ಭಾರತೀಯ ಜನಪದ ಕತೆಗಳು

Author : ಎ.ಕೆ. ರಾಮಾನುಜನ್

Pages 390

₹ 90.00




Published by: ನ್ಯಾಷನಲ್ ಬುಕ್ ಟ್ರಸ್ಟ್

Synopsys

ಹೆಸರೇ ಹೇಳುವಂತೆ ಜನರ ಬಳಕೆಯಲ್ಲಿ ಸುಪರಿಚಿತವಾದ ಮತ್ತು ಪ್ರಚಲಿತದಲ್ಲಿರುವ ಕತೆಗಳ ಗುಚ್ಛ. ಇಪ್ಪತ್ತೆರೆಡು ಭಾರತೀಯ ಭಾಷೆಗಳಿಂದಾಯ್ದ ಸಂಕಲನ. ರಾಮಾನುಜನ್ ಅವರು ಮೂಲ ಆಂಗ್ಲ ಭಾಷೆಯಲ್ಲಿ ಸಂಗ್ರಹ ಮತ್ತು ಸಂಪಾದನೆ ಮಾಡಿದ ಕತೆಗಳನ್ನು ಮಹಾಬಲೇಶ್ವರ ರಾವ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸಂಪಾದನಾ ಕಾರ್ಯದಲ್ಲಿ ರಾಮಾನುಜನ್ ಅವರು ಬಳಸಿದ ಆಕರ ಗ್ರಂಥ, ಉಲ್ಲೇಖಿಸಿದ ರೆಫರೆನ್ಸ್, ನಡೆಸಿದ ಸಂಶೋಧನೆ ಮತ್ತು ಸಾವಿರಾರು ಪುಟಗಳ ಓದುವಿಕೆಯ ಬಗ್ಗೆ ಸುಧೀರ್ಘವಾಗಿ ಮುನ್ನುಡಿಯಲ್ಲಿ ಹೇಳಿದ್ದಾರೆ. ಜೊತೆಗೆ ಇಂತಿಥದ್ದೇ ಕತೆಗಳನ್ನು ಆಯ್ದುಕೊಳ್ಳಲು ಅನುಸರಿಸಿದ ಮಾರ್ಗ ಮತ್ತು ಕಾರಣಗಳನ್ನು ಕೂಡ ನೀಡಿದ್ದಾರೆ. ಒಟ್ಟಾರೆಯಾಗಿ ಕತೆಗಳನ್ನು ಓದುವಾಗ ದಕ್ಕುವ ಆಮೋದ ರಾಮಾನುಜನ್ ಅವರು ಬರೆದಿರುವ ಮುನ್ನುಡಿ ಮತ್ತು ಟಿಪ್ಪಣಿಗಳನ್ನು ಓದುವಾಗಲೂ ಸಿಗುತ್ತದೆ, ಜೊತೆಗೆ ಅವರ ಅಧ್ಯಯನಶೀಲತೆಯ ಬಗ್ಗೆ ಗೌರವವೂ ಮೂಡುತ್ತದೆ.

About the Author

ಎ.ಕೆ. ರಾಮಾನುಜನ್
(16 March 1929 - 13 July 1993)

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಶ್ರೇಷ್ಠ ಬರಹಗಾರರೆನಿಸಿದ್ದಾರೆ. ಮಾರ್ಚ್ 16,  1929 ರಲ್ಲಿ ಮೈಸೂರಿನಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ.ಮತ್ತು ಎಂ.ಎ.ಪದವಿಯನ್ನು ಗಳಿಸಿದ ರಾಮಾನುಜನ್ ಅವರು ದಕ್ಷಿಣ ಭಾರತದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿ, 1958ರ ವರ್ಷದಲ್ಲಿ ಪುಣೆಯ ಡೆಕ್ಕನ್ ವಿಶ್ವವಿದ್ಯಾಲಯದಿಂದ ‘ಥಿಯೇಟ್ರಿಕಲ್ ಲಿಂಗ್ವಿಸ್ಟಿಕ್ಸ್’ ವಿಷಯದಲ್ಲಿ ಉನ್ನತ ಡಿಪ್ಲೋಮಾ ಪದವಿ ಪಡೆದರು. ಮುಂದಿನ ವರ್ಷದಲ್ಲಿ ಅಮೆರಿಕಕ್ಕೆ ತೆರಳಿದ ರಾಮಾನುಜನ್ 1963ರ ವರ್ಷದಲ್ಲಿ ಅಮೆರಿಕ ಇಂಡಿಯಾನ ವಿಶ್ವವಿದ್ಯಾನಿಲಯದಿಂದ ಭಾಷಾವಿಜ್ಞಾನದ ಪಿ.ಎಚ್.ಡಿ ಗೌರವವನ್ನು ಗಳಿಸಿದರು.ರಾಮಾನುಜನ್ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಹತ್ವದ ಕೊಡುಗೆಗಳನ್ನು ಕೊಡುವುದರ ಜೊತೆಗೆ ಜೊತೆಗೆ ...

READ MORE

Related Books