ನಂದನವನ

Author : ಕಾಪಸೆ ರೇವಪ್ಪ

Pages 135

₹ 10.00
Year of Publication: 1936
Published by: ಅರವಿಂದ ಗ್ರಂಥಮಾಲಾ
Address: ಹಲಸಂಗಿ, ಬಿಜಾಪುರ

Synopsys

ರೂಪಕ ಚಿತ್ರಕ ಕಥೆಗಳು ಎಂದು ಈ ಸಂಕಲನವನ್ನು ಕರೆಯಲಾಗಿದೆ. ಹಲಸಂಗಿ ಗೆಳೆಯರಲ್ಲಿ ಒಬ್ಬರಾಗಿದ್ದ ಕಾಪಸೆ ರೇವಪ್ಪನವರ ಕೃತಿ ಇದು. ಗ್ರಂಥಮಾಲಾ ಸಂಪಾದಕರಾದ ಕವಿ ಮಧುರಚನ್ನರು ಬರೆಯುತ್ತ, ಗೆಳೆಯ ಕಾಪಸೆ ರೇವಪ್ಪನವರ ಚಿತ್ರಕಲಾ ಪ್ರವೃತ್ತಿಯು ನಮ್ಮ ನಾಡಿಗೊಂದು ಹೊಸ ಬಗೆಯ ಚಿತ್ರಕ ಕಥಾ ಸಾಹಿತ್ಯವನ್ನು ಒದಗಿಸಿದೆ. ಕುಂಚದ ಮೃದುರೇಖೆಗಳ ರೂಪಾಂತರದಂತಿರುವ ಲಾಲಿತ್ಯವು ಇವುಗಳ ಮೆರುಗು ಎಂದಿದ್ದಾರೆ. ಈ ಸಂಗ್ರಹದಲ್ಲಿ ಇಂಥ ೮ ಕಥನಗಳು ಇವೆ.

About the Author

ಕಾಪಸೆ ರೇವಪ್ಪ

ಹಲಸಂಗಿ ಗೆಳಯರಲ್ಲಿ ಕಿರಿಯರು ಕಾಪಸೆ ರೇವಪ್ಪ. ಬಾಲ್ಯದಿಂದಲೇ ಕವಿತೆ ಬರೆಯಲು ಆರಂಭಿಸಿದ್ದ ಅವರು, ಮಧುರಚನ್ನರ ಕಾವ್ಯ ಅಭಿಮಾನಿಯಾಗಿದ್ದರು. ಅನಂತರ ಅವರು ಜಾನಪದದಂಥ ಕ್ಷೇತ್ರದಲ್ಲಿ ಮಾಡಿದ ಕೆಲಸ ದೊಡ್ಡದು. ನಂದನವನ, ಮಲ್ಲಿಗೆ ದಂಡೆ, ಸನ್ಯಾಸಿ ಅವರ ಪ್ರಮುಖ ಕೃತಿಗಳು.. ...

READ MORE

Related Books