ಮೀಯುವ ಆಟ

Author : ಎಚ್. ನಾಗವೇಣಿ

Pages 152

₹ 60.00




Year of Publication: 2004
Published by: ಲೋಹಿಯಾ ಪ್ರಕಾಶನ
Address: ಕ್ಷಿತಿಜ, ಕಪ್ಪಗಲ್ಲು ರಸ್ತೆ ಗಾಂಧಿನಗರ, ಬಳ್ಳಾರಿ - 583 103

Synopsys

'ಮೀಯುವ ಆಟ' ಉತ್ತಮವಾದ ಹತ್ತು ಕತೆಗಳನ್ನು ಒಳಗೊಂಡಿದೆ. ಮಾಸ್ತಿ ಸಂಪ್ರದಾಯದ ಕತೆ ಗಳಂತೆ ನಾಗವೇಣಿಯವರು ತಂತ್ರಕ್ಕೆ ತಲೆಕೆಡಿಸಿಕೊಳ್ಳದೆ ನೇರವಾಗಿ, ಪ್ರಭಾವಶಾಲಿಯಾಗಿ ಕತೆಗಳನ್ನು ಬರೆಯಬಲ್ಲರು ಎಂಬುದಕ್ಕೆ ಈ ಸಂಕಲನ ನಿದರ್ಶನವಾಗಿದೆ. ವೈದೇಹಿಯವರ ಕತೆಗಳಲ್ಲಿ ದಕ್ಷಿಣ ಕನ್ನಡದ ಪ್ರಪಂಚ ತೆರೆದುಕೊಳ್ಳುವಂತೆ ತುಳುನಾಡಿನ ಜನಜೀವನ ನಾಗವೇಣಿಯವರ ಕತೆಗಳಲ್ಲಿ ಸಮರ್ಥವಾಗಿ ಅಭಿವ್ಯಕ್ತವಾಗಿದೆ.

About the Author

ಎಚ್. ನಾಗವೇಣಿ
(29 November 1962)

ಎಚ್. ನಾಗವೇಣಿಯವರು ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ತಾಲ್ಲೂಕಿನ ಹೊನ್ನಕಟ್ಟೆಯಲ್ಲಿ 29-11-1962 ರಂದು ಜನಿಸಿದರು. ಕರಾವಳಿಯ ಸಾಂಸ್ಕೃತಿಕ ವಿಭಿನ್ನತೆಯ ಹಿನ್ನೆಲೆಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪಲ್ಲಟಗಳನ್ನು ಶೋಧಿಸುವ ಉತ್ತಮ ಕಥೆಗಳನ್ನು ನೀಡುತ್ತ ಡಾ. ಎಚ್. ನಾಗವೇಣಿ ಸಾಹಿತ್ಯಲೋಕದ ಗಮನ ಸೆಳೆದಿದ್ದಾರೆ. ವಿಜ್ಞಾನ, ಗ್ರಂಥಾಲಯ ವಿಜ್ಞಾನ, ಸಾಹಿತ್ಯ ಮತ್ತು ಶಿಕ್ಷಣ ಇವೆಲ್ಲದರಲ್ಲಿ ಪದವಿಗಳನ್ನು ಪಡೆದಿರುವ ಅವರು, ಈಗ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಗ್ರಂಥಾಲಯದ ಮುಖ್ಯ ಗ್ರಂಥಪಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಕಟಿತ ಕೃತಿಗಳು- ನಾಲ್ಕನೇ ನೀರು, ಮೀಯುವ ಆಟ, ಕಡಲು, ವಸುಂಧರೆಯ ಗ್ಯಾನ, ಸೂರ್ಯನಿಗೊಂದು ವೀಳ್ಯ (ಕಥಾ ಸಂಕಲನಗಳು), ಗಾಂಧಿ ...

READ MORE

Reviews

ಹೊಸತು- ಆಗಸ್ಟ್‌-2005 

'ಗಾಂಧಿ ಬಂದ' ಕಾದ೦ಬರಿಯಿಂದ ಪ್ರಸಿದ್ಧಿಯನ್ನು ಪಡೆದಿರುವ ಎಚ್‌. ನಾಗವೇಣಿ ಅವರ 'ಮೀಯುವ ಆಟ' ಉತ್ತಮವಾದ ಹತ್ತು ಕತೆಗಳನ್ನು ಒಳಗೊಂಡಿದೆ. ಮಾಸ್ತಿ ಸಂಪ್ರದಾಯದ ಕತೆ ಗಳಂತೆ ನಾಗವೇಣಿಯವರು ತಂತ್ರಕ್ಕೆ ತಲೆಕೆಡಿಸಿಕೊಳ್ಳದೆ ನೇರವಾಗಿ, ಪ್ರಭಾವಶಾಲಿಯಾಗಿ ಕತೆಗಳನ್ನು ಬರೆಯಬಲ್ಲರು ಎಂಬುದಕ್ಕೆ ಈ ಸಂಕಲನ ನಿದರ್ಶನವಾಗಿದೆ. ವೈದೇಹಿಯವರ ಕತೆಗಳಲ್ಲಿ ದಕ್ಷಿಣ ಕನ್ನಡದ ಪ್ರಪಂಚ ತೆರೆದುಕೊಳ್ಳುವಂತೆ ತುಳುನಾಡಿನ ಜನಜೀವನ ನಾಗವೇಣಿಯವರ ಕತೆಗಳಲ್ಲಿ ಸಮರ್ಥವಾಗಿ ಅಭಿವ್ಯಕ್ತವಾಗಿದೆ. ಉಳ್ಳವರ ಪ್ರಪಂಚದಲ್ಲಿ ಸಾಮಾನ್ಯ ವ್ಯಕ್ತಿಗಳು ಅನುಭವಿಸುವ ನೋವು, ಅವಮಾನ ಮತ್ತು ಪ್ರತಿಭಟನೆಗಳನ್ನು ಇಲ್ಲಿನ ಮೀಯುವ ಆಟ, ಧಣಿಗಳ ಬೆಳ್ಳಿಲೋಟ ಮುಂತಾದ ಕತೆಗಳು ಚಿತ್ರಿಸುತ್ತವೆ. ಸ್ತ್ರೀ ಜಗತ್ತಿನ ವಿಶಿಷ್ಟತೆಗಳನ್ನು, ನೋವು-ನಲಿವುಗಳನ್ನು ಒಡವೆ, ತಾಯ್ತನ ಮುಂತಾದ ಕತೆಗಳು ಕಲಾತ್ಮಕವಾಗಿ ತಿಳಿಸುತ್ತವೆ. ಸಿರಿ ತೋರಿದ ದಾರಿ ಅದ್ಭುತದಷ್ಟು ಜಾನಪದ ಕತೆಯ ಶೈಲಿಯನ್ನು ಒಳಗೊಂಡಿದೆ.

Related Books