ಅಮ್ಮನ ಕೋಣೆಗೆ ಏಸಿ

Author : ಏ.ಕೆ. ಕುಕ್ಕಿಲ

Pages 148

₹ 130.00




Year of Publication: 2020
Published by: ಅಪರಂಜಿ ಪ್ರಕಾಶನ
Address: ಚಿಕ್ಕಮಗಳೂರು
Phone: 9844767859

Synopsys

‘ಅಮ್ಮನ ಕೋಣೆಗೆ ಏಸಿ’ ಲೇಖಕ ಏ.ಕೆ. ಕುಕ್ಕಿಲ ಅವರ ಕಥಾಸಂಕಲನ. ಈ ಕೃತಿಗೆ ಹಿರಿಯ ಸಾಹಿತಿ ಅರವಿಂದ ಚೊಕ್ಕಾಡಿ ಅವರು ಬೆನ್ನುಡಿ ಬರೆದು ‘ಕುಕ್ಕಿಲ ಅವರ ತಮ್ಮ ಕಣ್ಣಿಗೆ ಸಿದ್ಧಾಂತದ ಪಟ್ಟಿ ಕಟ್ಟಿಕೊಳ್ಳದೆ ಬದುಕನ್ನು ಮುಕ್ತ ಮನಸಿನಿಂದ ನೋಡಬಲ್ಲರು ಎನ್ನುವುದಕ್ಕೆ ಪಾಯಸ ನಕ್ಕಿತು ನಂತಹ ಕತೆಗಳು ಹೇಳುತ್ತವೆ. ಕಿಬ್ಬೊಟ್ಟಿ ಗಹಗಹಿಸಿ ನಕ್ಕಿತು ಕತೆಯು ಸ್ತ್ರೀ ಮನಸ್ಸನ್ನು ಅರ್ಥ ಮಾಡಿಕೊಳ್ಳದ ಪುರುಷನ ನಡವಳಿಕೆಯ ದೋಷವನ್ನು ಹೇಳಿದರೆ. ಪಾಯಸ ನಕ್ಕಿತು ಕತೆಯು ಪುರುಷನ ಮನಸ್ಸನ್ನು ಅರ್ಥ ಮಾಡಿಕೊಳ್ಳದಿರುವ ಸ್ತ್ರೀ ನಡವಳಿಕೆಯ ದೋಷವನ್ನು ಹೇಳುತ್ತದೆ. ಈ ಮೂಲಕ ತಾನು ಅರ್ಥ ಮಾಡಿಕೊಳ್ಳುವುದರ ಪರಿವೆ ಹೊರತು ಸ್ತ್ರೀ ಅಥವಾ ಪುರುಷ ಎನ್ನುವುದು ತನಗೆ ಮುಖ್ಯವಲ್ಲ. ಅತ್ತೆಯಿಂದಾಗುವ ಹಾನಿಯನ್ನು ನಿರ್ಲಕ್ಷಿಸಿ ಅತ್ತೆಯನ್ನು ಪ್ರೀತಿಸುವ ಸೊಸೆಯ ಕತೆಯಲ್ಲಿಯೂ ಸ್ಥಾಪಿತ ಧೋರಣೆಗಳನ್ನು ತಿರಸ್ಕರಿಸಿ ಮುನ್ನೆಡೆಯಬಲ್ಲ ದಿಟ್ಟತನ ಕಾಣುತ್ತದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಏ.ಕೆ. ಕುಕ್ಕಿಲ

ಲೇಖಕ ಏ.ಕೆ. ಕುಕ್ಕಿಲ ಅವರು ‘ಡೇಟ್ ಫ್ಯಾಕ್ಟ್ ’ ಎಂಬ ಚಾನೆಲ್ ಮೂಲಕ ಚಿರಪರಿಚಿತರು. ಖ್ಯಾತ ಅಂಕಣಕಾರರು ಹಾಗೂ ಪತ್ರಕರ್ತರೂ ಆಗಿರುವ ಕುಕ್ಕಿಲ ಅವರ ಸಾಹಿತ್ಯಿಕ ಬರವಣಿಗೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಾಲದ ಎದುರು ಇತಿಹಾಸವನ್ನು ಹರಡಿಕೊಂಡು ತನ್ಮಯತೆ ಮತ್ತು ಭಾವನಾತ್ಮಕತೆಯೊಂದಿಗೆ ಒಂದು ಪ್ರವಾಸವನ್ನು ಹೇಗೆ ಕಟ್ಟಿಕೊಡಬಹುದು ಎಂಬುದನ್ನು ಕುಕ್ಕಿಲ ಅವರು ತಮ್ಮ ’ಎಣ್ಣೆ ಬತ್ತಿದ ಲಾಟೀನು’ ಕೃತಿಯಲ್ಲಿ ಚಿತ್ರಿಸಿದ್ದಾರೆ. ಸರಸ-ಸಲ್ಲಾಪ, ವೈರಸ್  ಹಾಗೂ ಅಮ್ಮನ ಕೋಣೆಗೆ ಏಸಿ ಅವರ ಪ್ರಕಟಿತ ಕೃತಿಗಳು. ...

READ MORE

Related Books