ಜೈಲು ಕತೆಗಳು

Author : ಕೆ. ಸತ್ಯನಾರಾಯಣ

Pages 136

₹ 170.00




Year of Publication: 2023
Published by: ಅಮೂಲ್ಯ ಪುಸ್ತಕ
Address: #83/1, 15ನೆಯ ಮುಖ್ಯರಸ್ತೆ, (ವಿಜಯನಗರ ಕ್ಲಬ್ ಎದುರುರಸ್ತೆ) ವಿಜಯನಗರ, ಬೆಂಗಳೂರು - 560040.
Phone: 9448676770 9620796770

Synopsys

'ಜೈಲು ಕತೆಗಳು' ಕೆ. ಸತ್ಯನಾರಾಯಣ ಅವರ ಕೃತಿ. ಕೃತಿಯ ಕುರಿತು ಬರೆದಿರುವ ನರೇಂದ್ರ ಪೈ ಅವರು 'ಓದಿದ ನಂತರವೂ ಸಂವೇದನೆಯ ನೆಲೆಯಲ್ಲಿ ಬಹುಕಾಲ ನಮ್ಮನ್ನು ಕಾಡುತ್ತಲೇ, ಉತ್ತರವಿಲ್ಲದ ಪ್ರಶ್ನೆಯಾಗಿ ಉಳಿಯುವ ಕಥನಗಳು;  ಯಾವುದೋ ಒಂದು ಅವ್ಯಕ್ತ ಬಗೆಯಲ್ಲಿ ನಮ್ಮ ಅಂತಃಸ್ಸಾಕ್ಷಿಯನ್ನು ಚುಚ್ಚುವ ಮತ್ತು ಆ ಕಾರಣಕ್ಕೆ ಬದುಕಿನ ಕುರಿತೇ ಜಿಜ್ಞಾಸೆ ಹುಟ್ಟಿಸುವಂಥ ಕಥನಗಳು; ತಮ್ಮ ಅಪರಾಧದ ಬಗ್ಗೆ ಅತ್ಯಂತ ಸ್ಪಷ್ಟ ನಿಲುವು, ಸಮರ್ಥನೆಯುಳ್ಳ, ಒಂದಿಷ್ಟೂ ಗೊಂದಲವಾಗಲಿ ಅಪರಾಧಿ ಪ್ರಜ್ಞೆಯಾಗಲಿ ಇಲ್ಲದ, ಕೆಲವೊಮ್ಮೆ ನಾವು ಒಪ್ಪಬಹುದಾದ ಮತ್ತು ಕೆಲವೊಮ್ಮೆ ಒಪ್ಪಲಾಗದ ಮಂದಿಯ ಕಥನಗಳು; ಜೈಲಿನ ಒಳಗೇ ಸಕಲ ಸುಖ ಸೌಭಾಗ್ಯ ದಕ್ಕಿಸಿಕೊಂಡವರೂ, ಮಳೆಗೆ ಕೂಡ ನೆರಳಿನಾಶ್ರಯವಿಲ್ಲದವರೂ ಒಟ್ಟೊಟ್ಟಿಗೇ ಇರುವ ವಿಪರ್ಯಾಸಕರ ಸಂಗತಿಯ ಕುರಿತು ತಣ್ಣಗಿನ ದನಿಯಲ್ಲಿ ಹೇಳುವ ಕಥನಗಳು; ರಂಗಾಯಣ, ಜೈಲು ಕೇರಿ, ತನಿಖೆ-ಶಿಕ್ಷೆ ಕುರಿತ, ನಾವು ಬದುಕುತಿರುವ ವ್ಯವಸ್ಥೆಯ ಕುರಿತೇ ಕೆಲವೊಂದು ಜಿಜ್ಞಾಸೆಗಳಿಗೆ ಎಡೆ ಮಾಡಿಕೊಡುವ ವಿಶಿಷ್ಟ ಕಥನಗಳು; ಖ್ಯಾತನಾಮರ ಪ್ರಕರಣಗಳು, ವಿಚಿತ್ರ ತಿರುವುಗಳ ಪ್ರಕರಣಗಳು ಇಲ್ಲಿವೆ ಎಂದಿದ್ದಾರೆ. 

About the Author

ಕೆ. ಸತ್ಯನಾರಾಯಣ
(21 April 1954)

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.  1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.  ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...

READ MORE

Reviews

ನೀವು ಆರಿಸಿಕೊಳ್ಳುವ ವಸ್ತುವೇ ವಿಶೇಷವಾದುದು. ಇಲ್ಲಿನ ಬಾಲಗೋಪಾಲ ಜೋಯ್ಸರು ಸಂಗೀತ ವಿದ್ವಾಂಸರು. ಆದರೆ ಕಚ್ಚೆ ಹರುಕರು. ಹೆಣ್ಣಿನ ಮೈ ಇರುವುದೇ ತನಗಾಗಿ ಎಂದುಕೊಂಡು, ಸಂಗೀತದಿಂದ ಬಂದುದನ್ನು ಎಲ್ಲ ಹೆಣ್ಣಿನ ಮಡಿಲಿಗೆ ಸುರಿದು, ಅಲ್ಲೇ ದಣಿವಾರಿಸಿಕೊಳ್ಳುವಾತ!  ಹಣವಿಲ್ಲದಾಗ  ಅನೇಕ ಹೆಣ್ಣುಗಳಿಗೆ ಯಾಮಾರಿಸಿ, ಹೊಸ ಹೆಣ್ಣಿಗೆ ಕೊಟ್ಟು, ಸುಖ ಪಟ್ಟೆ ಎಂದು ತನ್ನನ್ನೇ  ‌ಸಮಾಧಾನ ಪಡಿಸಿಕೊಂಡು, ಬೋಳಿಸಿಕೊಂಡರೂ ಏನೂ ಆಗದಂತೆ ಇರಬಲ್ಲ.  ಮೊದಲ ಧರ್ಮ ಪತ್ನಿಯ ಒಡವೆ ಲಪಟಾಯಿಸಿ ಹೆಣ್ಣಿನ ಮಡಿಲಲ್ಲಿದ್ದಾಗ ಸುಧಾ ಸುಗುಣಾಬಾಯಿ, ಇವನಿಗೆ ಜೈಲು ಕಾಣಿಸುವ ಪ್ರತಿಜ್ಞೆ ಮಾಡಿ ನಿಂತಾಗ, ದೊಡ್ಡವರು ಎಂದು, ಅಮಾತ್ಯ ಹೆಂಗಸು ದಾಸ ಶ್ರೇಷ್ಠ ವಿದ್ವಾಂಸ ಎಂದು ಪಾರುಮಾಡಿ, ಏನೂ ಆಗಿಲ್ಲ ಎಂಬಂತೆ ನಡೆದುಕೊಳ್ಳುವುದು ದೊಡ್ಡಸ್ತಿಕೆಯ ಸಹಜ ರೂಪವಾಗಿ ಕಾಣಿಸುತ್ತದೆ. ಇಲ್ಲಿ, ಹೆಣ್ಣಿನ ಚಟದ ಬದಲು ಭೂ ಕಬಳಿಕೆ, ಹಣ ನುಂಗುವುದು ಯಾವುದೇ ಆಗಬಹುದು. ಕಥೆ ಬಹಳಷ್ಟನ್ನು ತನ್ನೊಳಗಿರಿಸಿಕೊಂಡು, ಮುಗುಂ ಆಗಿದೆ. ಹೀಗಿರುವುದೇ ಕಥೆಯ ದೊಡ್ಡಸ್ತಿಕೆ.  ಒಳ್ಳೆಯ ಕಥೆ ಹೀಗಿರುತ್ತದೆ. ಮುಗ್ಧವಾಗಿ, ಮೌನವಾಗಿ. 
ಧನ್ಯವಾದಗಳು.
-ಶೇಷಾದ್ರಿ ಕಿನಾರ

Related Books