಎಸ್.ಸಿ ಹಾಗೂ ಬಳ್ಳಾರಿಯ ವೈದ್ಯಕೀಯ ಆಸ್ಪತ್ರೆ ಹಾಗೂ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿ ಪಡೆದರು. 1969ರಲ್ಲಿ ಸಹಾಯಕ ವೈದ್ಯರಾಗಿ ವಿವಿಧೆಡೆ ಸೇವೆಯ ನಂತರ 1997ರಲ್ಲಿ ಸಹಾಯಕ ಜಿಲ್ಲಾ ವೈದ್ಯಾಧಿಕಾರಿಗಳಾಗಿ ನಿವೃತ್ತರಾಗಿದ್ದಾರೆ. ಪ್ರಸ್ತುತ ವಾಸಂತಿದೇವಿ ಬಲ್ಡೋಟಾ ರಕ್ತನಿಧಿ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿದ್ದಾರೆ.  ಇವರ ಮೊದಲ ಕಥಾ ಸಂಕಲನ-ರಕ್ತ ಸಂಬಂಧ (2017) ಮತ್ತು ಅತ್ರಿ ಮತ್ತು ಇತರೆ ಕಥೆಗಳು- ಸಣ್ಣ ಕಥೆಗಳ ಸಂಕಲನ. ಪ್ರಿಯದರ್ಶಿನಿ ಮಹಿಳಾ ಸಂಘ ಸ್ಥಾಪಿಸಿ, ಔದ್ಯೋಗಿಕ ...

READ MORE

Related Books