ಹೊಸತನದ ವಸ್ತುಗಳೊಂದಿಗೆ ಸೆಳೆಯುವ ಶಕ್ತಿ ಇಲ್ಲಿನ ಕತೆಗಳಿಗೆ ಇದೆ. ಪ್ರೀತಿ, ವಿಶ್ವಾಸ, ನಿಸ್ವಾರ್ಥ, ಮತಾಂಧತೆ, ಮೂಢನಂಬಿಕೆ, ಆತಂಕವಾದ, ಅಸಮಾನತೆ, ಸುನಾಮಿ ಮುಂತಾದ ವಿಷಯಗಳ ಸುತ್ತ ಗಿರಕಿ ಹೊಡೆಯುತ್ತ ಆಪ್ತತೆಯನ್ನು ಕಟ್ಟಿಕೊಡುತ್ತ ಸಂದೇಶಗಳನ್ನೂ ರವಾನಿಸುತ್ತಾರೆ ಕತೆಗಾರ್ತಿ. ‘ಕತ್ತಲೆಯಿಂದ ಬೆಳಕಿನೆಡೆಗೆ’ ಕತೆಯಲ್ಲಿ ಅಮೆರಿಕದ ಎರಡು ವಿಮಾನಗಳನ್ನು ಅಪಹರಿಸಿದ ಭಯೋತ್ಪಾದಕರ ದಾಳಿಯ ಸಂದರ್ಭವನ್ನೇ ವಸ್ತುವಾಗಿರಿಸಿಕೊಳ್ಳಲಾಗಿದೆ.
‘ಸ್ವಪ್ನ’ ತ್ರಿಕೋನ ಪ್ರೇಮ ಕತೆಯಾದರೂ ನಿರೂಪಣೆಯ ಶೈಲಿಯಿಂದಾಗಿ ನೆನಪುಳಿಯುವಂಥದ್ದು. ಮನುಷ್ಯ ಸಾಂಪ್ರದಾಯಿಕ ನಂಬಿಕೆಗಳನ್ನು ಬಿಡಲಾಗದೆ ಒದ್ದಾಡುವ ಚಿತ್ರವನ್ನು ಕಟ್ಟಿ ಕೊಡುತ್ತದೆ ‘ವಿಪರ್ಯಾಸ’ ಕತೆ. ಸಮಾಜದಲ್ಲಿ ಮಾರಿಯಾಗಿ ಬಂದ ಖಾಯಿಲೆ ಏಡ್ಸ್. ಈ ರೋಗದಿಂದ ಎಚ್ಚರಿಕೆ, ಜಾಗ್ರತೆ ಮೂಡಿಸುವ ಕತೆ ‘ಕಪಾಳಮೋಕ್ಷ’. ‘ದೂರದ ಬೆಟ್ಟ’ ಸಾಮಾಜಿಕ ಕಳಕಳಿಯನ್ನು ಹೊತ್ತಿದೆ.
ಮನುಷ್ಯನಿಗಿರುವ ಆಸೆ ಆಮಿಷಗಳು, ಹುಟ್ಟು ಸಾವು ಕುರಿತು ಚರ್ಚಿಸುತ್ತ, ನಿಸ್ವಾರ್ಥ ಭಾವಕ್ಕಿರುವ ಅನಂತತೆಯನ್ನು ಎತ್ತಿ ತೋರಿಸುವ ಕತೆ ‘ಕೆರೆಯ ನೀರನು ಕೆರೆಗೆ ಚೆಲ್ಲಿ’. ಸುನಾಮಿಯಂತಹ ಪ್ರಳಯ ಬಂದರೆ, ಜಾತಿ, ಮತ, ಪಂಥದ ತರತಮವಿಲ್ಲದೆ ನಾಶವಾಗುವ ಮನುಷ್ಯನ ಚಿತ್ರವನ್ನು ವ್ಯಂಗ್ಯ, ವಿಷಾದದಿಂದ ಕತೆಗಾರ್ತಿ ಕಟ್ಟಿಕೊಡುತ್ತಾರೆ.
ಲೇಖಕಿ, ಕಾವ್ಯಶ್ರೀ ಮಹಾಗಾಂವಕರ್ ಹುಟ್ಟೂರು ಶಿವಮೊಗ್ಗ. ಇವರು ಬರೆದಿರುವ ಕಥೆಗಳಿಗೆ ಗುಲ್ಬರ್ಗ ವಿಶ್ವವಿದ್ಯಾಯಲಯವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ಬರೆದಿರುವ ಪ್ರಮುಖ ಕಾದಂಬರಿ ಪ್ರೇಮಕಾವ್ಯ ಹಾಗೂ ಬೆಳಕಿನೆಡೆಗೆ. ಪಿಸುಮಾತುಗಳ ಜುಗಲ್, ಜೀವಜಗತ್ತಿಗೆ ಜೇನಹನಿ, ಪ್ರಳಯದಲ್ಲೊಂದು ಪ್ರಣತಿ ಅವರ ಮತ್ತಿತರ ಕೃತಿಗಳು. ...
READ MORE