ಕಥಾ ಕಾಲಕ್ಷೇಪ

Author : ಮನು ಪತ್ತಾರ

Pages 152

₹ 100.00
Year of Publication: 2020
Published by: ನೆಲೆ ಪ್ರಕಾಶನ ಸಂಸ್ಥೆ
Address: ಗುರುಬಸವ, ವಿದ್ಯಾನಗರ, ಸಿಂದಗಿ- 586128
Phone: 9972779222

Synopsys

ನೆಲೆ ಪ್ರಕಾಶನ ನಾಲ್ಕು ದಶಕಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ (17-07-2020 ರಿಂದ 11-08-2020ರವರೆಗೆ ) ಒಟ್ಟು 24ದಿನಗಳ ಕಾಲ `ನೆಲೆ ಸಂಭ್ರಮ-2020' ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಕಥಾ ಸಪ್ತಾಹ ವಾಚಿಯನ್ನು ಆಯೋಜಿಸಲಾಗಿತ್ತು ಲೇಖಕ ಕೇಶವ ಮಳಗಿ, ಬಸು ಬೇವಿನಗಿಡದ, ಮಂಡ್ಯ ರಮೇಶ್, ದೀಪ್ತಿ ಭದ್ರಾವತಿ, ಅನುಪಮ ಪ್ರಸಾದ, ರಾಜಶೇಖರ ಹಳೆಮನಿ, ಚೀಮನಹಳ್ಳಿ ರಮೇಶ ಬಾಬು, ಆನಂದ ಕುಂಚನೂರು ಹಾಗೂ ಕಪಿಲ ಹುಮನಬಾದೆ ಅವರು ವಿಭಿನ್ನ ಕಥೆಗಳನ್ನು ವಾಚಿಸಿದ್ದರು. ಈ ಒಂಬತ್ತು ಕಥೆಗಾರರು ವಾಚಿಸಿದ ಒಂಬತ್ತು ಕಥೆಗಳನ್ನು ಲೇಖಕ ಮನು ಪತ್ತಾರ ಅವರು ‘ಕಥಾ ಕಾಲಕ್ಷೇಪ’ ಶೀರ್ಷಿಕೆಯಡಿ ಸಂಪಾದಿಸಿದ್ದಾರೆ. ವಸ್ತು ವೈವಿಧ್ಯತೆಯಿಂದ, ನಿರೂಪಣಾ ಶೈಲಿಯಿಂದ, ಸನ್ನಿವೇಶಗಳ ಜೋಡಣೆಯಿಂದ, ಪಾತ್ರಗಳ ಸೃಷ್ಟಿಯಿಂದ ಕಥೆಗಳ ಓದು ಗಮನಾರ್ಹವಾಗಿದೆ.  

About the Author

ಮನು ಪತ್ತಾರ

ಲೇಖಕ ಮನು ಪತ್ತಾರ ಅವರು ವಿಜಯಪುರ ಜಿಲ್ಲೆ, ತಾಳಿಕೋಟೆ ತಾಲೂಕಿನ ಕಲಕೇರಿಯವರು. ಎಂ.ಎ., ಬಿ.ಇಡಿ ಪದವೀಧರರು. ಬಸವನ ಬಾಗೇವಾಡಿಯಲ್ಲಿ ಸಮಾಜಕಲ್ಯಾಣ ಇಲಾಖೆಯ ನಿಲಯ ಮೇಲ್ವಿಚಾರಕರಾಗಿದ್ದಾರೆ. ಭಕ್ತಿ ಪ್ರಭೆ, ಹೆದ್ದೂರ ನಾಡಿ ಶಿವಯೋಗಿ, ನಿರಾಳ, ಕಥಾ ಕಾಲಕ್ಷೇಪ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಹಲವು ಸ್ಮರಣ ಹಾಗೂ ಅಭಿನಂದನ ಗ್ರಂಥಗಳಲ್ಲಿ ಅವರ ಲೇಖನಗಳು ಪ್ರಕಟಗೊಂಡಿವೆ. ನಾಡಿನ ಹಲವು ಸಾಹಿತ್ಯಿಕ ಕಮ್ಮಟ ಹಾಗೂ ಸಮ್ಮೇಳನಗಳಲ್ಲಿ ಭಾಗವಹಿಸಿ ಉಪನ್ಯಾಸಗಳನ್ನು ನೀಡಿದ್ದು, ತತ್ವಪದ ಸಾಹಿತ್ಯ ಹಾಗೂ ವಿಮರ್ಶಾ ಕ್ಷೇತ್ರದತ್ತಲೂ ಒಲವು ಹೊಂದಿದ್ದಾರೆ. ಹಲವು ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದು, ಇವರಿಗೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ. ...

READ MORE

Related Books