ಕಥಾ ಪಯಣ

Author : ಕೇಶವ ಕುಡ್ಲ

Pages 644

₹ 454.00




Year of Publication: 2021
Published by: ಕುಕ್ಕೇಶ್ರೀ ಪ್ರಕಾಶನ
Address: #21, ಮಾಚೋನಹಳ್ಳಿ ಕಾಲೋನಿ, ವಿಶ್ವನೀದಂ ಅಂಚೆ, ಬೆಂಗಳೂರು ಉತ್ತರ ತಾಲ್ಲೂಕು 560009,
Phone: 984505248

Synopsys

`ಕಥಾ ಪಯಣ’ ಕೃತಿಯು ಕೇಶವ ಕುಡ್ಲ ಅವರ ಆಯ್ದ ಕತೆಗಳ ಸಂಕಲನವಾಗಿದೆ. ಇಲ್ಲಿನ ಪಾತ್ರಗಳು ವಿಭಿನ್ನ. ಸುಬ್ಬಯ್ಯಣ್ಣ, ಸಿದ್ಧರಾಜು, ಶಾಸ್ತ್ರಿಗಳು, ವೆಂಕಟಪತಿ, ಶ್ರೀನಿವಾಸಯ್ಯ, ವಿಠೋಬರಾಯರು ಈ ಮೊದಲಾದ ವೃದ್ಧರ ಜೊತೆಗೆ ಅಪ್ಪಾರಾಯ, ಭಾಗವತರು, ಬಾಬಣ್ಣ, ತುಕಾರಾಮ, ಜೀವನದಲ್ಲಿ ವಿಫಲರಾದವರ ಚಿತ್ರಣವಿದೆ. ಅಂಜಲಿ, ಸಿದ್ದಾರ್ಥ, ಪಾಂಡು, ಗುರುವ ಹೀಗೆ ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ನಲುಗಿದವರ ಚಿತ್ರಣವಿದೆ. ನನ್ನ ಕಥೆಗಳಲ್ಲಿ ಅಗತ್ಯಾನುಸಾರ ಸುಬ್ಬಯ್ಯಣ್ಣ, ದಲಾಲಿ ರಾಮ, ಬಾಬಣ್ಣ, ನರಸಿಂಹ, ಸೋಮಯಾಜಿ ಇತ್ಯಾದಿ ಪಾತ್ರಗಳು ಪುನಾರಾವರ್ತಿತವಾಗಿರುವಂತೆ ಕಾಣುವ ಕನಸುಗಳೂ, ಕೃಷಿ ಭೂಮಿ, ಹೊನ್ನಹೊಳೆ, ಗೌರಿಪುರ, ಪುರ ಇತ್ಯಾದಿ ಸ್ಥಳಗಳೂ ಪುನರಾವರ್ತಿತವಾಗಿದ್ದು ಇತರ ಪಾತ್ರಗಳಂತೆ ಅವೂ ಸಹಾ ಜೀವಂತ ಪಾತ್ರಗಳೇ ಆಗಿವೆ ಎಂದಿದ್ದಾರೆ ಲೇಖಕ. ಈ ಕೃತಿಯಲ್ಲಿ 50 ಕತೆಗಳಿವೆ.

About the Author

ಕೇಶವ ಕುಡ್ಲ

ಕೇಶವ ಕುಡ್ಲ ಅವರು ಮೂಲತಃ ದಕ್ಷಿಣ ಕನ್ನಡದವರು. ವಿಮಾಕಂಪೆನಿಯಲ್ಲಿ ಮೂರು ದಶಕ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಮುಖ್ಯವಾಗಿ ಕೀಟ ಲೋಕದ ಛಾಯಾಗ್ರಹಣ, ಚಾರಣ ಮತ್ತು ಬರವಣಿಗೆ ಅವರ ಪ್ರಿಯ ಹವ್ಯಾಸ. ಇದುವರೆಗೆ 112 ಕಥೆಗಳು ಮತ್ತು ಒಂದು ಕಾದಂಬರಿ ಪ್ರಕಟವಾಗಿರುತ್ತದೆ., 400ಕ್ಕೂ ಹೆಚ್ಚು ಲೇಖನಗಳು ಮತ್ತು ಅದಕ್ಕೆ ಪೂರಕವಾಗಿ ಸುಮಾರು 2000 ಛಾಯಾಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಶಸ್ತಿಗಳು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವಾರ್ಷಿಕ ಬಹುಮಾನ, ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಕೃತಿಗಳು: ಒಡಲಾಳದ ಕತೆಗಳು, ಕಥಾ ಪಯಣ’ ...

READ MORE

Related Books