ಶನಿ ಹಿಡಿದವ

Author : ಕು.ಗೋ. (ಹೆರ್ಗ ಗೋಪಾಲ ಭಟ್ಟ)Published by: ಛಾಯಾ ಸಾಹಿತ್ಯ
Address: ಛಾಯಾ ಸಾಹಿತ್ಯ

Synopsys

ಸಾಮಾನ್ಯವಾಗಿ ತಮ್ಮ ಬರೆವಣಿಗೆಯಲ್ಲಿ ಸಂಕೀರ್ಣತೆಯನ್ನು ಹೊಂದಿಸಿಕೊಂಡು ಹೋಗುವ ಲೇಖಕರಾದ ಕು.ಗೋ. ಅವರು ಈ ಪುಸ್ತಕದಲ್ಲಿ ಮಾತ್ರ ಅತ್ಯಂತ ಸರಳತೆಯಿಂದ ತಮ್ಮ ವಿಷಯಗಳನ್ನು ನಿರೂಪಿಸಿದ್ದಾರೆ. ಸಂಕೀರ್ಣತೆಯಿಂದ ಕೂಡಿದ ಕಥೆಗಳು ಮೇಲ್ನೋಟಕ್ಕೆ ಅರ್ಥವಾದರೂ, ಆ ಸಂಕೀರ್ಣತೆಯ ಹಿಂದಿರುವ ಚಿಂತನೆಗಳು ಮಹತ್ವದ್ದು. ಈ ಪುಸ್ತಕದಲ್ಲಿ ಅಂತಹ ಯಾವುದೇ ಪ್ರಯೋಗಕ್ಕೆ ಕೈ ಹಾಕದೇ ನೇರವಾಗಿ ವಿಷಯವನ್ನು ಲೇಖಕರು ನಿರೂಪಿಸಿದ್ದಾರೆ. ತಾವು ತಮ್ಮ ಜೀವನದಲ್ಲಿ ಅನುಭವಿಸಿದ, ನೋಡಿದ ಮತ್ತು ಕೇಳಿದ ವಿಷಯಗಳ ಕುರಿತು ಅನುಭವಸ್ಥ ಲೇಖಕರಾಗಿ ವಿಷಯ ಮಂಡನೆಯನ್ನು ಈ ಪುಸ್ತಕದಲ್ಲಿ ಕು.ಗೋ. ಅವರು ಮಾಡಿದ್ದಾರೆ. ಬದುಕಿನ ಸ್ವಾರಸ್ಯಕರ ಮತ್ತು ರೋಚಕವಾದ ಸಂಗತಿಗಳನ್ನು ಯಾವುದೇ ಅತಿರೇಕವಿಲ್ಲದೆ ತುಂಬಾ ಸರಳವಾಗಿ ಓದುಗರ ಮನಮುಟ್ಟುವಂತೆ ಲೇಖಕರು ಬರೆದಿದ್ದಾರೆ. ಮೊದಲಿಂದ ಕೊನೆಯವರೆಗೂ ಈ ಪುಸ್ತಕದ ಕಥೆಗಳು ಓದುಗರನ್ನು ಓದಿಸಿಕೊಂಡು ಹೋಗುತ್ತವೆ. ಯಾವುದೇ ಅಸ್ಪಷ್ಟತೆಯನ್ನು ಹೊಂದಿರದಂತಹ ಬರಹಗಳು ಓದುಗರ ಮನಸ್ಸಿಗೆ ಮುದ ನೀಡುತ್ತವೆ. ಓದುಗರಲ್ಲಿ ಕೂಡ ಪುಸ್ತಕದಲ್ಲಿ ನಮೂದಿಸಲಾದ ಅನುಭವಗಳನ್ನು ಸೃಷ್ಟಿಸಿದ ಅನುಭವನ್ನು ಈ ಪುಸ್ತಕ ನೀಡುತ್ತದೆ.

About the Author

ಕು.ಗೋ. (ಹೆರ್ಗ ಗೋಪಾಲ ಭಟ್ಟ)
(06 June 1938)

'ಕು. ಗೋ' ಎಂದೇ ಜನಪ್ರಿಯರಾಗಿರುವ ಲೇಖಕ ಹೆರ್ಗ ಗೋಪಾಲ ಭಟ್ಟರು ತಮ್ಮ ಪುಸ್ತಕ ಪ್ರೀತಿಗಾಗಿ ಹೆಸರಾದವರು. ಅವರನ್ನು ಕುರಿತು ’ಪುಸ್ತಕ ಸಂಸ್ಕೃತಿಯ ಪರಿವ್ರಾಜಕ ಕು.ಗೋ’ ಎಂಬ ಗ್ರಂಥ ಪ್ರಕಟವಾಗಿದೆ. ಗೋಪಾಲ ಭಟ್ಟರು ಜನಿಸಿದ್ದು 1938 ರ ಜೂನ್ 6ರಂದು. ತಂದೆ ಅನಂತ ಪದ್ಮನಾಭ ಭಟ್ಟ ಮತ್ತು ತಾಯಿ ವಾಗ್ದೇವಿಯಮ್ಮ. ಎಸ್. ಎಸ್. ಎಲ್. ಸಿಯಲ್ಲಿ ರಾಜ್ಯಮಟ್ಟದಲ್ಲಿ 37ನೇ Rank ಪಡೆದ ಅವರು ಮೈಸೂರಿನ ಯುವರಾಜ ಕಾಲೇಜು ಮತ್ತು ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಮತ್ತು ಬಿ. ಎಸ್ಸಿ ಓದು ಕೈಗೊಂಡರು. ಕಾರಣಾಂತರಗಳಿಂದ ಅವರಿಗೆ ಬಿ. ಎಸ್ಸಿ ಪೂರ್ಣಗೊಳಿಸಲಾಗಲಿಲ್ಲ. ಉದ್ಯೋಗಕ್ಕೆ ಸೇರಿದ ನಂತರ ಅಂಚೆ ತೆರಪಿನ ಮೂಲಕ ...

READ MORE

Related Books