ರಾಬಿನ್ ಹುಡ್ ಸಾಹಸಗಳು

Author : ಎಂ.ವಿ ನಾಗರಾಜರಾವ್

Pages 136

₹ 86.00




Year of Publication: 2020
Published by: ಧೃತಿ ಪ್ರಕಾಶನ
Address: . # 191/22, ಜಿ-2, 2ನೇ ಕ್ರಾಸ್, ವಿದ್ಯಾನಗರ, ಕುರುಬರಹಳ್ಳಿ ಮುಖ್ಯರಸ್ತೆ, ಪಿ. ಅಂಡ್ ಟಿ. ಎಂಪ್ಲಾಯಿಸ್ ಕಾಲೋನಿ, ಬೆಂಗಳೂರು-86.
Phone: 9845313583

Synopsys

ರಾಬಿನ್ ಹುಡ್ ಸಾಹಸಗಳು-ಲೇಖಕ ಎಂ.ವಿ. ನಾಗರಾಜರಾವ್ ಅವರ ಸಂಗ್ರಹಾನುವಾದ ಕೃತಿ. ಆಂಗ್ಲ ಜಾನಪದ ಸಾಹಿತ್ಯದಲ್ಲಿ ಸಾಹಸಮಯ ಕಥೆಗಳಿಗೆ ರಾಬಿನ್ ಹುಡ್ ಹೆಸರು ಪ್ರಸಿದ್ಧಿ ಪಡೆದಿದೆ. ರಾಬಿನ್ ಹುಡ್ ಎಂಬ ಪಾತ್ರ ಐತಿಹಾಸಿಕವೆ ಇಲ್ಲವೇ ಕಾಲ್ಪನಿಕವೆ ಎಂದು ಸಾಕಷ್ಟು ಜಿಜ್ಞಾಸೆ ನಡೆಯುತ್ತಲೇ ಇರುವುದು ಆ ಪಾತ್ರದ ಪ್ರಭಾವದ ತೀವ್ರತೆ-ವಿಸ್ತಾರ ಹಾಗೂ ಆಳಕ್ಕೆ ಸಾಕ್ಷಿ. ರಾಬಿನ್ ಹುಡ್ ಅವರ ಕಥೆಗಳನ್ನು ಸಂಗ್ರಹಿಸಿ ಅವುಗಳನ್ನು ಸಂಕ್ಷಿಪ್ತವಾಗಿ ಭಾವಾನುವಾದ ಮಾಡಿರುವ ಲೇಖಕರು, ಆಂಗ್ಲ ಜಾನಪದ ಕ್ಷೇತ್ರದ ಪ್ರಭಾವೀ ಪಾತ್ರವನ್ನು ಪರಿಚಯಿಸಿದ್ದಾರೆ. ಧೃತಿ ಪ್ರಕಾಶನದ ‘ಮಕ್ಕಳಿಗಾಗಿ ಲೋಕ ವಿಜ್ಞಾನ ಮಾಲಿಕೆ’ಯಡಿ ಕೃತಿ ಪ್ರಕಟವಾಗಿದ್ದು, ಮಕ್ಕಳಿಗೆ ತಿಳಿಯುವಂತೆ ಸರಳ ಶೈಲಿಯಲ್ಲಿ ಬರೆದಿದ್ದಾರೆ. ,

About the Author

ಎಂ.ವಿ ನಾಗರಾಜರಾವ್

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಎಂ.ವಿ. ನಾಗರಾಜ ರಾವ್, ಸರ್ಕಾರಿ ಜೂನಿಯರ್‍ ಕಾಲೇಜಿನ ಉಪಾನ್ಯಾಸಕರು ನಂತರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಕನ್ನಡ ಹಾಗೂ ಹಿಂದಿಯಲ್ಲಿ ಎಂ.ಎ. ಹಾಗೂ ಬಿ.ಇಡಿ. ಸಾಹಿತ್ಯ ರತ್ನ ಪೂರೈಸಿದ್ದಾರೆ. ಜೇಮ್ಸ್ ಹ್ಯಾಡ್ಲಿ ಚೇಸ್ ಅವರ 20 ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ ಹೆಗ್ಗಳಿಕೆ ಇವರದ್ದು. ಹಾಸ್ಯ-ವಿಡಂಬನೆ-ವೈಚಾರಿಕತೆ ಸೇರಿದಂತೆ ಸುಮಾರು 300ಕ್ಕೂ ಅಧಿಕ ಲೇಕನಗಳನ್ನು ಬರೆದಿದ್ದಾರೆ. ಇವರ ‘ಕಂಪನ’ ಕಾದಂಬರಿಯು ಚಲನಚಿತ್ರವಾಗಿದೆ. ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. 1985ರಲ್ಲಿ ಶೃಂಗಾರ ಪ್ರಕಾಶನ ಸಂಸ್ಥೆ ಸ್ಥಾಪಿಸಿ, ಸುಮಾರು  242 ಪುಸ್ತಕಗಳನ್ನು ಪ್ರಕಟಿಸಿದ್ದು, ಕರ್ನಾಟಕ ಸರ್ಕಾರದಿಂದ ‘ಪುಸ್ತಕ ಸೊಗಸು’ ಪ್ರಶಸ್ತಿ ಪಡೆದಿದ್ದಾರೆ.  ಅನುವಾದಿತ ಕೃತಿಗಳು : ಜೇಮ್ಸ್‌ ಹ್ಯಾಡ್ಲಿ ...

READ MORE

Related Books