ಸಂಧ್ಯಾರಗಳೆ ಮತ್ತು ಇತರ ಕಥೆಗಳು

Author : ಎಸ್.ಎಚ್. ಶಫೀಉಲ್ಲ (ಕುಟೀಶ)

Pages 96

₹ 90.00




Year of Publication: 2020
Published by: ತೌಫಿಕ್ ಪ್ರಕಾಶನ
Address: ಹಿರೇಕುಂಬಳಗುಂಟೆ, ಕೂಡ್ಲಿಗಿ ತಾ, ಬಳ್ಳಾರಿ ಜಿಲ್ಲೆ-583218
Phone: 8867435662

Synopsys

ಲೇಖಕ ಎಸ್.ಎಚ್.ಶಫೀಉಲ್ಲ (ಕುಟೀಶ) ಅವರ ಕಥೆಗಳ ಸಂಕಲನ-’ಸಂಧ್ಯಾ ರಗಳೆ ಮತ್ತು ಇತರ ಕಥೆಗಳು’. ಈ ಕಥಾ ಸಂಕಲನದ ಆರೋಹಣ ಅವರೋಹಣಗಳ ಅವಲೋಕನ ಮಾಡಿರುವ ಅಚ್ಚು ಮೆಚ್ಚಿನ ಹಿರಿಯ ಸಾಹಿತಿಗಳು, ನಾಟಕರತ್ನ, ನಿರ್ದೇಶಕ, ಗಾಯಕ, ವಿಮರ್ಶಕ ಮಾ.ಚಿ. ಅವರ ಮನಮೆಚ್ಚಿದೆ ಎಂದರೆ ಕನ್ನಡ ಸಾರಸ್ವತ ಲೋಕದ ಸತ್ಯಸಾಗರದಲ್ಲಿ ಸಾಹಿತಿ ಕುಟೀಶರ ಜಹಜು ದಡ ಮುಟ್ಟಿದಂತೆಯೇ ಎಂಬುದರಲ್ಲಿ ಅನುಮಾನವಿಲ್ಲ’ ಎಂದು ಬೆನ್ನುಡಿ ಬರೆದ  ವಿಮರ್ಶಕಿ ಕೆ. ನಾಗರತ್ನ ಪ್ರಶಂಸಿಸಿದ್ದಾರೆ. ಈ ಕಥಾ ಸಂಕಲನದಲ್ಲಿ ಒಟ್ಟು 8 ಕತೆಗಳಿದ್ದು, ವಸ್ತು ವೈವಿಧ್ಯತೆ, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ. 

About the Author

ಎಸ್.ಎಚ್. ಶಫೀಉಲ್ಲ (ಕುಟೀಶ)
(06 July 1980)

ಲೇಖಕ ಎಸ್. ಎಚ್. ಶಫೀಉಲ್ಲ ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹಿರೇಕುಂಬಳಗುಂಟೆ ಗ್ರಾಮದವರು. ತಂದೆ - ಟೀಪುಸಾಹೇಬ್, ತಾಯಿ - ಯಮುನಾಬಿ. ರಂಗಭೂಮಿ ಕುಟುಂಬದ ಹಿನ್ನೆಲೆಯಿಂದ ಬಂದ ಇವರು ರಂಗಭೂಮಿಯನ್ನೇ ಕಾರ್ಯ ಕ್ಷೇತ್ರವನ್ನಾಗಿಸಿಕೊಂಡಿದ್ದಾರೆ. ಪ್ರೌಢಶಾಲೆ - ಕಾಲೇಜು ಹಂತಗಳಲ್ಲಿ ಹಲವು ನಾಟಕಗಳಲ್ಲಿ ಅಭಿನಯಿಸಿ ಕಲೆಯ ಜಾಡಿನಲ್ಲಿ ಮುಂದುವರೆದರು. ಸಾಮಾಜಿಕ, ಐತಿಹಾಸಿಕ ಮತ್ತು ಪೌರಾಣಿಕದಂತಹ ಎಲ್ಲಾ ತರಹದ ನಾಟಕಗಳಲ್ಲೂ ತಮ್ಮ ಅಭಿನಯ ಚಾತುರ್ಯವನ್ನು ಓರೆಗೆ ಹಚ್ಚಿದವರು. ಎಂ ಎ., ಎಂ ಇಡಿ., ಸ್ನಾತಕೋತ್ತರ ಪದವೀದರರಾದ ಇವರು ಪದವಿ ಮತ್ತು ಡಿ.ಇಡಿ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಸಂಧ್ಯಾ ರಗಳೆ ಮತ್ತು ಇತರ ಕಥೆಗಳು’ ಅವರ ಚೊಚ್ಚಲ ಕೃತಿ. ಅವರಿಗೆ ಉತ್ತಮ ಶಿಕ್ಷಕ ...

READ MORE

Related Books