ಗರ್ಭಗುಡಿ ಮತ್ತು ಇತರೆ ಕತೆಗಳು

Author : ಟಿ.ಎನ್. ಷಣ್ಮುಖ

Pages 73

₹ 75.00




Year of Publication: 2019
Published by: ಕಾವ್ಯಕಲಾ ಪ್ರಕಾಶನ
Address: #1273, 7ನೇ ಅಡ್ಡರಸ್ತೆ, ಚಂದ್ರಲೇಔಟ್, ವಿಜಯನಗರ, ಬೆಂಗಳೂರು-560040
Phone: 9964124831

Synopsys

ಬಯಲು ಸೀಮೆಯ ಆಡುಭಾಷೆಯಲ್ಲಿ ಕತೆಗಳ ನಿರೂಪಣೆ ಮಾಡಿರುವ ಟಿ.ಎನ್. ಷಣ್ಮುಖ ಅವರು ತಮ್ಮ ಕತೆಗಳ ಮೂಲಕ ಗಾಮೀಣ ಸೊಗಡು, ಮಾನವೀಯ ಮೌಲ್ಯ, ಇಂದಿನ ವಾಸ್ತವ ಬದುಕನ್ನು ತೆರೆದಿಟ್ಟಿದ್ದಾರೆ. ಬಡತನ ಹಸಿವು ಜಾತಿ ಪದ್ಧತಿ, ಶೋಷಣೆ, ಮೌಢ್ಯಗಳನ್ನೇ ಕಥಾ ವಸ್ತುಗಳಾಗಿಸಿಕೊಂಡು ಕತೆಗಳನ್ನು ರಚಿಸಿದ್ದಾರೆ. ’ಈ ಕೃತಿಯಲ್ಲಿನ ಕತೆಗಳೊಳಗಿನ ಕಥೆಗಾರ ಈ ಕೃತಿಯ ಕತೆಗಾರನೆ ಇರಬಹುದೆ ಎಂಬ ರೋಚಕತೆಯನ್ನು ತಂದಿಕ್ಕುತ್ತದೆ. ಇಲ್ಲಿನ ಎಲ್ಲಾ ಕತೆಗಳು ರಂಜಿಸುತ್ತಲೇ ಒಂದಿಲ್ಲೊಂದು ಆದರ್ಶವನ್ನು ನಮಗೆ ದಾಟಿಸುತ್ತವ’ ಎನ್ನುವ ಗಿರೀಶ್ ತಾಳಿಕಟ್ಟೆ ಅವರ ಮುನ್ನುಡಿಯ ಮಾತುಗಳ ಕೃತಿಯ ಓದಿನ ಹಸಿವನ್ನು ಹೆಚ್ಚಿಸುತ್ತದೆ.

About the Author

ಟಿ.ಎನ್. ಷಣ್ಮುಖ
(29 April 1960)

ಲೇಖಕ, ಪತ್ರಕರ್ತ ಟಿ.ಎನ್. ಷಣ್ಮುಖ ಅವರು ಹುಟ್ಟಿದ್ದು 1960 ಏಪ್ರಿಲ್ 29ರಂದು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯವರಾದ ಷಣ್ಮುಖ ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಲಂಕೇಶ್ ಪತ್ರಿಕೆ, ಗೌರಿ ಲಂಕೇಶ್, ಅಗ್ನಿ ವಾರ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡಿರುವ ಇವರು ಪ್ರಜಾಕೂಗು ಎಂಬ ವಾರ ಪತ್ರಿಕೆಯನ್ನು ಒಂದು ದಶಕಕ್ಕೂ ಹೆಚ್ಚು ಕಾಲ ಹೊರತಂದರು. ಎಂಬತ್ತರ ದಶಕದಲ್ಲಿ ಚಟುವಟಿಕೆಯಿಂದಿದ್ದ ಪ್ರಗತಿ ರಂಗ ಸಾಂಸ್ಕೃತಿಕ ಮತ್ತು ರಾಜಕೀಯ ರಂಗದ ಸಂಚಾಲಕನಾಗಿ ಕೆಲಸ ಮಾಡಿದ್ದಾರೆ.  ಷಣ್ಮುಖ ಅವರ ಪ್ರಮುಖ ಕೃತಿಗಳೆಂದರೆ ನೆತ್ತರಿಗೆ ಬೆಲೆಯಿಲ್ಲ, ಒಡಲಾಳ, ಕಡಲತೀರದ ಕೋಮಲ ಹುಡುಗಿ, ಮುಖ ಮತ್ತು ಮುಖವಾಡಗಳು (ಲೇಖನಗಳ ...

READ MORE

Related Books