ಕ್ರೌಂಚ ಪಕ್ಷಿಗಳು

Author : ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ)

Pages 88

₹ 90.00




Year of Publication: 2016
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಕನ್ನಡದ ಪ್ರಮುಖ ಕಥೆಗಾರ್ತಿ ವೈದೇಹಿ ಅವರ ಹೊಸ ಹುಡುಕಾಟಗಳನ್ನು ದಾಖಲಿಸುವ ಸಂಕಲನ ಇದು. ಈ ಎಲ್ಲ ಕಥೆಗಳ ಹಿಂದೆ ‘ಗಂಡು’ ‘ಹೆಣ್ಣು’ಗಳು ಕೂಡಿರುವ ಒಂದು ಲೋಕವಿದೆ; ಆ ಲೋಕದಲ್ಲಿ ಮಿಥುನವಿರುವಂತೆಯೇ ವಿಚ್ಛೇದವೂ ಇದೆ; ಸ್ವಾರಸ್ಯದ ಮಾತುಗಾರಿಕೆಯಿರುವಷ್ಟೇ ಗಾಢವಾದ ವಿಷಾದದ ಮಂದ್ರಸ್ಥಾಯಿಯೂ ಇದೆ. ಇಲ್ಲಿ ಉಲ್ಲಾಸದ ಉಬ್ಬರ ಕೆಲವೊಮ್ಮೆ ಮೊರೆದು ಕಾಣಿಸಿಕೊಂಡರೆ ಕೆಲವೊಮ್ಮೆ ಹಿಂಸೆಯ ನೆರಳು ಚಾಚಿಕೊಳ್ಳುತ್ತದೆ. ಪಾತ್ರಗಳಲ್ಲಿ ಸನ್ನಿವೇಶಗಳಲ್ಲಿ ಮತ್ತು ಇಡಿಯ ಕಥನ ಕ್ರಮದಲ್ಲಿ ಹೀಗೆ, ವಿರುದ್ಧಭಾವಗಳನ್ನು ಮಿಥುನಗೊಳಿಸಿ ಕಾಣಿಸುವ ಒಂದು ವಿಶಿಷ್ಟ ಕಲೆಗಾರಿಕೆ ಪ್ರಾಯಶಃ ವೈದೇಹಿಯವರ ಈ ಕಥೆಗಳಲ್ಲಿ ಪ್ರಮುಖವಾದದ್ದು.

About the Author

ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ)
(12 February 1945)

ಡಾ. ವೈದೇಹಿ ಅವರ ಮೂಲ ಹೆಸರು ಜಾನಕಿ ಶ್ರೀನಿವಾಸಮೂರ್ತಿ.  ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದ ಅವರು ಕಾವ್ಯ, ಪ್ರಬಂಧ, ಮಕ್ಕಳ ಸಾಹಿತ್ಯ, ಜೀವನಚಿತ್ರ, ಕೃತಿ ಸಂಪಾದನೆ ಪ್ರಕಾರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಮಾನವ ಸಹಜ ಸಂಬಂಧಗಳು ಮತ್ತು ಹೆಣ್ಣಿನ ಭಾವತರಂಗಗಳನ್ನು ಹಿಡಿದಿಡುವ ಕಥೆ-ಕಾದಂಬರಿ ರಚಿಸಿರುವ ಲೇಖಕಿ. ಮರಗಿಡಬಳ್ಳಿ ಅಂತರಂಗದ ಪುಟಗಳು ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗಳು, ಅಮ್ಮಚ್ಚಿ ಎಂಬ ನೆನಪು. ಕತೆ ಕತೆ ಕಾರಣ (ಕಥಾ ಸಂಕಲನಗಳು), ಅಲೆಗಳಲ್ಲಿ ತರಂಗ (ಸಮಗ್ರ ಕಥಾ ಸಂಕಲನ), ಬಿಂದು ಬಿಂದಿಗೆ, ಪಾರಿಜಾತ ಹೂವ ಕಟ್ಟುವ ಕಾಯಕ (ಕವನ ಸಂಕಲನ), ಅಸ್ಪೃಶ್ಯರು (ಕಾದಂಬರಿ), ಮಲ್ಲಿನಾಥನ ಧ್ಯಾನ, ಮೇಜು ಮತ್ತು ...

READ MORE

Related Books