ಭಾಗವತದ ಆಯ್ದ ಕತೆಗಳು

Author : ವಿ.ಗಣೇಶ್‌

Pages 204

₹ 200.00




Year of Publication: 2021
Published by: ನೀವೆದಿತ ಪ್ರಕಾಶನ
Address: ಶಾಸ್ತ್ರಿ ನಗರ, ಬನಶಂಕರಿ 2ನೇ ಹಂತ ಬೆಂಗಳೂರು
Phone: 9448733323

Synopsys

‘ಭಾಗವತದ ಆಯ್ದ ಕತೆಗಳು’ ವಿ. ಗಣೇಶ್ ಅವರ ಕಥಾಸಂಕಲನವಾಗಿದೆ. ಸಾಮಾನ್ಯವಾಗಿ ಎಲ್ಲರೂ ರಾಮಾಯಣ, ಮಹಾಭಾರತ, ಭಗವದ್ಗೀತೆ ಮುಂತಾದ ಪುರಾಣ ಕಥೆಗಳನ್ನು ಓದುತ್ತಿರುತ್ತಾರೆ. ಅದಕ್ಕೆ ಹೋಲಿಸಿದರೆ ಭಾಗವತ ಓದುವುದು ಸ್ವಲ್ಪ ಕಡಿಮೆ ಇದೆ ಎಂದೇ ಹೇಳಬೇಕು. ಅದಕ್ಕೆ ಭಾಗವತದ ಕಥೆಗಳು ಬೇರೆ ಪುರಾಣ ಕಥೆಗಳಲ್ಲಿ ಮಿಳಿತವಾಗಿರುವುದೂ ಒಂದು ಕಾರಣ ವಿರಬಹುದು. ಬಹಳಷ್ಟು ಮಕ್ಕಳು ದಶಾವತಾರದ ಹೆಸರುಗಳನ್ನು ಕೇಳಿದ್ದಾರೆಯೇ ವಿನಾ ಆ ದಶಾವತಾರಗಳು ಯಾವುವು? ವಿಷ್ಣುವು ಆ ಅವತಾರಗಳನ್ನು ಯಾವ ಯಾವ ಸಂದರ್ಭಗಳಲ್ಲಿ ತಾಳುತ್ತಾನೆ ಎಂಬುದರ ಬಗ್ಗೆ ಸೂಕ್ತ ತಿಳುವಳಿಕೆಯಿರುವುದಿಲ್ಲ. ಅದಕ್ಕಾಗಿ ಈ “ಆಯ್ದ ಭಾಗವತದ ಕಥೆಗಳು” ಪ್ರಾರಂಭದಲ್ಲಿ ವಿಷ್ಣುವಿನ ದಶಾವತಾರಗಳ ಬಗ್ಗೆಯೂ ಸೂಕ್ಷ್ಮ ಪರಿಚಯವನ್ನು ಕೊಟ್ಟಿರುತ್ತೇನೆ. ಭಾಗವತದಲ್ಲಿರುವ ಎಲ್ಲ ಕಥೆಗಳನ್ನು ನಾನು ಬರೆಯಲು ಹೋಗಿಲ್ಲ. ಅವುಗಳಲ್ಲಿ ಕೆಲವೇ ಕೆಲವು ಕಥೆಗಳನ್ನು ಮಾತ್ರ ಆರಿಸಿಕೊಂಡು ಬರೆದಿರುತ್ತೇನೆ. ಈ ಕತೆಗಳನ್ನು ಓದಿದ ನಂತರ ಮಕ್ಕಳು ಭಾಗವತವನ್ನು ಓದುವಂತಾಗಲಿ ಎಂಬುದೇ ನನ್ನ ಮುಖ್ಯ ಉದ್ದೇಶ. ಈ ಕೃತಿಯಲ್ಲಿ ನಾನು ಭಸ್ಮಾಸುರ, ರತಿದೇವ, ಹಿರಣ್ಯಕಶಿಪು, ಕಚ ಮತ್ತು ದೇವಯಾನಿ, ಮಧು ಕೈಟಭ, ಸಮುದ್ರ ಮಥನ, ಶಿಶುಪಾಲನ ವಧೆ, ಜರಾಸಂಧನ ವಧೆ, ಪೂತನಿ, ಪ್ರಹ್ಲಾದ ಮುಂತಾದ ಕಥೆಗಳು ಕಾಣಸಿಗುತ್ತವೆ.

About the Author

ವಿ.ಗಣೇಶ್‌

ವಿ.ಗಣೇಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂ.ಎಸ್.ಸಿ, ಎಂ.ಎ., ಬಿ.ಎಡ್. ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರೌಢಶಾಲಾ ಅಧ್ಯಾಪಕರಾಗಿ, ಗಣಿತ ಉಪನ್ಯಾಸಕರಾಗಿ, ಇಂಗ್ಲೀಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಬಿ.ಎಡ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books