ಧೈರ್ಯಂ ಸರ್ವತ್ರ ಸಾಧನಂ

Author : ಸಂತೋಷ್ ರಾವ್ ಪೆರ್ಮುಡ

Pages 260

₹ 250.00




Published by: ನಿರಂತರ
Address: #165, ನೆಲಮಹಡಿ 8ನೇ ಎ ಅಡ್ಡರಸ್ತೆ, 14ನೇ ಎ ಮುಖ್ಯರಸ್ತೆ, ಆರ್.ಪಿ.ಸಿ ಬಡಾವಣೆ, ಬೆಂಗಳೂರು-560 040
Phone: 9742884160

Synopsys

ಲೇಖಕ ಸಂತೋಷ್ ರಾವ್ ಪೆರ್ಮುಡ ಅವರ ಏಳನೇ ಕೃತಿ ಧೈರ್ಯಂ ಸರ್ವತ್ರ ಸಾಧನಂ. ಉಪನ್ಯಾಸ ವೃತ್ತಿ ತರ್ಕ ಮತ್ತು ವಿಶ್ಲೇಷಣೆಗಳ ಸಮ್ಮಿಳಿತವೇ ಈ ಕೃತಿ. ಇಲ್ಲಿ ಪ್ರಶಿಕ್ಷಣಾರ್ಥಿಗಳೊಂದಿಗೆ ಚರ್ಚಿಸಿದ, ವಿಶ್ಲೇಷಿಸಿದ, ಸ್ವ-ಅನುಭವಗಳಿಗೆ ಕಾಲ್ಪನಿಕ ಕಥೆಗಳ ರೂಪವನ್ನು ನೀಡಿ ವ್ಯಕ್ತಿತ್ವದ ಹಲವು ಆಯಾಮಗಳ ಕುರಿತು ತಿಳಿಸಲು ಲೇಖಕ ಪ್ರಯತ್ನಿಸಿದ್ದಾರೆ...ಆಧ್ಯಾತ್ಮಿಕ ಬರಹಗಾರರು ಡಾ.ಗುರುರಾಜ ಪೋಶೆಟ್ಟಿಹಳ್ಳಿ ಇವರ ವಿಸ್ತಾರವಾದ ಮುನ್ನುಡಿ ಕೃತಿಯಲ್ಲಿದೆ. ಗುರುರಾಜ ಪೋಶೆಟ್ಟಿಹಳ್ಳಿಅವರು ಹೇಳುವಂತೆ, ಉದಯೋನ್ಮುಖ ಬರಹಗಾರ ಸಂತೋಷ್ ರಾವ್ ಪೆರ್ಮುಡ ಭರವಸೆಯನ್ನು ಮೂಡಿಸುತ್ತಿರುವ ಸಾತ್ವಿಕ ಚಿಂತಕರು. ಧಾರವಾಡದ ಖಾಸಗಿ ತರಬೇತಿ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ತರಬೇತಿ ಕ್ಷೇತ್ರದಲ್ಲಿ 13 ವರ್ಷದ ಅನುಭವದೊಂದಿಗೆ ಸದಭಿರುಚಿಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಸೃಜನಶೀಲ ಲೇಖಕರು. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಬರವಣಿಗೆಗಳ ಮೂಲಕ ಕನ್ನಡ ಓದುಗ ಜಗತ್ತಿನಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾರೆ. ಇವರ ಲೇಖನಗಳು ಈಗಾಗಲೇ ನಾಡಿನ ಹತ್ತು-ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಇದೀಗ `ಧೈರ್ಯಂ ಸರ್ವತ್ರ ಸಾಧನಂ’ ಪ್ರೇರಣಾದಾಯಕ ಕಥಾಗುಚ್ಛದ ಕುರಿತು ನನ್ನ ಕೆಲವು ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿದ್ದೇನೆ. ಪ್ರಸ್ತುತ ಕೃತಿಯಲ್ಲಿ ಮಧುಕರ ವೃತ್ತಿಯ ಜೊತೆಗೆ ಸ್ವಾನುಭವವೂ ಮಿಳಿತಗೊಂಡಿದೆ. ಸ್ಫೂರ್ತಿ ಸೆಲೆಯ ಈ ಸಂಕಲನದಲ್ಲಿ ಒಟ್ಟು 66 ಲೇಖನಗಳಿದ್ದು, ಈ ಲೇಖನಗಳ ಮಾದರಿಯನ್ನು ಪರಿಶೀಲಿಸಿದರೆ ಸಾಕು ಬಹುಮುಖ ಆಸಕ್ತಿ-ಹವ್ಯಾಸವಿರುವ ಸಂತೋಷ್ ರಾವ್‌ರವರ ಓದಿನ ವಿಸ್ತರತೆ ತಿಳಿಯುತ್ತದೆ. ಕೃತಿಕಾರರಲ್ಲಿ ಸಂಗ್ರಹ ಮಾಡಿದ್ದನ್ನು ಸಂವಹನಗೊಳಿಸುವ ತಾಕತ್ತಿದೆ. ಯುವಜನತೆಯ ಅಭಿರುಚಿಗೆ ತಕ್ಕಂತೆ ಭಾಷೆಯ ಬಳಕೆ ಮಾಡಿದ್ದಾರೆ. ಇದರಲ್ಲಿ ಸದ್ಯತನದ ಶೈಲಿಯಿದೆ. ನಮ್ಮೊಳಗಿನ ಅಂತಶಕ್ತಿಯನ್ನು ಬಡಿದೆಚ್ಚರಿಸುವ ಪವರ್‌ಫುಲ್ ಕೃತಿಯ ಬರಹಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೇವಲ ಸಂವಹನ ಅಲ್ಲ ಸಾಮಾಜಿಕ ಸನ್ನಿವೇಶವನ್ನು ಆಧರಿಸಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಪ್ರೇರಣೆಯನ್ನು ಇದು ನೀಡುತ್ತದೆ. ಕೃತಿಯ ಆಂತರ್ಯದಲ್ಲಿ ಗರ್ಭಿಸಿಕೊಂಡಿರುವ ವಿಚಾರಗಳನ್ನು ಗುರುತಿಸಿ ಅದನ್ನು ನಮ್ಮೆದುರು ಮಂಡಿಸುವ ಮನೋಧರ್ಮ ಪ್ರಧಾನವಾಗಿ ಕಾಣಿಸಿಕೊಂಡಿದೆ ಎಂಇದಾರೆ.

About the Author

ಸಂತೋಷ್ ರಾವ್ ಪೆರ್ಮುಡ
(26 March 1983)

 ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಬಳಿಯ ಪೆರ್ಮುಡದ ಸಂತೋಷರಾವ್ ಎಂ.ಕಾಂ. ಪದವೀಧರರು. ಧಾರವಾಡದಲ್ಲಿ ತರಬೇತಿ ಸಂಸ್ಥೆಯೊಂದರ ಪ್ರಾಂಶುಪಾಲರು. ರಾಜ್ಯದ ವಿವಿಧ ಪತ್ರಿಕೆಗಳಿಗೆ ವಿಶೇಷವಾಗಿ ಪ್ರೇರಣಾತ್ಮಕ ಲೇಖನಗಳನ್ನು ಪ್ರಕಟಗೊಂಡಿವೆ. ವ್ಯಕ್ತಿತ್ವ ವಿಕಸನ ಮತ್ತು ಉತ್ಕೃಷ್ಟ ಜೀವನ ಶೈಲಿಗೆ ಸಂಬಂಧಿಸಿದ ಲೇಖನಗಳನ್ನು ತಮ್ಮದೇ ಆದ ಪರಿವರ್ತನಾ ಎನ್ನುವ ಪುಟದಲ್ಲಿ ಬರೆಯುತ್ತಿದ್ದಾರೆ. ಕೃತಿಗಳು : ಗೆಲುವೇ ಜೀವನದ ಸಾಕ್ಷಾತ್ಕಾರ, ಪರ್ಯಟನೆ (ಪ್ರವಾಸ ಕಥನ), ದಿಕ್ಸೂಚಿ (ವ್ಯಕ್ತಿತ್ವ ವಿಕಸನ) ಇವರ ಕೃತಿಗಳು. ...

READ MORE

Related Books