ನಿರುದ್ಯೋಗಕ್ಕೆ ಹೆಣವಾದ ಅಪ್ಪ

Author : ಆನಂದ ಎಸ್ ಗೊಬ್ಬಿ

Pages 140

₹ 150.00
Year of Publication: 2020
Published by: ಮಾತೋಶ್ರೀ ಪ್ರಕಾಶನ
Address: ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ, ಕಲಬುರಗಿ.

Synopsys

ಆನಂದ ಎಸ್.ಗೊಬ್ಬಿ ಅವರ ಮೊದಲ ಕೃತಿ,’ನಿರುದ್ಯೋಗಕ್ಕೆ ಹೆಣವಾದ ಅಪ್ಪ’. ಈ ಕೃತಿಗೆ ಮುನ್ನುಡಿ ಬರೆದ ಅಮರೇಶ ನುಗಡೋಣಿ ’ಕಥೆಗಳನ್ನು ಗಮನಿಸಿದಾಗ ಅದು ಉರಿಯುವ ಜನರ ಬದುಕಿನ ಘಟನೆಗಳನ್ನು ಹೇಳುತ್ತಾ ಹೊಗುತ್ತವೆ. ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಈ ಕಥೆಗಳು ಹೊಂದಿವೆ. ಪ್ರಾದೇಶಿಕತೆಯಿಂದ ಕೂಡಿದ ಆಡುಭಾಷೆ ಕಥೆಗಳಿಗೆ ಸಹಜವಾಗಿ ಒಗ್ಗಿಕೊಂಡಿದೆ. ಅಲ್ಲಿ ಬಳಸುವ ಪದಗಳು ಮತ್ತು ಬೈಗುಳಗಳು ಸಹಜವಾಗಿ ಪಾತ್ರಗಳ ಮೂಲಕ ಮೈತಾಳಿವೆ. ಒಟ್ಟಿನಲ್ಲಿ, ಇವರ ಕಥೆಗಳು ಸಮಾಜದಲ್ಲಿನ ಪ್ರತಿಬಿಂಬದಂತೆ ಚಿತ್ರಿತವಾಗಿವೆ. ಎಲ್ಲೂ ಕೂಡಾ ಊಹೆಗೆ ಅವಕಾಶವೇ ಇಲ್ಲ. ಓದುಗರು ಇದರೊಳಗೆ ಪರಕಾಯ ಪ್ರವೇಶ ಪಡೆಯುತ್ತಾರೆ’ ಎಂದು ಪ್ರಶಂಸಿಸಿದ್ದಾರೆ.

 

About the Author

ಆನಂದ ಎಸ್ ಗೊಬ್ಬಿ
(01 June 1995)

ಆನಂದ ಎಸ್ ಗೊಬ್ಬಿ ಅವರು ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಐಕೂರ ಗ್ರಾಮದವರು. (ಜನನ: 01-06-1995). ಇವರ ಚೊಚ್ಚಲ ಕಥಾ ಸಂಕಲನ  ‘ನಿರುದ್ಯೋಗಕ್ಕೆ ಹೆಣವಾದ ಅಪ್ಪ’ . ಸದ್ಯ, ಕಲಬುರಗಿಯಲ್ಲಿ ಬಿ ಇಡಿ ವಿದ್ಯಾರ್ಥಿ.  ...

READ MORE

Related Books