ನಮ್ಮ ಸಾವಿಗೆ ನಾವೇಕೆ ಅಳುವುದಿಲ್ಲ...!

Author : ಸಿ.ಎಚ್. ರಾಜಶೇಖರ್

Pages 156

₹ 108.00




Year of Publication: 2012
Published by: ಸೌಮ್ಯಶ್ರೀ ಪುಸ್ತಕ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಸಿ.ಎಚ್. ರಾಜಶೇಖರ ಅವರ ಕೃತಿ-ನಮ್ಮ ಸಾವಿಗೆ ನಾವೇಕೆ ಅಳುವುದಿಲ್ಲ...! ಅಮರ ಜಾತಕ ಕಥೆಗಳನ್ನು ಆಧರಿಸಿದ ಚಿಂತನೆಗಳು ಇಲ್ಲಿವೆ. ಇಲ್ಲಿನ ಕಥೆಗಳ ಉದ್ದೇಶ, ಗುರಿ, ಮತ್ತು ಭರವಸೆ ಎಂದರೆ ಬದುಕಿನ ಉನ್ನತಿ, ಶ್ರೇಷ್ಠತೆ, ಯಶಸ್ಸು, ಪರಿಪೂರ್ಣತೆ ಹಾಗೂ ಸಂಕೋಲೆಗಳಿಂದ ವಿಮುಕ್ತಿಯೇ ಆಗಿದೆ. ಇದು ಬುದ್ಧನ ಜೀವನದ ಕತೆಯನ್ನು ಪ್ರತಿಬಿಂಬಿಸುವ ಬೃಹತ್ ಜ್ಞಾನಕೋಶ “ಸ್ವರ್ಣ ಖಜಾನೆ“ ಯಾಗಿದೆ. 25 ಬಿಡಿ ಸಂಪುಗಳ ಸಮಗ್ರ ಬುದ್ಧ ಸಾಹಿತ್ಯ ಮಾಲೆಯಡಿ ಈ ಕೃತಿ ಪ್ರಕಟಿಸಿದೆ. ಜೀವನದ ಅಂತಿಮ ಗುರಿ, ಸಾರ್ಥಕತೆ, ಮೋಕ್ಷ ಇತ್ಯಾದಿ ಪರಿಕಲ್ಪನೆಗಳನ್ನು ತಿಳೀಯಪಡಿಸುವುದು ಮತ್ತು ನಮ್ಮ ಬಹುತೇಕ ದುಃಖಗಳಿಗೆ ನಾವೇ ಕಾರಣರಾಗಿರುತ್ತೇವೆ ಎಂಬ ಸತ್ಯವನ್ನು ಮನದಟ್ಟು ಮಾಡುವುದು ಇಲ್ಲಿಯ ಬರೆಹಗಳ ಪ್ರಮುಖ ಅಂಶವಾಗಿದೆ. ಈ ಕೃತಿಯ ಶೀರ್ಷಿಕೆಗಳು ಹೀಗಿವೆ; ಸತ್ಪುರುಷರ ಬಳಿ ಹೋಗುವುದೇ ಶ್ರೇಯಸ್ಸು, ನನಗೂ ಸ್ವಲ್ಪ ಮಾಂಸ ಕೊಡು, ಪುರೋಹಿತ ಧರ್ಮವನ್ನೇಕೆ ಮಾರಿದೆ? ತುಪ್ಪದನ್ನಕ್ಕಾಗಿ, ನಾವೇಕೆ ನಮ್ಮ ದೌರ್ಬಲ್ಯವನ್ನು ಜಯಿಸಬೇಕು, ಬೋಧಿಸತ್ವರೆ ನಮಗೇಕೆ ಪುರೋಹಿತ ಪದವಿ ಬೇಡ, ಕಳ್ಳ ಸಿಕ್ಕರೆ ಬೇವಿನ ಮರಕ್ಕೇನು ನಷ್ಟ ಎಂದರೆ ಏನು..! ಮೂರ್ಖರೇಕೆ ಮಣ್ಣಿನ ಮಡಿಕೆಯಂತೆ..!, ರಾಜ ಈಗ ನೀನೆಂಥಹ ವಾದಿ, ಹೌದು ನಾನು ಕುರೂಪಿ ಆದರೆ ಪ್ರೇಮಮಯಿ...!!, ಗೌಜಲು ಹಕ್ಕಿ ಹೇಳಿದ ಕಥೆ, ಒಂದು ಕೊಡೆ ಒಂದು ಜೊತೆ ಪಾದರಕ್ಷೆಯ ಕಥೆಗಳನ್ನು ಒಳಗೊಂಡಿದೆ. 

About the Author

ಸಿ.ಎಚ್. ರಾಜಶೇಖರ್

ಲೇಖಕ ಸಿ.ಎಚ್. ರಾಜಶೇಖರ್ ಅವರು ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟಗಳನ್ನು ರಚಿಸಿದ್ದಾರೆ. 'ಬುದ್ಧ ತನ್ನ ತಾ ಗೆದ್ದವನೇ ಸಂಗ್ರಾಮ ವಿಜೇತನೆಂದ', 'ಬುದ್ಧ ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ', 'ಬುದ್ಧ ನಿನ್ನ ಅಂತರಂಗದ ಧ್ವನಿಯೇ ಭಾಗ್ಯವೆಂದ', 'ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ', 'ಸಿದ್ಧಾರ್ಥ ಗೌತಮ ಬುದ್ಧನಾದ ಪರಿ', 'ಬುದ್ಧ ನಂದನ ಬೀಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ', 'ಬುದ್ಧ ಮೋಹ ನಿರ್ಮೋಹಗಳ', 'ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲಾ', 'ಬುದ್ಧನ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು', 'ಬುದ್ಧ ಸಾಸಿವೆಕಾಳಲ್ಲಿ ಸಾಸಿರ ಕಥೆ ಸಾರಿದ ಕಿಸಾಗೋತಮಿಗೆ', 'ಹೆಣ್ಣು ಎಂದರೆ ...

READ MORE

Related Books