ಬದುಕು ಬಣ್ಣ

Author : ದೀಪಾ ಜೋಶಿ

₹ 120.00

Buy Now


Year of Publication: 2018
Published by: ಮೈತ್ರಿ ಪ್ರಕಾಶನ
Address: ಅಂಜಲಿ ದೇಸಾಯಿ, 504, 2ನೇ ಅಡ್ಡರಸ್ತೆ, 2ನೇ ಬ್ಲಾಕ್‌, ಒಂದನೇ ಸ್ಟೇಜ್‌, ಬೆಂಗಳೂರು-560050
Phone: 8317396164

Synopsys

ಜೀವನದ ವಿವಿಧ ರಂಗುಗಳನ್ನು ಪರಿಚಯಿಸುವ ಕಥಾಸಂಕಲನವಿದು. ಕೆಲ ಕತೆಗಳು ಪೌರಾಣಿಕ ಹಿನ್ನೆಲೆಯಿಂದ ಕೂಡಿದ್ದರೂ ಪ್ರಸ್ತುತ ವಾಸ್ತವಕ್ಕೆ ತಾಳೆಯಾಗುವಂತಹವು. ಲೇಖಕಿ ಸಂಸ್ಕೃತ ಪ್ರಾಧ್ಯಾಪಿಕೆಯಾಗಿ ಕೆಲಸ ಮಾಡಿದವರು. ಮುಕ್ತ ಅಂತೆಯೇ ತಾತ್ವಿಕ ನೆಲೆಗಟ್ಟಿನ ವಿಚಾರಗಳನ್ನು ಈ ಕತೆಗಳು ಪ್ರತಿಫಲಿಸುತ್ತವೆ.ಉತ್ಥಾನ ಮಾಸಿಕದ ಕಥಾಸ್ಫರ್ಧೆಯಲ್ಲಿ ಎರಡನೇಯ ಬಹುಮಾನ ಗಳಿಸಿದ ಕತೆ ಸಹ ಈ ಸಂಕಲನದಲ್ಲಿದೆ. ಲೇಖಕಿ ಬರೆದ ಅನೇಕ ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ. ಬದುಕು ಬಣ್ಣ ಈ ಕಥಾಸಂಕಲನಕ್ಕೆ ೨೦೧೮ರ ಕಸಾಪ ಕೊಡುವ ಲಕ್ಷ್ಮಿದೇವಿ ಶಾಂತರಸ ಹೆಂಬೇರಳು ದತ್ತಿ ಪ್ರಶಸ್ತಿ ದೊರೆತಿದೆ.

About the Author

ದೀಪಾ ಜೋಶಿ
(24 October 1972)

ಧಾರವಾಡದಲ್ಲಿ ಜನಿಸಿದ ಡಾ. ದೀಪಾ ಜೋಶಿ ಅವರು ಸದ್ಯ ಬೆಂಗಳೂರು ನಿವಾಸಿ. ಅನೇಕ ಖ್ಯಾತ ಮಾಸಿಕ, ಪತ್ರಿಕೆಗಳಲ್ಲಿ ನಿಯಮಿತವಾಗಿ ಲೇಖನ ಪ್ರಕಟಿಸಿದ್ದಾರೆ. ಉತ್ಠಾನ ಪತ್ರಿಕೆ ಸ್ಫರ್ಧೆಯಲ್ಲಿ ಎರಡನೇ ಬಹಿಮಾನ ಪಡೆದ ಕತೆಗಾರ್ತಿ ಅವರು. ಬದುಕು ಬಣ್ಣ ಮೊದಲ ಕಥಾ ಸಂಕಲನ. ಪ್ರಸ್ತುತ ಸಂಕಲನ ಕಸಾಪ ದತ್ತಿ ಪ್ರಶಸ್ತಿ ಗಳಿಸಿದೆ. ...

READ MORE

Related Books