ನದಿಯೊಂದು ಕಡಲ ಹುಡುಕುತ್ತಾ

Author : ಸಂತೆಬೆನ್ನೂರು ಫೈಜ್ನಟ್ರಾಜ್

Pages 160

₹ 180.00




Year of Publication: 2023
Published by: ವೀರಲೋಕ ಬುಕ್ಸ್
Address: ವೀರಲೋಕ ಬುಕ್ಸ್‌ ಪ್ರೈವೇಟ್‌ ಲಿಮಿಟೆಡ್‌, 207, 2ನೇ ಮಹಡಿ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018
Phone: +91 7022122121

Synopsys

'ನದಿಯೊಂದು ಕಡಲ ಹುಡುಕುತ್ತಾ' ಲೇಖಕ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕತಾಸಂಕಲನ. ಕೃತಿಯ ಕುರಿತು ಬರೆದಿರುವ ಸದಾಶಿವ ಸೊರಟೂರು 'ಫೈಜ್ ಅವರು ಕತೆ ಬರೆಯುವುದಿಲ್ಲ; ಅದನ್ನು ಸುಮ್ಮನೆ ಹರಿಯ ಬಿಡುತ್ತಾರೆ. ನದಿ ತನ್ನ ಜಾಡನ್ನು ತಾನು ಹಿಡಿದು ಹೊರಡುವಂತೆ ಕಥೆ ತನ್ನ ದಾರಿಯನ್ನು ಹಿಡಿದುಕೊಂಡು ಸುಮ್ಮನೆ ಹೊರಡುತ್ತದೆ. ಕಥೆಗಾರ ಫೈಜ್ ಹೊರಗಿನಿಂದ ಅದನ್ನು ನೋಡುತ್ತಾ ನಿಲ್ಲುತ್ತಾರೆ. ಹರಿವ ಆ ನದಿಯಲ್ಲಿ ಮಣ್ಣಿನ ಸೊಗಡಿದೆ. ಬಡವರ ನಾಲ್ಕು ಹನಿ ಕಣ್ಣೀರಿದೆ, ನೋವಿದೆ. ದಡವು ನದಿಯನ್ನು ಸಮಾಧಾನಿಸುವಂತೆ ಕಥೆಗಾರ ಫೈಜ್ ನೋವಿಗೆ ಮಿಡಿಯುತ್ತಾರೆ' ಎಂದಿದ್ದಾರೆ. ಜೊತೆಗೆ ನೋವಿಗೆ ಮಿಡಿಯದ ಕಥೆಯನ್ನು ಯಾಕಾದರೂ ಬರೆಯಬೇಕು? ಎಂಬುದು ಅವರ ಧೋರಣೆ. ಅವರೆಂದೂ ಬದುಕು ಮತ್ತು ಕಥೆ ಈ ಎರಡನ್ನೂ ಬೇರೆ ಬೇರೆಯಾಗಿ ನೋಡಿಲ್ಲ. ಅದು ನನಗಿಷ್ಟ. ಇಲ್ಲಿನ ಕಥೆಗಳು ಮಧ್ಯಾಹ್ನ ಬಿಸಿಲಿನಂತೆ ಶುರುವಾಗುತ್ತವೆ. ಮುಗಿಯುವ ಹೊತ್ತಿಗೆ ನಿಮ್ಮ ಎದೆಯಲ್ಲಿ ಮೋಡ ಕಟ್ಟುತ್ತದೆ. ಕಥೆ ಮುಗಿಸಿ ಎದ್ದು ಹೊರಟ ನಿಮ್ಮೊಳಗೊಂದು ಮಳೆ ಸುರಿಯುತ್ತದೆ. ಕಥೆ ಓದಿದವ ಹದವಾಗುತ್ತಾನೆ. ಹದವಾದ ಎದೆಯಲ್ಲಿ ಒಂದು ಮಾನವೀಯ ಸಸಿ ಗರಿಬಿಚ್ಚಲಿ ಎಂಬ ಕಾಳಜಿ ಈ ಕಥೆಗಾರನದು. ಇವರ ಕಥೆಗಳು ತಣ್ಣನೆಯ ಇಬ್ಬನಿಯ ಬಗ್ಗೆ ವ್ಯರ್ಥವಾಗಿ ಚರ್ಚಿಸುತ್ತಾ ಕೂರುವುದಿಲ್ಲ. ಮಧ್ಯಾಹ್ನದ ಸುಡು ಬಿಸಿಲಿನ ನೋವಿಗೆ ತಡಕಾಡುತ್ತವೆ. ಒಂದು ನೆರಳಿನಂಥಹ ಮದ್ದಿಗಾಗಿ ತಡಕಾಡುತ್ತವೆ. ಕಥೆಗಳಲ್ಲಿ ಅಗ್ನಿ ಪ್ರಾಮಾಣಿಕತೆ ಕಾಣಿಸುತ್ತದೆ. ಕಣ್ಣಿಗೊಡೆದು ಸುಮ್ಮನೆ ಮೋಡಿ ಮಾಡುವ ತಂತ್ರಗಾರಿಕೆ ಅವರದಲ್ಲ. ಇಲ್ಲಿ ಅಧಿಕ ಪ್ರಸಂಗವಿಲ್ಲ. ಮೊದಲ ಬಾರಿ ನಗರಕ್ಕೆ ಬರುವ ಹಳ್ಳಿಯ ಹೈದನ ಮುಗ್ಧತೆಯಿದೆ. ಇವು ಅಸಲಿ ಜವಾರಿ ಕಥೆಗಳು, ನೆಲದ ಕಥೆಗಳು. ಇಲ್ಲಿನ ಕಥೆಗಳು ಖಂಡಿತ ನಿಮಗೆ ಮೋಸಮಾಡುವುದಿಲ್ಲ ಎಂದಿದ್ದಾರೆ ಸದಾಶಿವ ಸೊರಟೂರು.

About the Author

ಸಂತೆಬೆನ್ನೂರು ಫೈಜ್ನಟ್ರಾಜ್

ಗೆಳೆಯ ನಟರಾಜ್ ಅವರ ಅಕಾಲಿಕ ಮರಣ ಸೈಯದ್‌ ಫೈಜುಲ್ಲಾ ಅವರಿಗೆ ಅರಗಿಸಿಕೊಳ್ಳಲಾಗಲೇ ಇಲ್ಲ. ಮಿತ್ರ ತನ್ನೊಂದಿಗೆ ಸದಾ ಇರಬೇಕೆಂಬ ಹಂಬಲ. ಪರಿಣಾಮ ತನ್ನ ಹೆಸರಿಗೆ ಗೆಳೆಯನ ಹೆಸರನ್ನು ಸೇರಿಸಿಕೊಂಡರು. ಸಂತೆಬೆನ್ನೂರು ಫೈಜ್ನಟ್ರಾಜ್ ಎಂದು ಬದಲಾದರು.  ಬಹುಶಃ ನಾಡಿನ ಪತ್ರಿಕೆಗಳನ್ನು ನಿಯತಕಾಲಿಕಗಳನ್ನು ನಿರಂತರ ಓದುವವರಿಗೆ ಫೈಜ್ನಟ್ರಾಜ್‌ ಹೆಸರು ಚಿರಪರಿಚಿತ. ಅವರ ಹೆಸರು ನಾಡಿನ ಯಾವುದಾದರೂ ಪತ್ರಿಕೆಯಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಹಾಗೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಲೇ ಇರುವ ನಿರಂತರತೆ ಯನ್ನು ಅವರು ಕಾಯ್ದುಕೊಂಡಿದ್ದಾರೆ.  ದಾವಣಗೆರೆ ಜಿಲ್ಲೆ ಚನ್ನಗಿರಿಯ ಸಂತೆಬೆನ್ನೂರು ಗ್ರಾಮದಲ್ಲಿ ಜನನ. ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕರು. ’ಎದೆಯೊಳಗಣ ತಲ್ಲಣ’, ...

READ MORE

Related Books