ಒಂದು ಖಾಲಿ ಕುರ್ಚಿ

Author : ವಿಜಯ ಹೂಗಾರ್‌

Pages 110

₹ 110.00
Year of Publication: 2020
Published by: ಸಂಗಾತ ಪುಸ್ತಕ
Address: ರಾಜೂರ್ ಅಂಚೆ, ಗಜೇಂದ್ರಗಡ ತಾಲ್ಲೂಕು, ಗದಗ ಜಿಲ್ಲೆ
Phone: 9341757653

Synopsys

ಯುವ ಕಥೆಗಾರ ವಿಜಯ ಹೂಗಾರ್‌ ತಮ್ಮ ಮೊದಲ ಕಥಾ ಸಂಕಲನದಲ್ಲಿ ಕತೆ ಕಟ್ಟುವಲ್ಲಿ ಹಾಗೂ ಓದುಗರ ಮನ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಂಟು ಕಥೆಗಳು ಪ್ರಧಾನವಾಗಿ ನಗರ ಕೇಂದ್ರಿತವಾಗಿದ್ದರೂ ಒಳದನಿ ಮಾನವ ಸಹಜವಾಗಿ ನಲುಗುವ ಮನಸ್ಸಿನ ತಾಕಲಾಟಗಳತ್ತ ಸಾಗುತ್ತದೆ. ಒಂದೇ ಗುಕ್ಕಿನಲ್ಲಿ ಓದಿಸಿಕೊಳ್ಳುವ ಕತೆಗಳು, ಮನಸ್ಸನ್ನು ನಾಟುತ್ತಾ ಒಮ್ಮೆ ನಿಂತು ತಮ್ಮ ಬದುಕಿನತ್ತ ತಿರುಗಿ ಯೋಚಿಸಿಕೊಳ್ಳುವಂತೆ ಮಾಡುತ್ತವೆ. ನೇರವಾಗಿ ಸಾಗುವ ನಿರೂಪಣೆ, ಒಳದನಿಯ ಆರ್ತನಾದಕ್ಕೆ ತಂದು ನಿಲ್ಲಿಸುವ ಕತೆಗಳು ಕಾಡಲಾರದೆ ಇರಲಾರವು.

About the Author

ವಿಜಯ ಹೂಗಾರ್‌

ಯುವ ಕಥೆಗಾರ ವಿಜಯ ಹೂಗಾರ್‌ ಹುಟ್ಟಿದ್ದು 1988ರಲ್ಲಿ ಬೀದರ್ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಒಟರ್ಗೆರಾ ಗ್ರಾಮದಲ್ಲಿ. ಬೆಂಗಳೂರಿನ ಆರ್‌ವಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಸುಮಾರು ಎಂಟು ವರ್ಷ ಐಟಿ ಕಂಪನಿಯಲ್ಲಿ ದುಡಿಮೆ. ಪ್ರಸ್ತುತ ಬೆಂಗಳೂರಿನ ವಿಪ್ರೊ ಕಂಪನಿಯಲ್ಲಿ ಟೆಕ್ ಲೀಡ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಓದುಬರಹ, ಸಿನಿಮಾ, ಮತ್ತು ಪರ್ಯಟನೆಗಳ ಒಲವು ಹೆಚ್ಚು. ಅವರ ಹಲವಾರು ಕಥೆಗಳು ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದಿವೆ. ’ಒಂದು ಖಾಲಿ ಖುರ್ಚಿ’ ಮೊದಲ ಕಥಾ ಸಂಕಲನ. ...

READ MORE

Related Books