ನಡೆದಷ್ಟು ದಾರಿ ದೂರ

Author : ಸಿರಿ ಹುಲಿಕಲ್

Pages 112

₹ 70.00




Year of Publication: 2010
Published by: ಅಂಕಿತ ಪುಸ್ತಕ
Address: #53, ಶಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು 560004
Phone: 080 2661 7100

Synopsys

‘ನಡೆದಷ್ಟು ದಾರಿ ದೂರ’ ಕೃತಿಯು ಸಿರಿ ಹುಲಿಕಲ್ ಅವರ ಕತಾ ಸಂಕಲನವಾಗಿದೆ. ಕತೆ ಅನ್ನುವಂತದ್ದು ನಮ್ಮ ಕಾಲವನ್ನು ಪ್ರತಿನಿಧಿಸುತ್ತಿರಬೇಕು ಮತ್ತು ಅದರ ಬೇರು ಆನಾದಿಗೂ ಚಾಚಿಕೊಂಡಿರಬೇಕು ಎನ್ನುವುದನ್ನು ಈ ಕೃತಿ ಅರ್ಥಮಾಡಿಸುತ್ತದೆ. ಪುರಾಣದ ಪಾತ್ರವೊಂದು ವರ್ತಮಾನದ ಜೊತೆ ಮುಖಾಮುಖಿಯಾಗುವ ಹೊಸ ಕ್ರಮವೊಂದನ್ನು ‘ ನಡೆದಷ್ಟೂ ದಾರಿ ದೂರ’ ಕತೆಯಲ್ಲಿ ನೋಡಬಹುದು. ಪ್ರತಿಯೊಂದು ಕತೆಯಲ್ಲೂ ಕಡೆಗಣಿಸಲಾರದಂಥ ವಿಚಿತ್ರ ಉದ್ವೇಗ, ನಮ್ಮೊಳಗೂ ಹರಿಯುವ ಅಪರಿಮಿತ ಹುಮ್ಮಸ್ಸು ಮತ್ತು ಎಲ್ಲವನ್ನೂ ನಿರ್ಲಿಪ್ತವಾಗಿ ನೋಡಲು ಕಲಿಸುವ ವಿಷಾದ ಇಲ್ಲಿ ವ್ಯಕ್ತವಾಗುತ್ತದೆ. ಸಂಬಂಧಗಳ ಕುರಿತು ಸಾರ್ವತ್ರಿಕವಾಗಿ ಕಾಣಿಸುವ ಅಕ್ಕರೆ ಮತ್ತು ಅಸಹನೆ ಎರಡನ್ನೂ ಈ ಕತೆಗಳು ಅನಾವರಣಗೊಳಿಸುತ್ತವೆ.

About the Author

ಸಿರಿ ಹುಲಿಕಲ್

ಕವಯತ್ರಿ ಸಿರಿ ಹುಲಿಕಲ್ ಅವರು ಮೂಲತಃ ಚಿಕ್ಕಮಗಳೂರಿನವರು. ಓದು-ಬರಹ ಇವರ ಆಸಕ್ತಿ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಕೃತಿಗಳು ; ನಡೆದಷ್ಟು ದಾರಿ ದೂರ. ...

READ MORE

Related Books