ಜಿನ್ನ್ ಮತ್ತು ಪರ್ಷಿಯನ್ ಕ್ಯಾಟ್

Author : ಮುನವ್ವರ್ ಜೋಗಿಬೆಟ್ಟು

Pages 118

₹ 120.00




Year of Publication: 2023
Published by: ಕಾನ್ಕೇವ್ ಲ್ಯಾಬ್ ಮೀಡಿಯಾ
Address: ಬೆಂಗಳೂರು

Synopsys

‘ಜಿನ್ನ್ ಮತ್ತು ಪರ್ಷಿಯನ್ ಕ್ಯಾಟ್’ ಕೃತಿಯು ಮುನವ್ವರ್ ಜೋಗಿಬೆಟ್ಟು ಅವರ ಕಥಾಸಂಕಲನವಾಗಿದೆ. ಈ ಕೃತಿಯಲ್ಲಿ ಜಿನ್ನ್ ಕುರಿತ ವಿಚಾರಗಳನ್ನು ಲೇಖಕರು ಹೀಗೆ ಕಟ್ಟಿಕೊಟ್ಟಿದ್ದಾರೆ; ಜಿನ್ನ್ ಹೇಳಿದ ಬಳಿಕ ಸುಳ್ಳಾಗಿದ್ದೇ ಇಲ್ಲ. ಮನುಷ್ಯನಂತೆ ಬದುಕುವ ಪ್ರಕೃತಿಯ ಅಗೋಚರ ಶಕ್ತಿಯದು. ಕ್ಷಣಮಾತ್ರದಲ್ಲಿ ಯಾರ ಕಣ್ಣಿಗೂ ಬೀಳದೆ ಸಂಚರಿಸುವ ತಾಕತ್ತು ಜಿನ್ನ್ ಗಳಿಗಿದೆಯಂತೆ. ತನಿಯನ ಖುಷಿಗೆ ಪಾರವಿರಲಿಲ್ಲ. ಪ್ರೀತಿಯ ದನ ಸದ್ಯ ಜೀವಂತವಾಗಿದೆ ಎಂದು ತಿಳಿದ ಮೇಲೆ ಅವನಿಗೆ ಕತ್ತಲೆಯ ಭಯ ಸಣ್ಣಗೆ ದೂರವಾಗಿ, ಕಣ್ಣ ಮುಂದೆ ಗುಡ್ಡದ ತಪ್ಪಲಿನ ಗೇರು ಮರದ ಕೆಳಗೆ ದನ ಕರುವನ್ನು ನೆಕ್ಕುತ್ತಿರುವ ದೃಶ್ಯ ತೇಲಿ ಬಂತು ಎಂಬುವುದನ್ನು ಇಲ್ಲಿ ವಿವರಿಸಲಾಗಿದೆ.

About the Author

ಮುನವ್ವರ್ ಜೋಗಿಬೆಟ್ಟು
(12 May 1994)

ಮುನವ್ವರ್ ಜೋಗಿಬೆಟ್ಟು ಅವರ ಊರು ಉಪ್ಪಿನಂಗಡಿ ಪಟ್ಟಣಕ್ಕೆ ಸಮೀಪವಿರುವ ಜೋಗಿಬೆಟ್ಟು. ಇಷ್ಟದ ಲೇಖಕ ತೇಜಸ್ವಿ ಮತ್ತು ಹಳ್ಳಿ ಸೊಗಡಿನಲ್ಲೇ  ಬೆಳೆದಿದ್ದರಿಂದ ಪ್ರಾಣಿ ಪ್ರಪಂಚ, ಪರಿಸರದ ಬಗ್ಗೆ ವಿಶೇಷ ಕಾಳಜಿಯೊಂದಿರುವ ಅವರು ಪ್ರಸ್ತುತ ಕೆಂಡ ಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ' ಪರಿಸರ ಕಥನ' ಅಂಕಣಗಳು ಬರೆಯುತ್ತಿದ್ದಾರೆ. ಮುನವ್ವರ್ ಅವರ  ' ಮೊಗ್ಗು' ಮತ್ತು ' ಇಶ್ಖಿನ ಒರತೆಗಳು' ಕವನ ಸಂಕಲನಗಳು ಪ್ರಕಟವಾಗಿವೆ. ಜೊತೆಗೆ ಅವರ ಹಲವು ಲೇಖನ, ಕಥೆ , ಕವಿತೆಗಳು ಪ್ರಜಾವಾಣಿ, ವಾರ್ತಾ ಭಾರತಿ, ವಿಶ್ವವಾಣಿ ಮತ್ತು ಇತರ ಪತ್ರಿಕೆಗಳಲ್ಲೂ ಪ್ರಕಟವಾಗಿವೆ. ಸದ್ಯ ಮಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ...

READ MORE

Related Books