ರಸ್ಕಿನ್‌ ಬಾಂಡ್‌ ಕತೆಗಳು

Author : ಡಿ.ಜಿ. ಮಲ್ಲಿಕಾರ್ಜುನ

Pages 192

₹ 190.00

Buy Now


Year of Publication: 2019
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸ್ಸಿ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಶಿವಾನಂದ ಸರ್ಕಲ್‌ ಹತ್ತಿರ, ಬೆಂಗಳೂರು-560001
Phone: 08022161900

Synopsys

ರಸ್ಕಿನ್‌ ಬಾಂಡ್‌ ಅವರ ಕತೆಗಳು ಬಹು ಬಣ್ಣಗಳು ತುಂಬಿದ ಪ್ರಕೃತಿ - ಪರಿಸರದ ಶಬ್ದಚಿತ್ರಗಳಾಗಿ ಕಣ್ಣಿಗೆ ಬಿಂಬವಾಗುತ್ತವೆ. ಮನಸ್ಸಿಗೆ ಚಲನಚಿತ್ರಗಳಾಗಿ ತೋರುತ್ತವೆ. ಇದಕ್ಕೆ ಅನುರೂಪವಾಗಿ ಅವರು ಬಳಸುವ ಭಾಷೆಯಿಂದಾಗಿ ಕತೆಗಳಿಗೆ ಸರಾಗ ಚಲನೆ ದೊರೆತು, ನೇರವಾಗಿ ಮನಸ್ಸನ್ನು ಹೊಕ್ಕು ಅರ್ಥಗಳು ಬಿಚ್ಚಿಕೊಳ್ಳುತ್ತವೆ.

ರಸ್ಕಿನ್‌ ಬಾಂಡ್‌ ತಮ್ಮ ಕತೆಗಳ ಮೂಲಕ ಎಳೆಯ ವಯಸ್ಸಿನ ಮಕ್ಕಳಲ್ಲಿ ಪ್ರೀತಿ, ಸ್ನೇಹ, ನಂಬಿಕೆ, ವಿಶ್ವಾಸ, ಪರಿಸರ ಪ್ರೀತಿ ಮುಂತಾದ ಮಾನವೀಯ ಮೌಲ್ಯಗಳನ್ನು ಅಂತರ್ಗತವಾಗುವಂತೆ ಚಿತ್ರಿಸಿದ್ದಾರೆ. ಈ ಕೃತಿಯಲ್ಲಿನ ಅಸ್ಪೃಶ್ಯ, ಆ ಕಣ್ಣುಗಳು, ದೆವೋಲಿ ಸ್ಟೇಷನ್‌, ಪ್ಲಾಟ್‌ಫಾರಂ 8, ಕಳ್ಳ, ಬೆಳದಿಂಗಳ ಚಿರತೆ, ಕಡೆಯ ಟ್ರಕ್‌ ಪ್ರಯಾಣ, ಕಾಗೆಯ ಬದುಕು ಕತೆಗಳು ಓದುಗರನ್ನು ಸೆಳೆಯುತ್ತವೆ.

ಇವರ ಕತೆಗಳಲ್ಲಿ ವಾಸ್ತವಿಕ ಕಲ್ಪನೆಯು ಉಂಟು ಎನ್ನುವುದಕ್ಕೆ ಸೀತಾ ಮತ್ತು ನದಿ ಕತೆಯೇ ಸಾಕ್ಷಿ. ಈ ಕತೆಯ ಘಟನಾವಳಿಗಳು ರಮ್ಯತೆ ಹಾಗೂ ಮೈನವಿರೇಳಿಸುತ್ತವೆ. ಕಾಡಿನ ನಡುವೆ ದೋಣಿಯೊಂದಿಗೆ ಪ್ರತ್ಯಕ್ಷವಾಗುವ ಯುವಕ, ಹಳ್ಳಿಯಲ್ಲಿ ಜಾತ್ರೆ, ಕುಸ್ತಿಯ ಸಂಭ್ರಮಗಳು ಇವೆಲ್ಲವು 'ಅಬ್ಬಾ' ಎಂತಲೂ ಅನ್ನಿಸುತ್ತವೆ.

About the Author

ಡಿ.ಜಿ. ಮಲ್ಲಿಕಾರ್ಜುನ

ಚಿಕ್ಕಬಳ್ಳಾಪುರದ ಶಿಡ್ಲಘಟ್ಟದವರಾದ ಡಿ.ಜಿ. ಮಲ್ಲಿಕಾರ್ಜುನ ಅವರು ಓದಿದ್ದು ಮೆಕ್ಯಾನಿಕಲ್‌ ಎಂಜಿನಿಯರಿಂಗ್. ಪ್ರಸ್ತುತ ಪ್ರಜಾವಾಣಿ ಮತ್ತು ಡೆಕನ್‌ ಹೆರಲ್ಡ್‌ ದಿನಪತ್ರಿಕೆಗೆ ಶಿಡ್ಲಘಟ್ಟ ತಾಲ್ಲೂಕು ವರದಿಗಾರರಾಗಿ ಕೆಲಸ ಮಾಡುತ್ತಿರುವ ಇವರು ಛಾಯಾಗ್ರಹಣದಲ್ಲಿ ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿಯಿಂದ ಪ್ರಮಾಣ ಪತ್ರ ಪಡೆದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ನಮ್ಮ ಶಿಡ್ಲಘಟ್ಟ, ಕ್ಲಿಕ್, ಭೂತಾನ್, ಅರೆಕ್ಷಣದ ಅದೃಷ್ಟ, ರಸ್ಕಿನ್ ಬಾಂಡ್ ಕತೆಗಳು, ಯೋರ್ಡಾನ್ ಪಿರೆಮಸ್- ಜೋರ್ಡಾನ್ ಈಜಿಪ್ಟ್ ಪ್ರವಾಸ ಕಥನ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಯೋರ್ಡಾನ್ ಪಿರೆಮಸ್ ಪ್ರವಾಸ ಕಥನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ...

READ MORE

Related Books