ಕಾಲನ ಕೈಯೊಳಗೆ

Author : ಸುಶೀಲಾ ಡೋಣೂರ

Pages 90

₹ 75.00
Published by: ಮಲೆನಾಡ ಪ್ರಕಾಶನ
Address: ಕಲಾಣ ನಗರ, 6 ನೇ ಅಡರಸ್ತೆ, ಬ್ರಾಹ್ಮಣರ ಹಾಸ್ಟೆಲ್ ಹಿಂಭಾಗ, ಜ್ಯೋತಿನಗರ, ಚಿಕ್ಕಮಗಳೂರು.

Synopsys

ಸುಶೀಲಾ ಅವರ ’ಕಾಲನ ಕೈಯೊಳಗೆ‘ ಸಂಕಲದಲ್ಲಿರುವ ಕಥೆಗಳು ಆಧುನಿಕ ಕಾಲಘಟ್ಟದ ಕತೆಗಳು. ಅಲ್ಲಿ ಬರುವ ಮಹಿಳೆಯರು ಕಾಲದ ಸಂಕ್ರಮಣವನ್ನು ಅನುಭವಿಸುತ್ತಿರುವವರು. ಅವರ ಬದುಕಲ್ಲಿ ಉಂಟಾಗುವ ಬದಲಾವಣೆ ಅವರ ಪಾಲಿಗೆ ಸಕಾರಾತ್ಮಕವಾಗಿದ್ದರೂ ಸಮಾಜದ ಪಾಲಿಗೆ ಅವು ನಕಾರಾತ್ಮಕವಾಗಿ ಕಾಣುತ್ತಿರುವ ಪರಿಸ್ಥಿತಿ. ಏಕೆಂದರೆ ಹೆಣ್ಣಿನ ಬೆಳವಣಿಗೆ, ಪ್ರಗತಿಗಳನ್ನು ಸಮಾಜ ಆತಂಕದಿಂದಲೇ ನೋಡುತ್ತಿರುತ್ತದೆ, ಮಾಡಿಕೊಂಡ ಮದುವೆಯಲ್ಲಿ ಸುಖ ಕಾಣದೆ ಅನ್ಯ ಧರ್ಮೀಯನೊಡನೆ ಬದುಕು ಕಟ್ಟಿಕೊಳ್ಳುವ ಹೆಣ್ಣಿನ ಕತೆ ಹೃದಯ ಸ್ವರ್ಶಿಯಾಗಿದೆ.ಹೆಣ್ಣಿನ ಕೆಚ್ಚು, ತಾಳ್ಮೆ, ಅಸಹಾಯಕತೆಗಳನ್ನು ಲೇಖಕಿ ವಿವರಿಸಿದ್ದಾರೆ.

 

 

About the Author

ಸುಶೀಲಾ ಡೋಣೂರ

’ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕಿ ಆಗಿರುವ ಸುಶೀಲಾ ಡೋಣೂರು ಅವರು ಅಭಿವ್ಯಕ್ತಿಗಾಗಿ ಕತೆ-ಕಾದಂಬರಿ ರಚಿಸುತ್ತಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಸುಶೀಲಾ ಅವರು ಸದ್ಯ ಬೆಂಗಳೂರು ನಿವಾಸಿ. ...

READ MORE

Related Books