ಇಳೆ ಎಂಬ ಕನಸು

Author : ಶ್ರೀಧರ ಬಳಗಾರ

Pages 124

₹ 110.00




Year of Publication: 2003
Published by: ಆನಂದಕಂದ ಗ್ರಂಥಮಾಲೆ
Address: ಬಲರಾಮ ಟೀಚರ್‍ಸ್ ಕಾಲೋನಿ ಮಲ್ಲಾಡಿಹಳ್ಳಿ -577531
Phone: 9448038396

Synopsys

‘ಇಳೆ ಎಂಬ ಕನಸು’ ಕೃತಿಯು ಶ್ರೀಧರ ಬಳಗಾರ ಅವರ ಕತಾಸಂಕಲನವಾಗಿದೆ. ಈ ಕೃತಿಯು ಸುಧಾಮ, ಅಮೃತಪಡಿ, ಮಮ್ಮಿ, ಅಂತಃಪಟ, ಶಕುನದ ಹಕ್ಕಿ, ಇಳೆ ಎಂಬ ಕನಸು, ಕಾಡಿನಲ್ಲೊಂದು ಟ್ವಿಂಕಲ್ ಸ್ಟಾರ್, ಮಹಾಮನೆ, ಕೆಳಗಿನವರು, ಪಂಚಮಿಯ ಅಜ್ಜಿ, ಆಕಾಶರಾಯ, ಜೀವಮೂಲದ ಬೇರು ಹೀಗೆ ಒಟ್ಟು 12 ಕಥೆಗಳನ್ನು ಒಳಗೊಂಡಿವೆ. 

ಕೃತಿಗೆ ಮುನ್ನುಡಿ ಬರೆದಿರುವ ಜಿ.ರಾಜಶೇಖರ ಅವರು, ‘ಜೀವಹಿಂಸೆಯೇ ಎಲ್ಲೆಡೆ ವಿಜೃಂಭಿಸುತ್ತಿರುವ ಈ ದಿನಗಳಲ್ಲಿ ಸಾಹಿತ್ಯದ ಜೀವ ಸೆಲೆಯನ್ನು ನಂಬುವುದು ದೇವರಲ್ಲಿ ಶ್ರದ್ಧೆ ಇರಿಸಿಕೊಳ್ಳುವಷ್ಟೇ ಕಷ್ಟಕರವಾಗಿ ಕಾಣುತ್ತಿದೆ. ಗುಜರಾತ್ ಹಿಂಸೆಯ ದೃಶ್ಯಗಳನ್ನು ನೋಡಿದರೆ, ಹಿಂಸೆಗೆ ತಕ್ಕ ರೂಪಕಗಳನ್ನು ಸೃಷ್ಟಿಸುವ ಶಕ್ತಿಯಾದರೂ ಭಾಷೆಗೆ ಇದೆಯೆ ಎಂಬ ಸಂದೇಹ ಕಾಡುತ್ತದೆ. ನಮ್ಮ ಕಾಲದ ಸಾಹಿತ್ಯ ಒಂದೋ ಈ ಹಿಂಸೆಗೆ ಮುಖಾಮುಖಿಯಾಗುವುದರಿಂದ ತಪ್ಪಿಸಿಕೊಳ್ಳುತ್ತಿದೆ, ಇಲ್ಲ ಹಿಂಸೆಯ ಅಗಾಧತೆಯನ್ನು ಚಿಲ್ಲರೆಗೊಳಿಸುತ್ತಿದೆ. ಇತ್ತೀಚೆಗಿನ ಕನ್ನಡ ಬರವಣಿಗೆಯಂತೂ ಯಾವ ದುರಂತವನ್ನೂ ಲಕ್ಷಕ್ಕೆ ತೆಗೆದುಕೊಳ್ಳದೆ, ಸಂವೇದನೆಯನ್ನೇ ಜಡಗೊಳಿಸುತ್ತಿರುವ ಮೂರ್ಖ ಮಾತುಗಾರಿಕೆಯಾಗಿದೆ. ಹಾಗಾಗಿ, ಒಲ್ಲದ ಮನಸ್ಸಿನಿಂದಲೇ ನಾನು ಶ್ರೀಧರ ಬಳಗಾರರ ಈ ಕತೆಗಳನ್ನು ಓದಿದ್ದು, ಆದರೆ ಕತೆಗಳನ್ನು ಓದಿದ ಮೇಲೆ ಈ ಕತೆಗಾರನ ಬಗ್ಗೆ ಕೃತಜ್ಞತೆಯ ಭಾವವೊಂದು ನನ್ನಲ್ಲಿ ಮೂಡಿತು. ಬಳಗಾರರ ಕತೆಗಳು ಮತ್ತೊಮ್ಮೆ ನನ್ನ ಊರು ಕೇರಿಗಳನ್ನು ಹೊಸಬೆಳಕಿನಲ್ಲಿ ಕಾಣುವಂತೆ ಮಾಡಿದವು. ಚೀರಾಡುವ ಪತ್ರಿಕೆಯ ತಲೆಬರಹಗಳು ನಮ್ಮ ಆತ್ಮಸಾಕ್ಷಿಗೆ ಪರ್ಯಾಯವಾಗಲಾರವು ಎಂದು ಮನವರಿಕೆ ಮಾಡಿಕೊಟ್ಟವು. ಈ ಸಂಕಲನದ ಅತ್ಯುತ್ತಮ ಕತೆ ಎಂದು ನನಗೆ ಅನ್ನಿಸಿರುವ ಅಂತಃಪಟ, ಉತ್ತರ ಕರ್ನಾಟಕದ ಕಥಾಪರಂಪರೆ ಮತ್ತು ಬಳಗಾರರ ಪ್ರತಿಭೆಯ ಬಗ್ಗೆ ನಾನು ಇದುವರೆಗೆ ಹೇಳಿದ್ದ ಮಾತುಗಳಿಗೆ ಒಳ್ಳೆಯ ಉದಾಹರಣೆ ಯಾಗಬಲ್ಲದು. ಕತೆ ಪ್ರಾರಂಭವಾಗುವುದು, ಹೇಳಿಕೊಳ್ಳುವ ವಿದ್ಯೆ, ಉದ್ಯೋಗಗಳಿಲ್ಲದ ತರುಣ ಉಮಾಪತಿ, ತನ್ನ ಊರಲ್ಲಿ ವಿವಾಹ ಮಾಹಿತಿ ಕೇಂದ್ರವೊಂದನ್ನು ಪ್ರಾರಂಭಿಸುವುದರಿಂದ, ಅವನು ಚುರುಕುಬುದ್ಧಿಯ ಹುಡುಗ. ಆದರೆ ಅವನ ಊರಲ್ಲಿ ಬರಿ ಇಷ್ಟರಿಂದಲೇ ಹೊಟ್ಟೆ ತುಂಬುವುದಿಲ್ಲ. ಜೀವನೋಪಾಯದ ಮಾರ್ಗವಾಗಿ ಅವನಿಗೆ ಹೊಳೆದದ್ದು ವಿವಾಹ ಮಾಹಿತಿ ಕೇಂದ್ರದ ಯೋಜನೆ, ಅಂತಹ ಮಹತ್ವದ ಸಂಗತಿ ಅಲ್ಲ. ನಮ್ಮ ಹೆಚ್ಚಿನ ಊರುಗಳಲ್ಲಿ ಈಗ ಇಂತಹ ಸಂಸ್ಥೆಗಳಿವೆ. ಆದರೆ, ಬಳಗಾರ ಉಮಾಪತಿಯ ಹೊಸ 'ಉದ್ಯೋಗಪರ್ವ' ವನ್ನು ಬಣ್ಣಿಸುತ್ತ ಹೋಗುವುದು ಸಂಗೀತಗಾರ ರಾಗವನ್ನು ವಿಸ್ತರಿಸಿದ ಹಾಗೆ, ಊರಲ್ಲಿ ಹೊಸತಾಗಿ ತೆರೆದ ವಿವಾಹ ಕೇಂದ್ರದ ಗಂಡು ಗೊಂದಲಿಗೆ ಚದುರಿಕೊಂಡಿದ್ದ ಗಂಡು ಹೆಣ್ಣುಗಳನ್ನು ವಧು-ವರರನ್ನಾಗಿ ಮಾಡಿ ಹತ್ತಿರ ತರುವ ವಿಧಿಯ ಚಟುವಟಿಕೆಗಳನ್ನೇ ವಿವರಿಸುತ್ತ  ಕತೆಗಾರ, ಉಮಾಪತಿಯ ಪಾತ್ರವನ್ನು ಎಲ್ಲೆಲ್ಲೋ ಮಿತಿಗಳನ್ನು ಗಮನಿಸಿ: ರೂಪಕವನ್ನಾಗಿಸುತ್ತಾರೆ. ಅಲ್ಲಿಂದ ಮುಂದೆ ಕತೆಯ ಓಟ ಅನೂಹ್ಯ ನಿಗೂಢದ ಕಡೆಗೇನೆ. ತನ್ನ ಸಮರ್ಥ ಕತೆಗ ಬಿಂಕದ ಮಗಳಿಗೆ ತಕ್ಕ ವರವನ್ನು ಹುಡುಕಹೊರಟ ಪಟವರ್ಧನರನ್ನು ಕರೆದುಕೊಂಡ ಹಾಗಿದೆ' ಎನ್ನಿಸ ಉಮಾಪತಿ, ಬೈಕಿನಲ್ಲಿ ಗಂಡಿನ ಮನೆಯ ಹಳ್ಳಿಯ ಕಡೆ ಹೊರಡುವುದು, ನಡುವೆ ದಾರಿತಪ್ಪಿ ಬಳಗಾರ ಇಂತಹ : ಕಾಡಿನಲ್ಲಿ ಅಲೆಯುವುದು, ಕಡೆಗೂ ಸಿಕ್ಕಿದ ಪಟವರ್ಧನ್‌ರ ಭಾವೀ ಅಳಿಯನ ಮನೆಯ ಹಳವಂಡ-ಇವು ನಮ್ಮನ್ನು ನಿಬ್ಬೆರಗಾಗಿಸುತ್ತವೆ’ ಎಂದಿದ್ದಾರೆ.

About the Author

ಶ್ರೀಧರ ಬಳಗಾರ

ಲೇಖಕ ಶ್ರೀಧರ ಬಳಗಾರ ಅವರ ಊರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ  ಸಮೀಪದಲ್ಲಿರುವ ಬಳಗಾರ. ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಅಧೋಮುಖ', 'ಮುಖಾಂತರ', `ಇಳೆ ಎಂಬ ಕನಸು', 'ಒಂದು ಫೋಟೋದ ನೆಗೆಟಿವ್', 'ಅಮೃತಪಡಿ' ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ  'ಕೇತಕಿಯ ಬನ', 'ಆಡುಕಳ' ಎಂಬ ಕಾದಂಬರಿಗಳು, 'ರಥ ಬೀದಿ' ಮತ್ತು 'ಕಾಲಪಲ್ಲಟ' ಅಂಕಣ ಬರಹಗಳು, ಹಾಗೇ ಕೆಲವು ಕಥೆಗಳು ಇಂಗ್ಲಿಷ್, ತಮಿಳು, ಹಿಂದಿಗೆ ಭಾಷಾಂತರಗೊಂಡಿವೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಪದವಿ ಪಠ್ಯಕ್ಕೆ (ಕನ್ನಡ) ಸೇರ್ಪಡೆಯಾಗಿವೆ. ...

READ MORE

Related Books