ಅಸಂಗ

Author : ಎಂ. ರಾಘವೇಂದ್ರ ಪ್ರಭು

Pages 112

₹ 100.00
Published by: ಆಕೃತಿ ಆಶಯ ಪಬ್ಲಿಕೇಷನ್ಸ್
Address: ಲೈಟ್‌ಹೌಸ್‌ ಹಿಲ್‌ ರೋಡ್‌, ಮಂಗಳೂರು-575001

Synopsys

`ಅಸಂಗ’ ಎಂ. ರಾಘವೇಂದ್ರ ಪ್ರಭು ಅವರ ಕಥಾ ಸಂಕಲನವಾಗಿದೆ. ಈ ಕೃತಿಯಲ್ಲಿ ಒಂಭತ್ತು ಕತೆಗಳಿದ್ದು, ಕತೆಗಳಲ್ಲಿ ಸಮಸ್ಯೆಗಳ ಚಿತ್ರಣ ಮಾತ್ರವಲ್ಲ ಆ ಸಮಸ್ಯೆಗಳಿಗೆ ಪರಿಹಾರವನ್ನು ಅರಸುವ ಪ್ರಯತ್ನವೂ ನಡೆಯುತ್ತದೆ. ಅಸಂಗ ಎಂಬ ಪದವನ್ನು ’ಅಸಂಗೋಹಂ’ ಎಂಬ ಬೃಹದಾರಣ್ಯಕದ ಮಂತ್ರವೊಂದರಿಂದ ಆಯ್ದುಕೊಂಡದ್ದಾಗಿ ಲೇಖಕರು ಹೇಳಿಕೊಂಡಿದ್ದಾರೆ. ಸಂಗರಹಿತ ಅಥವಾ ಏಕಾಂಗಿ ಎಂದಿದರ ಅರ್ಥವಂತೆ. ಮೊದಲ ಕತೆಯ ಚಂದ್ರಶೇಖರ ಭುವನಳ ಸಂಗಕ್ಕಾಗಿ ಚಡಪಡಿಸುತ್ತಾ ಏಕಾಂಗಿಯಾಗಿಬಿಟ್ಟು, ರಾಮಕೃಷ್ಣ ಆಶ್ರಮದ ಪ್ರವಚನವೊಂದರಲ್ಲಿ ತನ್ನ ಅಸಂಗತ್ವಕ್ಕೆ ಅರ್ಥ ಹುಡುಕುತ್ತಾನೆ. ಜೋಡಿ ಕಾಮನಬಿಲ್ಲು ಕತೆಯಲ್ಲೂ ಅಸಂಗತ್ವಕ್ಕೆ ಪರಿಹಾರ ಹುಡುಕುವ ಪ್ರಯತ್ನವಿದೆ. ಮೃಗಜಲದ ಬೆಂಬತ್ತಿ ಕತೆಯ ವ್ಯಾಪ್ತಿಯೂ ಇಂತಹದೇ. ಮೂರನೆಯ ಕತೆ ’ನಾಡು ನುಡಿಯ..’ ಲವ್ ಜೆಹಾದಿನ ಹಿನ್ನೆಲೆಯ ಆದರೆ ಪೊಸಿಟೀವ್ ಮೆಸೇಜ್ ಕೊಡುವ ಕಥೆ. ಸ್ನೇಹಿತರ ಮನೆಯಲ್ಲಿ ಕಂಡ ಕೃಷ್ಣನ ಪಂಚಲೋಹದ ವಿಗ್ರಹವನ್ನು ’ಮಾನಸಿಕವಾಗಿ ಕದ್ದೆ’ ಎಂದುಕೊಳ್ಳುವ ನಿರೂಪಕ ಬೆಣ್ಣೆಕಳ್ಳ ಕತೆಯ ವಸ್ತು. ಪಕ್ಷಾಂತರಿ ಕತೆಯ ವಸ್ತು ಸೋಗಿನ ವಿಚಾರವಾದ. ಗೋಪುರದ ಗಂಟೆ ಕತೆಯಲ್ಲಿ ಚರ್ಚಿನಲ್ಲಿ ನಡೆವ ಅನೈತಿಕ ವ್ಯವಹಾರದ ಚಿತ್ರಣವಿದೆ.

About the Author

ಎಂ. ರಾಘವೇಂದ್ರ ಪ್ರಭು

ಎಂ. ರಾಘವೇಂದ್ರ ಪ್ರಭು ಅವರು ಮೂಲತಃ ಮಂಗಳೂರಿನವರು. ಬನಾರಸ್ ವಿಶ್ವವಿದ್ಯಾಲಯದಲ್ಲಿ ಪ್ರಾಚೀನ ಭಾರತೀಯ ಸಂಸ್ಕೃತಿ ಮತ್ತು ಪುರಾತತ್ವ ಶಾಸ್ತ್ರ ಎಂ.ಎ ಯಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದು ತೇರ್ಗಡೆಯಾಗಿರುತ್ತಾರೆ. ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಮೂವತ್ತು ವರ್ಷಗಳ ಕಾಲ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿರುತ್ತಾರೆ. ಕೃತಿಗಳು: ಅಸಂಗ, ನಾಯಿಯ ಅಂತ್ಯ ಸಂಸ್ಕಾರ, ನಿತ್ಯಾವತಾರಗಳು(ಕಥಾ ಸಂಕಲನ), ಕೈವಲ್ಯ-ವೇದೋಪನಿಷತ್ತುಗಳು, ಭಾರತೀಯ ದರ್ಶನಗಳ ಸರಳ ನಿರೂಪಣೆ(ಆಧ್ಯಾತ್ಮಿಕ ಕೃತಿಗಳು), ಬಹುತ್ವ ಭಾರತ ಕಟ್ಟಿದವರು(ಇತಿಹಾಸ) ...

READ MORE

Reviews

Pusthakapremi(2013, ನವೆಂಬರ್‍)

Related Books