ನಾನಲ್ಲ ಮತ್ತು ಇತರ ಕತೆಗಳು

Author : ಪಿ. ಲಂಕೇಶ್

Pages 92

₹ 70.00




Year of Publication: 1970
Published by: ಲಂಕೇಶ್ ಪ್ರಕಾಶನ
Address: ಬಸವನಗುಡಿ, ಬೆಂಗಳೂರು-560004

Synopsys

‘ನಾನಲ್ಲ ಮತ್ತು ಇತರ ಕತೆಗಳು’ ಕೃತಿಯು ಪಿ. ಲಂಕೇಶ್ ಅವರ ಕತಾ ಸಂಕಲನವಾಗಿದೆ. ಇಲ್ಲಿ ಲೇಖಕ ತನ್ನ ಅರಿವಿಗೆ ಬಂದಿರುವಂತಹ ವಿಚಾರಗಳನ್ನು ಕತಾರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿಯೊಂದು ಕತೆಯು ಕೂಡ ಭಿನ್ನವಾಗಿದ್ದು ಹೊಸತನವನ್ನು ರೂಪಿಸುವಂತಿದೆ- ’ನಾನಲ್ಲ’ ಎನ್ನುವುದೇ ಇಲ್ಲಿನ ಪ್ರಮುಖ ವಿಚಾರವಾಗಿದ್ದು ಲೇಖಕ ಇದರ ಸುತ್ತಲೇ ಕತೆಯನ್ನು ಕಟ್ಟಿರುವುದನ್ನು ಕಾಣಬಹುದು.

 

About the Author

ಪಿ. ಲಂಕೇಶ್
(08 March 1935 - 25 January 2000)

ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್‌ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...

READ MORE

Related Books