ಕಲ್ಲಣ್ಣನ ಕಾಂಪ್ಲೆಂಟ್‌ ಪ್ರಕರಣ ಮತ್ತು ಇತರ ಕಥೆಗಳು

Author : ಗುರುನಾಥ ಅಕ್ಕಣ್ಣ

Pages 108

₹ 65.00
Year of Publication: 2009
Published by: ಬಸವ ಪ್ರಕಾಶನ
Address: ಮುಖ್ಯಬೀದಿ ಗುಲಬರ್ಗಾ- 585101
Phone: 9449825431

Synopsys

'ಕಲ್ಲಣ್ಣನ ಕಾಂಪ್ಲೆಂಟ್‌ ಪ್ರಕರಣ ಮತ್ತು ಇತರ ಕಥೆಗಳು' ಕಥಾಸಂಕಲನವನ್ನು ಗುರುನಾಥ ಅಕ್ಕಣ್ಣ ಅವರು ರಚಿಸಿದ್ದಾರೆ. ಈ ಕೃತಿಯ ಬೆನ್ನುಡಿಯಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಕತೆ ಬರೆವ ಗೀಳು ಹಚ್ಚಿಕೊಂಡು ಇಂದಿಗೂ ಮಹತ್ವದ ಕತೆ ಬರೆಯುತ್ತಿದ್ದಾರೆ. ಅವು ನಾಡಿನ ಅನೇಕ ಪತ್ರಿಕೆಗಳಲ್ಲಿ ಕೂಡ ಪ್ರಕಟವಾಗಿವೆ. ಹಾಗೇ ಮರಾಠಿ, ಹಿಂದಿ, ಮಲೆಯಾಳಂ ಭಾಷೆಗೆ ಅನುವಾದಗೊಂಡಿವೆ. ದೂರದರ್ಶನದಲ್ಲಿ ಧಾರವಾಹಿಯಾಗಿ, ಆಕಾಶವಾಣಿಯಲ್ಲಿ ಕತೆಯಾಗಿ ಪ್ರಸಾರಗೊಂಡಿವೆ, ಜಯತೀರ್ಥರಾಜಮರೋಹಿತ ರಾಜ್ಯಪ್ರಶಸ್ತಿ, ಅಲ್ಲದೆ ಏಳು ಸಲ ಕಲ್ಲಣ್ಣನ ಕಾಂಪ್ಲೆಂಟ್‌ ಪ್ರಕರಣ ಕತೆ ರಾಜ್ಯಮಟ್ಟದಲ್ಲಿ ಪ್ರಸಾರಗೊಂಡಿವೆ. ಬೀದರ ಜಿಲ್ಲಾ ಬರಹಗಾರರು ಮತ್ತು ಕಲಾವಿದರ ಸಂಘ ಹುಟ್ಟುಹಾಕಿ ಅಧ್ಯಕ್ಷರಾಗಿದ್ದಾರೆ. ತಾಲೂಕಾ ಕ.ಸಾ.ಪ. ಬೀದರ್‌ನ ಅಧ್ಯಕ್ಷರಾಗಿ ಕಾರನಿರ್ವಹಿಸಿದ್ದಾರೆ. 1000ರಲ್ಲಿ ಯಾರನ್ನು ಪ್ರೀತಿಸಬೇಡ, ಇದು ಎಂಡಾಲೋಕವಯ್ಯ (1996) ಎಂಬ ಕಥಾಸಂಕಲನ ಪಕಟಿಸಿದ್ದಾರೆ. ಇವೆರಡು ಸಹಜವಾದ ಪ್ರೀತಿ, ಪ್ರೇಮ ಹಾಗೂ ಸಂವೇದನೆ ಹೋಲಿಸಿ ಗಮನಸೆಳೆದ ಕಲಸ ಕಾಂಪ್ಲೇಂಟ್ ಪ್ರಕರಣ ಕಥಾಸಂಕಲನ ಪ್ರಬುದ್ಧ ಕತೆಗಳಿಂದ ಹೆಸರಾಗಿವೆ. ಸಮಾಜದ ಆನೇಕ ಮುಖಗಳನ್ನು ಬಹಿರಂಗ ಪಡಿಸುತ್ತವೆ. ಮಾನವೀಯ ಮೌಲ್ಯಗಳನ್ನು ಎತ್ತಿ ಹೇಳುತ್ತವೆ, ಭಾಷೆ, ಶೈಲಿ, ಸಂಕೀರ್ಣತೆ, ಕಲಾತ್ಮಕ ಗುಣಗಳಿಂದ ಕತೆ ಓದಿಸಿಕೊಂಡು ಹೋಗುತ್ತವೆ. ಪ್ರಸ್ತುತ ಸಮಾಜಕ್ಕೆ ಹಿಡಿದ ಕನ್ನಡಿ ಈ ಕತೆಗಳಾಗಿವೆ. ಗ್ರಾಮೀಣ ಪ್ರದೇಶಗಳ ಸಂವೇದನಾಶೀಲ ಕತೆ ಓದುಗರನ್ನು ಸೆರೆ ಹಿಡಿಯುತ್ತವೆ ಎಂದು ಬೆನ್ನುಡಿಯಲ್ಲಿ ಡಾ.ಗವಿಸಿದ್ದ ಪಾತೀಲ ಬರೆದಿದ್ದಾರೆ.

About the Author

ಗುರುನಾಥ ಅಕ್ಕಣ್ಣ
(28 December 1963)

ಗ್ರಾಮ ಕೇಂದ್ರಿತ ಕತೆಗಳನ್ನು ಕಟ್ಟುವ ಕತೆಗಾರ ಗುರುನಾಥ ಅಕ್ಕಣ್ಣನವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋರ್ಟಾ ಗ್ರಾಮದವರು.( ಜನನ: 28-12-1963). ತಂದೆ ಕಾಶಪ್ಪಾ ತಾಯಿ ಬಸಮ್ಮಾ ಅಕ್ಕಣ್ಣನವರ. ತಮ್ಮ ಪ್ರಾಥಮಿಕ ಹಾಗೂ ಹೈಸ್ಕೂಲ ಶಿಕ್ಷಣವನ್ನು ಗೋರ್ಟಾದಲ್ಲಿ ಮುಗಿಸಿ ಮುಂದೆ ಬೀದರ ಸರ್ಕಾರಿ ತಾಂತ್ರಿಕ ಶಿಕ್ಷಣಾಲಯದಿಂದ ಸಿವಿಲ್ ಇಂಜಿನೀಯರಿಂಗ್‌ನಲ್ಲಿ ಪದವಿಯನ್ನು ಪಡೆದರು. ರಾಜ್ಯ ಮಟ್ಟದಲ್ಲಿ ಒಳ್ಳೆಯ ಕಥೆಗಾರರಾಗಿ ಗುರುತಿಸಿಕೊಂಡಿದ್ದಾರೆ. 1990ರಲ್ಲಿ ‘ಯಾರನ್ನು ಪ್ರೀತಿಸ ಬೇಡ’, 1996ರಲ್ಲಿ ‘ಇದು ಎಂಥಾ ಲೋಕವಯ್ಯ' ಹಾಗೂ 2009 ರಲ್ಲಿ 'ಕಲ್ಲಣ್ಣನ ಕಾಂಪ್ಲೆಂಟ್ ಪ್ರಕರಣ ಮತ್ತು ಇತರ ಕತೆಗಳು' ಅವರ ಮೂರು ಕಥಾ ಸಂಕಲನಗಳು ಪ್ರಕಟವಾಗಿವೆ. ...

READ MORE

Related Books