'ಆರನೇ ಬೆರಳು' ಎರಡು ದಶಕಗಳ ಅವಧಿಯಲ್ಲಿ ರಚಿತಗೊಂಡ ಇಪ್ಪತ್ತು ಸಣ್ಣಕತೆಗಳನ್ನು ಒಳಗೊಂಡ ಕಥಾಸಂಕಲನ. ಆರನೇ ಬೆರಳು, ಅಗ್ನಿದಿವ್ಯ, ಪುಷ್ಪಗಂಧಿ, ಸಂಡೆ ಬಜಾರು, ಘಟ್ಟ, ಇಳಾವಂತಿ, ತೆರವು.. ಮೊದಲಾದ ವಿಭಿನ್ನ ವಸ್ತು ವಿನ್ಯಾಸಗಳ ಕಥೆಗಳು ಇಲ್ಲಿವೆ. ಸಾಮಾಜಿಕ ಕಥೆಗಳ ನಡುವೆ ಅಲ್ಲಲ್ಲಿ ಆಧುನಿಕ ಸ್ಪರ್ಶ ಪಡೆದ ಪೌರಾಣಿಕ ಕಥೆಗಳೂ ಇಣುಕಿವೆ. ಸ್ತ್ರೀ ಸಂವೇದನೆ, ಮಾನವೀಯತೆ, ಬದುಕಿನ ಮೌಲ್ಯ ಸಂಘರ್ಷ, ತಲ್ಲಣಗಳು ಇಲ್ಲಿಯ ಕಥೆಗಳಲ್ಲಿ ಚಿತ್ರಿತಗೊಂಡಿರುವುದನ್ನು ಕಾಣಬಹುದು.
ಕಾದಂಬರಿಗಾರ್ತಿಯಾದ ಆಶಾ ರಘುರವರು ಹುಟ್ಟಿದ್ದು 1979ರ ಜೂನ್ 18 ನೇ ತಾರೀಖಿನಂದು. ಬೆಂಗಳೂರಿನವರೇ ಆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉಪನ್ಯಾಸಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿರುವ ಇವರು, ಇದೀಗ ಪೂರ್ಣ ಪ್ರಮಾಣದಲ್ಲಿ ಸಾಹಿತ್ಯ ಕೃಷಿಯಲ್ಲಿಯೇ ತೊಡಗಿಸಿಕೊಂಡಿದ್ದಾರೆ. 'ಆವರ್ತ', 'ಗತ', 'ಮಾಯೆ', 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ ಪುರಾಣ ಕಥೆಗಳು', 'ಚೂಡಾಮಣಿ', 'ಕ್ಷಮಾದಾನ', 'ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು' ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಪಳಕಳ ಸೀತಾರಾಮಭಟ್ಟ ...
READ MORE