ಮುಖವಾಡದ ಮಾಫಿಯಾದಲ್ಲಿ

Author : ಶಿವಕುಮಾರ ಚೆನ್ನಪ್ಪನವರ

Pages 64

₹ 85.00
Year of Publication: 2016
Published by: ನಿರಂತರ ಪ್ರಕಾಶನ
Address: ಬೆಟಗೇರಿ, ಗದಗ
Phone: 8884268702

Synopsys

ಮುಖವಾಡದ ಮಾಫಿಯಾದಲ್ಲಿ-ಎಂಬುದು ಶಿವಕುಮಾರ ಚೆನ್ನಪ್ಪನವರ ಬರೆದ ಕಥೆಗಳ ಸಂಕಲನವಿದು. ಮುಖವಾಡ ಧರಿಸಿಯೇ ಮಾತನಾಡುವ ಜನರ ಸಂಖ್ಯೆಯೇ ಸಮಾಜದಲ್ಲಿ ಹೆಚ್ಚುತ್ತಿದೆ. ಹೊರ ನೋಟಕ್ಕೊಂದು ಒಳ ಮನಸ್ಸಿಗೊಂದು ನಾಟಕೀಯವಾಗಿ ಪಾತ್ರ ನಿರ್ವಹಿಸುವ ಗ್ರಾಮೀಣ ಘಟನೆ-ಸನ್ನಿವೇಶಗಳ ಚಿತ್ರಣಗಳನ್ನು ಇಲ್ಲಿಯ ಕಥೆಗಳು ಸಮರ್ಥವಾಗಿ ಬಿಂಬಿಸುತ್ತವೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ 11 ಕಥೆಗಳನ್ನು ಈ ಸಂಕಲನವು ಒಳಗೊಂಡಿದೆ. 

 

About the Author

ಶಿವಕುಮಾರ ಚೆನ್ನಪ್ಪನವರ
(01 June 1990)

ಮೂಲತಃ ಹಾವೇರಿಯವರಾದ ಶಿವಕುಮಾರ ಚೆನ್ನಪ್ಪನವರ ಅವರು 01-06-1990 ರಂದು ಜನಿಸಿದರು. ಮುಖವಾಡದ ಮಾಫಿಯಾದಲ್ಲಿ -ಇವರ ಮೊದಲ ಕಥಾ ಸಂಕಲನ. ವಿಜಯ ಕರ್ನಾಟಕ ದಿನಪತ್ರಿಕೆಯ 2019ರ ಯುಗಾದಿ ಕಥಾಸ್ಪರ್ಧೆಯಲ್ಲಿ 3ನೇ ಬಹುಮಾನ, 2012ರ ಬೇಂದ್ರೆ ಕಥಾ ಪುರಸ್ಕಾರ, 2009ರಲ್ಲಿ ವಿಶ್ವ ಮಾನವ ಕುವೆಂಪು ಹೆಸರಿನಲ್ಲಿ ವಿದ್ಯಾರ್ಥಿ  ಕಾವ್ಯ ಪುರಸ್ಕಾರ ಹಾಗೂ ಇತ್ತೀಚಿಗೆ ರಾಜೀವ್ ಗಾಂಧಿ ಯುವ ಸಾಹಿತಿ ಪುರಸ್ಕಾರ ಲಭಿಸಿದೆ.      ...

READ MORE

Related Books