ಸಿಂಧೂರಿ

Author : ಬೈರಮಂಗಲ ರಾಮೇಗೌಡ

Pages 120

₹ 95.00




Published by: ಅಂಕಿತ ಪುಸ್ತಕ
Address: 53, ಶ್ಯಾಮಸಿಂಗ್‌ ಕಾಂಪ್ಲೆಕ್ಸ್‌, ಗಾಂಧಿಬಜಾರ, ಬೆಂಗಳೂರು

Synopsys

ಬೈರಮಂಗಲ ರಾಮೇಗೌದ ಅವರ ಕತೆಗಳ ಸಂಕಲನ.  ಈ ಕತೆಗಳ ಬಗ್ಗೆ ಲೇಖಕ ಬರಗೂರು ರಾಮಚಂದ್ರಪ್ಪ ಅವರು ’ಇಲ್ಲಿರುವ ಬಹುಪಾಲು ಕತೆಗಳ ಕೇಂದ್ರದಲ್ಲಿ ಸ್ತ್ರೀ ಪಾತ್ರಗಳಿವೆ. ಆದರೆ ಕಥಾನಾಯಕ ಅದನ್ನು ನಿರೂಪಿಸುತ್ತಾನೆ. ನಿಯಂತ್ರಿಸುತ್ತಾನೆ, ವಿಸ್ತರಿಸುತ್ತಾನೆ; ಸ್ವತಃ ವಿಸ್ತಾರಗೊಳ್ಳುತ್ತಾನೆ. ಹೀಗೆ ಕತೆಗಳು ನಾಯಕನ ನೋಟದಲ್ಲಿ ಸ್ತ್ರೀಸಂಕಟಗಳ ಸಂವೇದನೆಯಲ್ಲಿ ಕೆಲವೊಮ್ಮೆ ಗೂಡಿನ ಗುಟುಕಾಗಿ, ಮತ್ತೊಮ್ಮೆ ಹಾರುವ ಹಕ್ಕಿಯಾಗಿ, ಮಗದೊಮ್ಮೆ ಕನಸಿನ ಚುಕ್ಕಿಯಾಗಿ ಕಾಣುತ್ತವೆ. ಸ್ತ್ರೀಸಂಕಟಗಳ ವಿಭಿನ್ನ ರೂಪಗಳ ಆತಂಕದ ಅಂತರಂಗಗಳು ಬಹಿರಂಗವಾಗುವ ರೀತಿಯೇ ಕತೆ ಕಟ್ಟುವ ಶೈಲಿ. ಎಲ್ಲೂ ಕ್ಲಿಷ್ಟವಾಗದ ಸರಳ, ಸುಭಗ ನುಡಿನಡಿಗೆಯಲ್ಲಿ ನಿರೂಪಿತವಾಗುವ ಕತೆಗಳು ನಿಧಾನವಾಗಿ ನಮ್ಮೊಳಗೆ ಇಳಿಉತ್ತವೆ. ನಿಧಾನವಾಗಿಯೇ ನಿರೂಪಿತಗೊಳ್ಳುತ್ತವೆ. ಆತುರದಲ್ಲಿ ಅಂತ್ಯಕ್ಕೆ ಹಾರುವ ರಭಸ ಯಾವ ಕತೆಯಲ್ಲೂ ಕಾಣುವುದಿಲ್ಲ. ಮನುಷ್ಯ ಸಂಬಂಧದ ಅನನ್ಯತೆಯನ್ನು ಅನಾವರಣಗೊಳಿಸುವ ಈ ಸಂಕಲನದ ಕತೆಗಳ ಮೌಲ್ಯ-ಮನುಷ್ಯ ಸಂಬಂಧದ ಸಮತೆಯೇ ಆಗಿದೆ’ ಎಂದು ಬರೆದಿದ್ದಾರೆ.

About the Author

ಬೈರಮಂಗಲ ರಾಮೇಗೌಡ

ಜನ್ಮಸ್ಥಳ ರಾಮನಗರ ಜಿಲ್ಲೆಯ ಬೈರಮಂಗಲ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಿAದ ಕನ್ನಡ ಎಂ.ಎ. ,ಮೈಸೂರು ವಿಶ್ವವಿದ್ಯಾನಿಲಯದಿಂದ `ಕುವೆಂಪು ಕಾವ್ಯ' ಕುರಿತ ಸಂಶೋಧನೆಗೆ ಪಿಎಚ್.ಡಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರಗಳಲ್ಲಿ 35 ವರ್ಷಗಳ ಬೋಧನಾನುಭವ.  ಕಥೆ, ಕಾದಂಬರಿ, ವಿಮರ್ಶೆ, ಸಂಶೋಧನೆ, ಅಂಕಣ ಬರಹ, ಮಕ್ಕಳ ಸಾಹಿತ್ಯ, ಸಂಪಾದನೆ, ಅಭಿನಂದನೆ ಪ್ರಕಾರಗಳಲ್ಲಿ 40ಕ್ಕೂ ಹೆಚ್ಚು ಕೃತಿಗಳ ಪ್ರಕಟಣೆ. ಸಿವಿಜಿ ಪಬ್ಲಿಕೇಷನ್ಸ್ನಿಂದ `ಕುವೆಂಪು 108 ನೇ ಜನ್ಮ ದಿನಕ್ಕೆ 108 ಕೃತಿಗಳು' ಮಾಲಿಕೆ ಮತ್ತು `ಕುವೆಂಪು ಸಾಹಿತ್ಯ' ಮಾಲಿಕೆಯ 25 ಕೃತಿಗಳ ಸಂಪಾದಕ.  ಕೆಲವು ಪ್ರಕಟಿತ ಕೃತಿಗಳು ...

READ MORE

Related Books