ಬದುಕು ಜಟಕಾಬಂಡಿ

Author : ಅನಂತ ಕುಣಿಗಲ್

Pages 130

₹ 140.00




Year of Publication: 2023
Published by: ಸಾಹಿತ್ಯಲೋಕ ಪಬ್ಲಿಕೇಷನ್ಸ್ಸ್
Address: # 745, 12 ನೇ ಮುಖ್ಯ ರಸ್ತೆ, 3 ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು - 560 010
Phone: 9945939436

Synopsys

ಬದುಕಿನುದ್ದಕ್ಕೂ ಕಾಡುವ ಸಂಗತಿಗಳ ಹೂರಣವನ್ನು ಯುವಲೇಖಕ ಅನಂತ ಕುಣಿಗಲ್ ಅವರ ‘ಬದುಕು ಜಟಕಾಬಂಡಿ’ ಕಥಾಸಂಕಲನಕ ಕಟ್ಟಿಕೊಡುತ್ತದೆ. ಇಲ್ಲಿನ ಎಲ್ಲಾ ಕಥೆಗಳ ಪ್ರತೀ ಪಾತ್ರ ಹಾಗೂ ಸನ್ನೀವೇಶಗಳು ಮಾತನಾಡುತ್ತವೆ. ಸಾಕವ್ವ, ಕಂಠೀ, ಸೋಮು- ಸುನೀತಾ, ಅನುಷಾ, ಜವರಾಯಿ ತಮ್ಮಣ್ಣ, ಪಾಪಣ್ಣ, ಬೋರ, ಎಲ್ಲರೂ ಪ್ರತಿಯೊಂದು ವಿಚಾರಗಳಲ್ಲಿ ಕಾಡುವುದನ್ನು ಕಾಣಬಹುದು. ಒಂದು ಹೋರಾಟದ ಕಥೆಯ ಇಳಿವಯಸ್ಸಿನ ಸಾಕವ್ವನ ಭಂಡತನ, ಬಯಲ ತೊರೆದ ಹಾಡು ಕಥೆಯ ಕಂಠಿಯ ದುರಂತ, #ಟ್ಯಾಗ್‌ ಕಥೆಯಲ್ಲಿನ ಸಾಮಾಜಿಕ ಜಾಲತಾಣದ ಯಡವಟ್ಟುಗಳು, ಭಗ್ನ ಕನಸುಗಳ ದೇಹ ದೇಗುಲ, ಮೇಟ್ಕುಳಿಯನ್ನು ಹುಡುಕಿ ಹೊರಟವನ ತಾಪತ್ರಯಗಳು, ಸರದಿಯ ತಮ್ಮಣ್ಣ ಕೊನೆ ದಿನಗಳು, ಅನಂತನ ಪ್ರೀತಿಯ ಯಾಶಿಗೊಂದು ಕ್ಷಮಾಪತ್ರ, ಕಾಡುವ ವಿಸರ್ಜನೆ, ಕೆಂಪು ಬಸ್ಸಿನ ನೀಲಿ ಸೀಟಿನ ಪ್ರಸಂಗ, ಬೆಂಗಳೂರಿಗೆ ಬಂದ ಬೋರೇಗೌಡನ ಬದುಕಿನ ಅನಿರೀಕ್ಷಿತ ತಿರುವುಗಳು ಸೇರಿದಂತೆ ಇನ್ನಿತರ ಹತ್ತು ಆಸಕ್ತಿಕರ ಪುಟ್ಟ ಕತೆಗಳು ಇಲ್ಲಿವೆ. ಎಲ್ಲವೂ ವೈವಿಧ್ಯಮಯ ವಸ್ತುಗಳಿಂದ ಕೂಡಿದ ಕಥೆಗಳಾಗಿದ್ದು, ಸರಾಗವಾಗಿ ಓದಿಸಿಕೊಂಡುಹೋಗುತ್ತವೆ. ಸಮಾಜದ ಬಗ್ಗೆ ಲೇಖಕರಿಗಿರುವ ಕಾಳಜಿ ಪುಸ್ತಕದ ಶೀರ್ಷಿಕೆಯಿಂದ ಹಿಡಿದು ಎಲ್ಲ ಕಥೆಗಳಲ್ಲೂ ಎದ್ದು ಕಾಣುತ್ತದೆ.

About the Author

ಅನಂತ ಕುಣಿಗಲ್
(20 December 1997)

ಅನಂತ (20-ಡಿಸೆಂಬರ್-1997) ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಚನಹಳ್ಳಿ ಗ್ರಾಮದವರು. ತಾಯಿ ಗೌರಮ್ಮ ಮತ್ತು ತಂದೆ ಶ್ರೀಮಾನ್ ಲೇ. ನರಸಯ್ಯ. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದ ನಂತರ ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯಲ್ಲಿ ಥಿಯೇಟರ್ ಡಿಪ್ಲೊಮಾ ತರಬೇತಿ ಮುಗಿಸಿ, ಶಿವಸಂಚಾರ ರೆಪರೇಟರಿಯಲ್ಲಿ ನಟ ಹಾಗೂ ತಂತ್ರಜ್ಞನಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಕನ್ನಡ ಕಿರುಚಿತ್ರಗಳನ್ನು ನಿರ್ಮಿಸಿ, ಶಾಲಾ ಕಾಲೇಜು ಮಕ್ಕಳಿಗೆ ಕಿರು ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಅವ್ವ ಪುಸ್ತಕಾಲಯ ಎಂಬ ಸಾಹಿತ್ಯ ಬಳಗವನ್ನು ಕಟ್ಟಿಕೊಂಡು ಸಾಹಿತ್ಯ ಸೇವೆಯಲ್ಲಿ ನಿರಂತರಾಗಿರುವ ಇವರು ಸದ್ಯ ಬೆಂಗಳೂರಿನಲ್ಲಿದ್ದುಕೊಂಡು ಕನ್ನಡ ಚಲನಚಿತ್ರಗಳಲ್ಲಿ ...

READ MORE

Related Books