ಗುಣಸಾಗರಿ ಮತ್ತು ಇತರ ಕಥೆಗಳು

Author : ಜಿ.ವಿ. ಆನಂದಮೂರ್ತಿ

Pages 104

₹ 150.00




Year of Publication: 2020
Published by: ಪ್ರೀತಿ ಪುಸ್ತಕ ಪ್ರಕಾಶನ
Address: # 103/3, 6 ನೇ ಮಹಡಿ, ಅರಸು ಅರಮನೆ, ಎಚ್‌ಬಿಸಿಎಸ್‌ ಲೇಔಟ್, 2 ನೇ ಹಂತ, ನಾಗರಬಾವಿ , ಬೆಂಗಳೂರು -560040
Phone: 9845700747

Synopsys

ಲೇಖಕ ಜಿ.ವಿ. ಆನಂದಮೂರ್ತಿ ಅವರ ಕಥಾ ಸಂಕಲನ- ಗುಣಸಾಗರಿ ಮತ್ತು ಇತರ ಕಥೆಗಳು. ಕತೆಗಾರರು ಸುಮಾರು ಹದಿನೇಳು ವರ್ಷಗಳ ಕಾಲ ಹೆಣೆದ ಹತ್ತು ಕತೆಗಳ ಸಂಕಲನ ಇದು. ಕೆಲವು ಕತೆಗಳು ಪ್ರಜಾವಾಣಿ, ಮಯೂರ ಮಾಸ ಪತ್ರಿಕೆಯಲ್ಲಿ ಪ್ರಕಟಣೆ ಕಂಡಿವೆ. ಸಾಹಿತಿ ಎಚ್.ಎಸ್. ಶಿವಪ್ರಕಾಶ್‌ ಅವರು ಕೃತಿಯ ಕುರಿತು  ‘ಈ ಕಥೆಗಳು ಆ ವಿಶಿಷ್ಟ ಉಪಸಂಸ್ಕೃತಿಯ ಹೊರಗಿನವರಿಗೆ ಮುಚ್ಚಿದ ಪುಸ್ತಕವಾಗುವುದಿಲ್ಲ. ವಿಶ್ವ ಹೃದಯದ ತಾಯಿನುಡಿಯಾದ ಮಹಾಕರುಣೆಯ ಮೂಲಕ ಕಥೆಗಾರ ಪಾತ್ರಗಳನ್ನು, ಕ್ಷೇತ್ರಗಳನ್ನು ಮುಟ್ಟಿ, ತಟ್ಟಿ, ತಡವಿ ಅವರವರ ಭಾಷೆಗಳಲ್ಲಿ ಮಾತಾಡಿಸಿದರೂ, ಅವು ನಮ್ಮೆಲ್ಲರ ಭಾಷೆಗೆ ತಂತಾವೆ ಅನುವಾದಿತಗೊಂಡು ಕಲಾಭಿವ್ಯಕ್ತಿ ಸಾಧಿಸುತ್ತದೆ. ಇದು ವರ್ತಮಾನದ ಕನ್ನಡ ಸಾಹಿತ್ಯದಲ್ಲಿ ಅಪರೂಪದ ಸಾಧನೆ;  ಎಂದು ಪ್ರಶಂಸಿಸಿದ್ದಾರೆ. 

 

About the Author

ಜಿ.ವಿ. ಆನಂದಮೂರ್ತಿ

ಡಾ. ಜಿ.ವಿ.ಆನಂದಮೂರ್ತಿ ಅವರು ಮೂಲತಃ ತುಮಕೂರು ಜಿಲ್ಲೆಯ ಬೆಳ್ಳಾವೆ ಮಜರೆ ಗ್ರಾಮದ ತಿಗಳರ ಗೊಲ್ಲಹಳ್ಳಿಯವರು.   ತುಮಕೂರು ಮತ್ತು ಬೆಂಗಳೂರಿನಲ್ಲಿ ಪದವಿವರೆಗೆ  ಶಿಕ್ಷಣ ಪಡೆದು ನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ  (2005) ರಲ್ಲಿ ಪಿಎಚ್.ಡಿ ಪಡೆದರು. ಸಾಹಿತಿ-ಲೇಖಕರಾಗಿರುವ ಅವರು (1998-2001)ರಲ್ಲಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದರು.  ಕೃತಿಗಳು: ಬುದ್ದತೋರಿದ ದಾರಿ (ಬುದ್ಧದೇವನ ಜೀವತದ ವಿವರಗಳು), ನೀರಗಂಧ (ಕವನಸಂಕಲನ), ಹೊಳೆಸಾಲು (ಜನಪದ ಕಲಾವಿದರನ್ನು ಕುರಿತ ಬರಹ), ಜಾಲಾರ ಹೂವು (ಪ್ರಬಂಧ). ಶಾಂತವೇರಿ ಗೋಪಾಲಗೌಡ ನೆನಪಿನ ಸಂಪುಟ, ಗರಿಗೆದರಿದ ನವಿಲು (ಜನಪದ ಕಲಾವಿದರ ಆತ್ಮಕಥೆಗಳ ನಿರೂಪಣೆ), ಸಾಲ ಸಂಪಿಗೆ ನೆರಳು (ಎಳೆಯರಿಗಾಗಿ ಜಾನಪದ ಹಲವು ತೋಟದ ಹೂಗಳು -ಜನಪದ ತತ್ವಪದಗಳ ...

READ MORE

Related Books