ಜೋತಯ್ಯನ ಬಿದಿರು ಬುಟ್ಟಿ

Author : ತೇಜಸ್ವಿನಿ ಹೆಗಡೆ

₹ 120.00




Year of Publication: 2022
Published by: ತೇಜು ಪಬ್ಲಿಕೇಷನ್ಸ್
Phone: 8660404034

Synopsys

ತೇಜಸ್ವಿನಿ ಹೆಗಡೆ ಅವರ ಮೂರನೇ ಕಥಾಸಂಕಲನ ಜೋತಯ್ಯನ ಬಿದಿರು ಬುಟ್ಟಿ. ಪ್ರಸ್ತುತ ಕಥಾಸಂಕಲನದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುವ 6 ಕಥೆಗಳು ಮತ್ತು ವಿವಿಧ ಮ್ಯಾಗಜೀನುಗಳಲ್ಲಿ ಪ್ರಕಟಗೊಂಡಿರುವ ಆಯ್ದ 4 ಕಥೆಗಳು ಸೇರಿ ಒಟ್ಟೂ 10 ಕಥೆಗಳಿವೆ. ಕೆ.ಸತ್ಯನಾರಾಯಣ ಅವರು ಕೃತಿಯಲ್ಲಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ತೇಜಸ್ವಿನಿಯವರ ವಿಶಿಷ್ಟತೆಯಿರುವುದು ಅವರ ಹೆಣ್ಣು ಕತೆಗಳಲ್ಲಿ. ಇಲ್ಲಿಯ ಬಹುಪಾಲು ಕತೆಗಳಲ್ಲಿ ಹೆಂಗಸರೇ ಕತೆಗಳನ್ನು ಹೇಳುವವರು, ಕೇಳಿಸಿಕೊಳ್ಳುವವರು, ಬರೆಸಿಕೊಳ್ಳುವವರು, ನಿರೂಪಿಸುವವರು, ದಿಕ್ಕುತೋರಿಸುವವರು- ಎಲ್ಲರೂ ಎಲ್ಲವೂ ಆಗಿದ್ದಾರೆ. ಬಾಲ್ಯದ ಗುಟ್ಟುಗಳು, ಕೌಟುಂಬಿಕ ಗುಟ್ಟುಗಳು, ದಾಂಪತ್ಯದ ಅಸಹಾಯಕತೆ, ಅಪೂರ್ಣತೆ-ಇಲ್ಲಿನ ದಿನನಿತ್ಯದ ತೋಡುಕೊಳ್ಳುವಿಕೆಯ ಮೂಲಕ ಪ್ರರ್ಶಾತವಾಗಿ ಆದರೆ ನಿರ್ಣಾಯಕವಾಗಿ ಸ್ಫೋಟಗೊಳ್ಳಲು ಕಾದಿದೆ ಎಂಬುದಾಗಿ ಹೇಳಿದ್ದಾರೆ.

About the Author

ತೇಜಸ್ವಿನಿ ಹೆಗಡೆ

ಲೇಖಕಿ ತೇಜಸ್ವಿನಿ ಹೆಗ್ಗಡೆ ಮೂಲತಃ ಉತ್ತರ ಕನ್ನಡದ ಶಿರಸಿಯವರು. ಪ್ರಸ್ತುತ ಬೆಂಗಳೂರು ನಿವಾಸಿಗಳು. ತಂದೆ ಡಾ. ಜಿ.ಎನ್. ಭಟ್, ತಾಯಿ ಜಯಲಕ್ಷಿ ಭಟ್.‌ ಮಂಗಳೂರಿನ ಕೆನರಾ ಡಿಗ್ರಿ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾಭ್ಯಾಸ ಪೂರೈಸಿರುವ ತೇಜಸ್ವಿನಿ, ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ (ಕನ್ನಡ) ಎಂ.ಎ ಪದವೀಧರರು.  ಕೃತಿಗಳು: ಚಿಗುರು (ಕವನ ಸಂಕಲನ),  ಹಂಸಯಾನ ಕಾದಂಬರಿ- 2017),  ಪ್ರಶಸ್ತಿ-ಪುರಸ್ಕಾರಗಳು: ಆಳ್ಳ್ವಾಸ್‌ ನುಡಿಸಿರಿಯ ಗೌರವಧನ ಪುರಸ್ಕಾರಕ್ಕೆ ಆಯ್ಕೆ, 2018 ರಲ್ಲಿ ಹಂಸಯಾನ ಕಾದಂಬರಿಗೆ ʼಮಾಸ್ತಿ ಪುರಸ್ಕಾರ’, ಲಭಿಸಿದೆ.  ...

READ MORE

Related Books