ಲೇಖಕಿ ಜಯಶ್ರೀ ಕಾಸರವಳ್ಳಿ ಅವರ ಕಥೆಗಳ ಸಂಕಲನ-ದಿನಚರಿಯ ಕಡೇ ಪುಟದಿಂದ. ಅನುಭವಕ್ಕೆ ಆಳವಾಗಿ ದಕ್ಕಿರುವ ವಸ್ತುವನ್ನೇ ಇಲ್ಲಿಯ ಕಥೆಗಳಿಗೆ ರೂಪು ನೀಡಿದ್ದು, ಹಲವು ಆಯಾಮಗಳಲ್ಲಿ ತೆರೆದು ತೋರುತ್ತವೆ. ಹೆಣ್ಣಿನ ಘರ್ಷಣೆಗಳ ಮೂಲವೂ ಇಲ್ಲಿಯ ಬಹುತೇಕ ಕಥೆಗಳ ವಸ್ತು. ಮಾನವ ಅನುಭವದ ನೆಲೆ. ಆಧುನಿಕತೆಯೂ ಸೇರಿದಂತೆ ಇತರ ಹತ್ತು ಹಲವು ಕಾರಣಗಳಿಗಾಗಿ ಅನೂಹ್ಯ ಬದಲಾವಣೆಗಳನ್ನು ಇಲ್ಲಿಯ ಕಥೆಗಳು ಒಳಗೊಂಡಿವೆ.
'ತಂತಿ ಬೇಲಿಯ ಒಂಟಿ ಕಾಗೆ' ಕಥಾ ಸಂಕಲನದ ಮೂಲಕ ಸಾಹಿತ್ಯ ಲೋಕ ಪ್ರವೇಶಿಸಿದ ಜಯಶ್ರೀ ಕಾಸರವಳ್ಳಿ ಅವರು ಮೊದಲ ಕೃತಿಗೇ ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಮಲ್ಲಿಕಾ ಪ್ರಶಸ್ತಿ ಹೀಗೆ ಕೆಲವು ಪ್ರಶಸ್ತಿ ಪಡೆದಿದ್ದಾರೆ. ಮಾರ್ಕೆಸ್ ಸೇರಿದಂತೆ ಹಲವು ಖ್ಯಾತ ಕತೆಗಾರರ ಕತೆಗಳನ್ನು ಜಯಶ್ರೀ ಕನ್ನಡಕ್ಕೆ ಅನುವಾದಿಸಿದ್ದಾರೆ. ನವದೆಹಲಿಯ 'ತುಲಿ ಕಾ' ಪ್ರಕಾಶನದ ಹತ್ತಕ್ಕೂ ಹೆಚ್ಚು ಮಕ್ಕಳ ಪುಸ್ತಕಗಳನ್ನು ಅವರು ಕನ್ನಡೀಕರಿಸಿದ್ದಾರೆ. ...
READ MORE