ಹಬ್ಬಿದಾ ಮಲೆ ಮಧ್ಯದೊಳಗೆ

Author : ಸಂತೆಬೆನ್ನೂರು ಫೈಜ್ನಟ್ರಾಜ್

Pages 108

₹ 100.00




Year of Publication: 2018
Published by: ರೇಷು ಪ್ರಕಾಶನ
Address: ಬ್ರಾಹ್ಮಣರ ಬೀದಿ, ಮಿನಿಟ್ಯಾಂಕ್ ಹತ್ತಿರ, ಸಂತೆಬೆನ್ನೂರು, ಚೆನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ- 577 552

Synopsys

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕಥಾಸಂಕಲನ ‘ಹಬ್ಬಿದಾ ಮಲೆ ಮಧ್ಯದೊಳಗೆ’. ಈ ಕಥಾಸಂಕಲನದಲ್ಲಿ ಒಟ್ಟು 17 ಕತೆಗಳಿವೆ.ದಿನ, ವಾರ, ಮಾಸ ಪತ್ರಿಕೆ ಗಳಲ್ಲಿ ಈಗಾಗಲೇ ಪ್ರಕಟವಾದ ಕತೆಗಳ ಸಂಕಲನ ಇದಾಗಿದೆ. ಮುಸ್ಲಿಂ ಜಗತ್ತಿನ ತಲ್ಲಣಗಳನ್ನು ಒಳಗೊಂಡ ಇಲ್ಲಿನ ಬಹುತೇಕ ಕತೆಗಳು ನಾಡಿನ ಅಪಾರ ಓದುಗರ ಗಮನ ಸೆಳೆದಿವೆ. ನಮ್ಮ ಸುತ್ತಲ ಪ್ರಪಂಚದ ಪಾತ್ರಗಳು ಇಲ್ಲಿ ಕತೆಗಳಾಗಿ ನೆಲೆ ನಿಂತಿವೆ.

About the Author

ಸಂತೆಬೆನ್ನೂರು ಫೈಜ್ನಟ್ರಾಜ್

ಗೆಳೆಯ ನಟರಾಜ್ ಅವರ ಅಕಾಲಿಕ ಮರಣ ಸೈಯದ್‌ ಫೈಜುಲ್ಲಾ ಅವರಿಗೆ ಅರಗಿಸಿಕೊಳ್ಳಲಾಗಲೇ ಇಲ್ಲ. ಮಿತ್ರ ತನ್ನೊಂದಿಗೆ ಸದಾ ಇರಬೇಕೆಂಬ ಹಂಬಲ. ಪರಿಣಾಮ ತನ್ನ ಹೆಸರಿಗೆ ಗೆಳೆಯನ ಹೆಸರನ್ನು ಸೇರಿಸಿಕೊಂಡರು. ಸಂತೆಬೆನ್ನೂರು ಫೈಜ್ನಟ್ರಾಜ್ ಎಂದು ಬದಲಾದರು.  ಬಹುಶಃ ನಾಡಿನ ಪತ್ರಿಕೆಗಳನ್ನು ನಿಯತಕಾಲಿಕಗಳನ್ನು ನಿರಂತರ ಓದುವವರಿಗೆ ಫೈಜ್ನಟ್ರಾಜ್‌ ಹೆಸರು ಚಿರಪರಿಚಿತ. ಅವರ ಹೆಸರು ನಾಡಿನ ಯಾವುದಾದರೂ ಪತ್ರಿಕೆಯಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಹಾಗೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಲೇ ಇರುವ ನಿರಂತರತೆ ಯನ್ನು ಅವರು ಕಾಯ್ದುಕೊಂಡಿದ್ದಾರೆ.  ದಾವಣಗೆರೆ ಜಿಲ್ಲೆ ಚನ್ನಗಿರಿಯ ಸಂತೆಬೆನ್ನೂರು ಗ್ರಾಮದಲ್ಲಿ ಜನನ. ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕರು. ’ಎದೆಯೊಳಗಣ ತಲ್ಲಣ’, ...

READ MORE

Related Books