ಕೆಂಪು ದೀಪದ ಮನೆಯಲ್ಲಿ

Author : ಕುಮಾರ ಬೇಂದ್ರೆ

Pages 120

₹ 110.00




Year of Publication: 2021
Published by: ಸಾಗರಿ ಪ್ರಕಾಶನ
Address: ಮೈಸೂರು
Phone: 9945664214

Synopsys

‘ಕೆಂಪು ದೀಪದ ಮನೆಯಲ್ಲಿ’ ಕೃತಿಯು ಕುಮಾರ ಬೇಂದ್ರೆ ಅವರ ಕತಾಸಂಕಲನವಾಗಿದೆ. ನಿರುದ್ಯೋಗವು ಸಾಮಾಜಿಕ ಸಮಸ್ಯೆ , ಪ್ರೀತಿ ಪ್ರೇಮ ಎಂಬುದು ವಯೋಸಹಜ ಸಮಸ್ಯೆ ಎಂಬುದನ್ನು ಲೇಖಕರು ಇಲ್ಲಿ ವಿಶ್ಲೇಷಿಸಿದ್ದಾರೆ. ಕೃತಿಗೆ ಬೆನ್ನುಡಿ ಬರೆದಿರುವ ಸಾಹಿತಿ ವಿವೇಕ ಶಾನಭಾಗ ಅವರು, ‘ಈ ಸಂಕಲನದಲ್ಲಿ ನನಗೆ ಬಹಳ ಇಷ್ಟವಾದ ಕತೆ ‘ಅದೃಶ್ಯ ಲೋಕದ ಮಾಯೆ’. ಈ ಕತೆ ಜರುಗುವುದು ಅಜ್ಜಿಯ ಅಸ್ತಿ ವಿಸರ್ಜನೆಗಾಗಿ ಶ್ರೀರಂಗಪಟ್ಟಣದ ಬಳಿಯಿರುವ ಸಂಗಮಕ್ಕೆ ಬಂದ ಕುಟುಂಬದ ಸುತ್ತಲೂ. ಇಲ್ಲಿ ಈ ಕುಟುಂಬದ ಮೇಲೆ ಸಾವು ತನ್ನ ಬಲೆಯನ್ನು ಬೀಸಿದ ಭಾಸವಾಗಿ ವಿಚಿತ್ರ ತಲ್ಲಣವೊಂದು ಹುಟ್ಟಿಕೊಳ್ಳುತ್ತದೆ. ಇಂಥ ಸಶಕ್ತ ಹಂದರ ’ಅದೃಶ್ಯ ಲೋಕದ ಮಾಯೆ’ ತನ್ನ ನಿರೂಪಣೆಯುದ್ದಕ್ಕೂ ಎಲ್ಲೂ ಸಡಿಲವಾಗದೇ ಸರಳವಾಗದೇ ಉಳಿಯುತ್ತದೆ.ಇಲ್ಲಿ ಸೃಷ್ಟಿಯಾದ ಒಟ್ಟೂ ಆವರಣವು ಮನಸ್ಸನ್ನು ಕಾಡುವಷ್ಟು ಪ್ರಬಲವಾಗಿದೆ ಎಂಬುದರ ಬಗ್ಗೆ ಸಂಶಯವಿಲ್ಲ.‘ಅದೃಶ್ಯ ಲೋಕದ ಮಾಯೆ’,“ಚಹರೆ’ ಯಂಥಹ ಬರಹಗಳಲ್ಲಿ ಕುಮಾರ ಬೇಂದ್ರೆಯವರ ಕಥಾಶಕ್ತಿಯ ಪರಿಚಯ ನಮಗಾಗುತ್ತದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಕುಮಾರ ಬೇಂದ್ರೆ
(24 October 1977)

ಕುಮಾರ ಬೇಂದ್ರೆ ಜನನ 24-10-1977, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಬೆಳ್ಳಟ್ಟಿಯಲ್ಲಿ ಪಡೆದರು. ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ. ಇವರು ಹುಬ್ಬಳ್ಳಿ ನಿವಾಸಿಯಾಗಿದ್ದು 'ಉದಯವಾಣಿ' ಪತ್ರಿಕೆಯಲ್ಲಿ ಉಪಸಂಪಾದಕ ವೃತ್ತಿ, ಪತ್ನಿ ಅನುಪಮ, ಪುತ್ರರು ಚೇತನ, ಚಂದನ, ಎರಡು ದಶಕದಿಂದ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಕುಮಾರ ಬೇಂದ್ರೆ ಅವರ ಪ್ರಕಟಿತ ಕೃತಿಗಳು ಮಾದಪ್ಪನ ಸಾವು (೨೦೦೫) ಅದೃಶ್ಯ ಲೋಕದ ಮಾಯೆ (೨೦೦೭) ನಿರ್ವಾಣ (೨೦೧೧) ಗಾಂಧಿ ವೃತ್ತದ ದಂಗೆ (೨೦೧೨) ...

READ MORE

Reviews

‘ಕೆಂಪು ದೀಪದ ಮನೆಯಲ್ಲಿ’ ಕೃತಿಯ ವಿಮರ್ಶೆ

ಬದುಕಿನ ವಿಲಕ್ಷಣ ತಿರುವು

ಈಗಾಗಲೇ ಐದು ಕಥಾಸಂಕಲನ, ನಾಲ್ಕು ಕಾದಂಬರಿ, ಮೂರು ನಾಟಕ, ಎರಡು ಕವನ ಸಂಕಲನ ಮತ್ತು ಒಂದು ನೀಳ್ಗತೆ ಪ್ರಕಟವಾಗಿರುವ ಪತ್ರಕರ್ತ, ಲೇಖಕ ಕುಮಾರ ಬೇಂದ್ರೆ ಹೊಸ ಕಥಾಸಂಕಲನ ಕೆಂಪು ದೀಪದ ಮನೆಯಲ್ಲಿ, ಈ ಸಂಕಲನವನ್ನು ಅವರು ನನಗಿಷ್ಟವಾದ ನನ್ನ ಕತೆಗಳು ಎಂದು ಕರೆದುಕೊಂಡಿದ್ದಾರೆ. ಕಳೆದೆರಡು ದಶಕದಲ್ಲಿ ಅವರು ಬರೆದ ಕತೆಗಳು ಇಲ್ಲಿವೆ. ಈ ಕತೆಗಳು ಈಗಾಗಲೇ ಅಲ್ಲಿ ಇಲ್ಲಿ ಪ್ರಕಟಗೊಂಡಿವೆ.

ಈ ಸಂಕಲನದ ಸಂಜೆಗತ್ತಲಲ್ಲಿ ಹೊತ್ತಿದ ದೀಪ ಕತೆಯಲ್ಲಿ ಪುಂಡಲೀಕಪ್ಪ ಎಂಬ ಟೇಲರ್ ತನ್ನ ಇಳಿಸಂಜೆಯನ್ನು ಕಳೆಯುವ ಬಗೆಯನ್ನು ಸೊಗಸಾಗಿ ವಿವರಿಸುತ್ತಾರೆ ಕುಬೇ. ಆತನ ಜೀವನ ಪ್ರೀತಿ, ನಿಚ್ಚಳ ನೋಟ, ಮಗ ಹಾಕಿಸಿದ ಕಾಂಟಾಕ್ಟ್ ಲೆನ್ಸು, ಮೊಮ್ಮಕ್ಕಳ ಅಕ್ಕರೆಯಿಂದ ಕತೆ ಅವನ ಸಾವಿಗೆ ದಾಟಿಕೊಳ್ಳುತ್ತದೆ. ಆಗ ಒಂದು ವಿಶೇಷವಾದ ಪಾತ್ರದ ಪರಿಚಯವನ್ನೂ ಕುಬೇ ಮಾಡಿಕೊಡುತ್ತಾರೆ. ಆ ಪಾತ್ರದ ಕಣ್ಣಲ್ಲಿ ಪುಂಡಲೀಕಪ್ಪ ಹೊಸ ಬೆಳಕಿನಿಂದ ಕಂಗೊಳಿಸುತ್ತಾನೆ. ಕುಬೇ ಕತೆಗಳ ಬಗ್ಗೆ ವಿವೇಕ ಶಾನಭಾಗ ಮೆಚ್ಚುಗೆಯ ಮಾತಾಡಿದ್ದಾರೆ. ಇದರಲ್ಲಿ ಕುಬೇ ಕಥಾಶಕ್ತಿಯ ಪರಿಚಯ ಆಗುತ್ತದೆ ಎಂದು ಬೆನ್ನುಡಿಯಲ್ಲಿ ಉಲ್ಲೇಖಿಸಿದ್ದಾರೆ.

Related Books