ಕಥಾ ಭೂಮಿ

Author : ಕಂನಾಡಿಗಾ ನಾರಾಯಣ

Pages 420

₹ 350.00




Year of Publication: 2015
Published by: ಚಂದ್ರಗಿರಿ ಪ್ರತಿಷ್ಠಾನ
Address: ನಂ .277, 5 ನೇ ಕ್ರಾಸ್, ವಿಧಾನಸೌದ ಲೇಔಟ್, ಲಗ್ಗರೆ, ಬೆಂಗಳೂರು - 560058

Synopsys

 

ಕಥಾ ಭೂಮಿ- ಕಥಾ ಸಂಕಲನದ  ಕಥೆಗಳನ್ನೆಲ್ಲ ಒಂದೆಡೆ ಇಟ್ಟು ನೋಡಿದಾಗ ಕನ್ನಡ ಕಥಾಯಾನವು ಮುಕ್ತ ಕಾಲದತ್ತ ಹೊರಳುತ್ತಿರುವುದರ ಸ್ಪಷ್ಟ ದರ್ಶನವಾಗುತ್ತದೆ. ಕನ್ನಡದ ಮಹತ್ವದ ಕಥೆಗಾರರಾದ ಎಂ.ಎಸ್.ವೇದಾ, ಸುನಂದ ಪ್ರಕಾಶ ಕಡಮೆ, ವಿನಯಾ, ಕವಿತಾ ರೈ, ಚಿದಾನಂದ ಸಾಲಿ, ಕನಕರಾಜು ಆರನಕಟ್ಟೆ, ಕಣಾದ ರಾಘವ, ಎನ್.ಸಿ.ಮಹೇಶ, ಟಿ.ಎಸ್.ಗೊರವರ, ಆನಂದ ಋಗ್ವೇದಿ, ಇಂದ್ರಕುಮಾರ್ ಎಚ್. ಬಿ., ಮೋದೂರು ತೇಜ, ಹನುಮಂತ ಹಾಲಿಗೇರಿ, ಚನ್ನಪ್ಪ ಅಂಗಡಿ, ಕಲ್ಲೇಶ್ ಕುಂಬಾರ್, ಬೈರಮಂಗಲ ರಾಮೇಗೌಡ, ಟಿ.ಗೋವಿಂದರಾಜು, ಕಂನಾಡಿಗಾ ನಾರಾಯಣ, ರತ್ನಾ ಕಾಳೇಗೌಡ, ಸುಧಾ ಚಿದಾನಂದಗೌಡ ಮುಂತಾದವರೆಲ್ಲರ ಕಥೆಗಳ ಸಂಗ್ರಹ 'ಕಥಾಭೂಮಿ'. ಲೇಖಕ ಕಂನಾಡಿಗಾ ಹಾಗೂ ಗಿರಿಜಾ ಗೌಡ ಸಂಪಾದಿಸಿದ್ದಾರೆ.

About the Author

ಕಂನಾಡಿಗಾ ನಾರಾಯಣ

ಕಥೆಗಾರ ಕಂನಾಡಿಗಾ ನಾರಾಯಣ ಅವರದು ಕನ್ನಡ ಕಥನ ಪರಂಪರೆಯಲ್ಲಿ ಒಂದು ವಿಶಿಷ್ಟ ಸಂವೇದನೆ. ಪ್ರಾಣಿಲೋಕದೊಳಗಿನ ಮನುಷ್ಯ ಜಗತ್ತು. ಮನುಷ್ಯನೊಳಗಿರುವ ಮೃಗಲೋಕ ಎರಡರ ತಾಕಲಾಟಗಳನ್ನೂ ಒಂದು ಹದದಲ್ಲಿ ಹಿಡಿಯುವ ಇವರ ಕತೆಗಳು ಹೊಸ ಜಗತ್ತೊಂದನ್ನು ತೆರೆದಿಡುತ್ತವೆ. ಹಾಗೆಂದು ಇವೆರಡೇ ಇವರ ಆಸಕ್ತಿಯ ವಿಷಯವಲ್ಲ. ಸಮಾಜದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮದಲ್ಲದ ತಪ್ಪಿಗೆ ಸಂದಿಗ್ಧತೆಯನ್ನು ಅನುಭವಿಸುವ ಅನೇಕ ಬಗೆಯ ಜನರ ನೋವುಗಳನ್ನು ಸೂಕ್ಷ್ಮವಾಗಿ ನಾರಾಯಣ ಅವರು ಹಿಡಿದಿಡುತ್ತಾರೆ. ಇಂತಹ ಮನುಷ್ಯ ವೇದನೆಯ ಕತೆಗಳನ್ನು ಕಡೆಯುವಾಗ ಕೊಂಚ ಜನಪ್ರಿಯ ದಾರಿಯನ್ನು ಹಿಡಿಯುವ ನಾರಾಯಣ ಅವರ ಕಥೆಗಳು ಪ್ರಾಣಿಗಳ ಲೋಕದ ತಾಕಲಾಟಗಳನ್ನು ಕಾಣಿಸಹೊರಟಾಗ ...

READ MORE

Related Books